Ticker

6/recent/ticker-posts

Ad Code

Responsive Advertisement

2021-22ನೇ ಸಾಲಿನ ಆಯವ್ಯಯ: ಸಚಿವರು, ಶಾಸಕರು, ಮಾನ್ಯ ವಿಧಾನ ಪರಿಷತ್ ಸದಸ್ಯರುಗಳ ಜೊತೆ ಸಭೆ

2021-22ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಮಾನ್ಯ ಆಡಳಿತಗಾರರು ಶ್ರೀ ಗೌರವ್ ಗುಪ್ತಾ ಹಾಗೂ ಮಾನ್ಯ ಆಯುಕ್ತರು ಶ್ರೀ ಎನ್.ಮಂಜುನಾಥ್ ಪ್ರಸಾದ್ ರವರು ಇಂದು ಪಾಲಿಕೆ ಕೇಂದ್ರ ಕಛೇರಿ ಕೌನ್ಸಿಲ್ ಕಟ್ಟಡ ಪೌರಸಭಾಂಗಣದಲ್ಲಿ ಮಾನ್ಯ ಸಚಿವರು, ಮಾನ್ಯ ಶಾಸಕರುಗಳು ಹಾಗೂ ಮಾನ್ಯ ವಿಧಾನ ಪರಿಷತ್ ಸದಸ್ಯರುಗಳ ಜೊತೆ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲಾಯಿತು. 

ಈ ವೇಳೆ ಮಾನ್ಯ ಉಪಮುಖ್ಯಮಂತ್ರಿಗಳು ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಮಾನ್ಯ ಸಚಿವರುಗಳಾದ ಶ್ರೀ ವಿ.ಸೋಮಣ್ಣ, ಶ್ರೀ ಅರವಿಂದ ಲಿಂಬಾವಳಿ, ಮಾನ್ಯ ಶಾಸಕರುಗಳಾದ ಶ್ರೀ ಆರ್.ಮಂಜುನಾಥ್, ಶ್ರೀ ಸುರೇಶ್.ಬಿ.ಎಸ್, ಶ್ರೀ ಮುನಿರತ್ನ, ಶ್ರೀ ಕೆ.ಜೆ.ಜಾರ್ಜ್, ಶ್ರೀ ಅಖಂಡ ಶ್ರೀನಿವಾಸಮೂರ್ತಿ, ಶ್ರೀ ರಿಜ್ವಾನ್ ಹರ್ಷದ್, ಶ್ರೀ ಎನ್.ಎ.ಹ್ಯಾರಿಸ್, ಶ್ರೀ ಉದಯ್ ಬಿ ಗರುಡಾಚಾರ್, ಶ್ರೀ ಸತೀಶ್ ರೆಡ್ಡಿ, ಶ್ರೀ ಸೌಮ್ಯಾ ರೆಡ್ಡಿ, ಮಾನ್ಯ ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಕೆ.ಗೋವಿಂದ ರಾಜು, ಶ್ರೀ ಅ.ದೇವೇಗೌಡ, ಶ್ರೀ ಪಿ.ಆರ್. ರಮೇಶ್, ಶ್ರೀ ಹೆಚ್.ಎಂ.ರಮೇಶ್ ಗೌಡ, ವಿಶೇಷ ಆಯುಕ್ತರುಗಳಾದ ತುಳಸಿ ಮದ್ದಿನೇನಿ, ಡಿ.ರಂದೀಪ್,  ಬಸವರಾಜು, ಮನೋಜ್ ಜೈನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಬಿಎಂಪಿಯು ಸುಮಾರು 800 ಚದರ ಕಿ.ಮೀ ವ್ಯಾಪ್ತಿಯಲ್ಲಿದ್ದು, ನಗರದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುವುದು ಹಾಗೂ ಸುಸ್ಥಿರ ಆರ್ಥಿಕ ಪರಿಸ್ಥಿಯೊಂದಿಗೆ ಮುನ್ನಡೆಸಲು ಕ್ರಮವಹಿಸಬೇಕಿದೆ. ನಗರದ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಇರುವ 198 ವಾರ್ಡ್ ಗಳನ್ನು ಹೊಸ ಕಾಯ್ದೆಯಲ್ಲಿ 243 ವಾರ್ಡ್ ಗಳಾಗಿ ಬದಲಾಗುತ್ತಿದ್ದು, ಇನ್ನೂ ಹೆಚ್ಚು ಪ್ರದೇಶಗಳು ಸೇರ್ಪಡೆಯಾಗಲಿವೆ. ಈ ಪೈಕಿ ಪಾಲಿಕೆ  ನಗರದಲ್ಲಿ ನಾಗರೀಕರಿಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪಾಲಿಕೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡಿಸಲು ಮಾನ್ಯ ಸಚಿವರು, ಶಾಸಕರುಗಳು ಹಾಗೂ ವಿಧಾನ ಪರಿಶತ್ ಸದಸ್ಯರುಗಳ ಅಮೂಲ್ಯ ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡುವಂತೆ ಆಡಳಿತಗಾರರು ಕೋರಿದರು.

