Ticker

6/recent/ticker-posts

Ad Code

Responsive Advertisement

ಸುದಯಾ ಫೌಂಡೇಶನ್ ನೇತೃತ್ವದಲ್ಲಿ ವಿಶ್ವ ಪರಿಸರ ದಿನ - Sudaya Foundation's World Environment Day

ಸುದಯಾ ಫೌಂಡೇಶನ್  ವಿಶ್ವ ಪರಿಸರ ದಿನದ ಅಂಗವಾಗಿ ಸಾರ್ವಜನಿಕರಿಗೆ ಸಸಿ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಡಾ. ದಿವ್ಯಾ ರಂಗೇನಹಳ್ಳಿ ನೇತೃತ್ವದಲ್ಲಿ  "ಸಸಿ ವಿತರಣಾ ಕಾರ್ಯಕ್ರಮವು ಬೆಂಗಳೂರಿನ ಶಂಕರಮಠ ಸರ್ಕಲ್ ನ   ಸುತ್ತಮುತ್ತ ನಡೆಯಿತು ಈ ಕಾರ್ಯಕ್ರಮದಲ್ಲಿ, ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ,   ಹೂವಿನ ಗಿಡಗಳು ಮತ್ತು ಹಣ್ಣು-ಹಂಪಲು ಗಿಡಗಳು ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ವಿತರಿಸುವ ಮೂಲಕ, ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚಲಾಯಿತು. 








500 ಪೇರಲ ಹಣ್ಣಿನ ಗಿಡ, ಸೀತಾಫಲದ 500 ಗಿಡಗಳು, ಗುಲಾಬಿ ಹೂವಿನ 250 ಗಿಡಗಳನ್ನು ವಿತರಿಸಲಾಯಿತು.
ನಾಗರೀಕರು ಉತ್ಸಾಹದಿಂದ ಸಸಿಗಳನ್ನು ಸ್ವೀಕರಿಸಿ, ತಮ್ಮ ಮನೆಗಳಲ್ಲಿ ನೆಟ್ಟು ಪೋಷಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು . ಮಂಗಳಮುಖಿಯರು ಸೇರಿದಂತೆ , ಟ್ರಾಫಿಕ್ ಪೊಲೀಸರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು 
ಮರ ನೆಡುವಿಕೆಯ ಬಹುಮುಖ ಪ್ರಯೋಜನಗಳನ್ನು ತಿಳಿಸುತ್ತ ಅತ್ಯಂತ ಶಿಸ್ತು ಬದ್ಧವಾಗಿ, ಯಶಸ್ವಿಯಾಗಿ ಸುದಯಾ ಫೌಂಡೇಶನ್ ಕಾರ್ಯಕ್ರಮನ್ನು  ಯಶಸ್ವಿಯಾಗಿ ನೇರವೇರಿಸಿತು.
ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮತ್ತು ವಿಶ್ವ ಪರಿಸರ ದಿನಾಚರಣೆಯ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸ್ಥಳೀಯ ನಿವಾಸಿಗಳಿಗೆ ಸುದಯಾ ಫೌಂಡೇಶನ್ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.

Post a Comment

0 Comments

Ad Code

Responsive Advertisement