ನಗರದಲ್ಲಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು, ಸೋರಿಕೆಯಾಗುತ್ತಿರುವ ಆಸ್ತಿ ತೆರಿಗೆಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡು ಪಾಲಿಕೆಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಆದಾಯವನ್ನು ಹೆಚ್ಚಿಸಲು ಕ್ರಮವಹಿಸಬೇಕೆಂದು ಮಾನ್ಯ ಸಚಿವರು ಹಾಗೂ ಶಾಸಕರುಗಳು ತಿಳಿಸಿದರು.

ಪ್ರಮುಖ ಅಂಶಗಳು: 1. ಬಿ ಯಿಂದ ಎ ಖಾತಾ ವರ್ಗೀಕರಣ ಮಾಡಿ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವುದು.

2.  Self Assessme Scheme ಅಡಿಯಲ್ಲಿ ಸಂಗ್ರಹಿಸುವ ತೆರಿಗೆಯು ವಸ್ತುಸ್ಥಿಗೆ ಹೊಂದಾಣಿಕೆಯಾಗುತ್ತಿದೆಯೆ ಎಂಬುದನ್ನು ಪರಿಶೀಲಿಸಬೇಕು.

3. ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು.

4. ಕಸ ನಿರ್ವಹಣೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದು.

5. ಉದ್ಯಾನ, ಶಾಲೆ, ಶೌಚಾಲಯಗಳ ಸಮರ್ಪಕ ನಿರ್ವಹಣೆ ಮಾಡುವುದು.

7. ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವುದು.

8. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವುದು.

9. TDR ನೀಡುವ ಸಂಬಂಧ ಇರುವ ತೊಡಕುಗಳನ್ನು ನಿವಾರಿಸಿ  ರಸ್ತೆ ಅಗಲೀಕರಣಕ್ಕೆ ಒತ್ತು ನೀಡುವುದು.

10. ಪಾದಚಾರಿ ಮಾರ್ಗಗಳು ಒಡಾಡಲು ಸುಗಮವಾಗಿರುವ ಹಾಗೆ  ನೋಡಿಕೊಳ್ಳುವುದು.

11. 110 ಹಳ್ಳಿಗಳಲ್ಲಿ ಅಭಿವೃದ್ಧಿ ಕೈಗೊಳ್ಳುವುದು.

12. ಸುಧಾರಣಾ ಶುಲ್ಕ ಸಂಗ್ರಹಿಸಲು ಕ್ರಮವಹಿಸುವುದು.

13. ಕೆರೆಗಳನ್ನು ಅಭಿವೃದ್ಧಿಗೊಳಿಸುವುದು.

14. ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದು.

15. ಪಾಲಿಕೆ Lease Propertyಗಳಿಂದ ಬಾಕಿ ಹಣ ಸಂಗ್ರಹಿಸಲು ಕ್ರಮವಹಿಸುವುದು.

16. ರಾಜಕಾಲುವೆಗಳ ನಿರ್ವಹಣೆ ಸರಿಯಾಗಿ ಮಾಡುವುದು.

17. ಪ್ರಮುಖವಾಗಿ ವಸ್ತುಸ್ಥಿತಿ ಆಯವ್ಯಯವನ್ನು ಮಂಡಿಸಲು ಆದ್ಯತೆ ನೀಡುವುದು.

Post a Comment

0 Comments

Ad Code

Responsive Advertisement