Ticker

6/recent/ticker-posts

Ad Code

Responsive Advertisement

ಪಾಶ್ಚಿಮಾತ್ಯ ಆಸ್ಟ್ರೇಲಿಯಾ ವಿಧಾನ ಸಭೆಯ ಸಭಾಧ್ಯಕ್ಷರೊಂದಿಗೆ ಸಭಾಧ್ಯಕ್ಷ ಯು.ಟಿ.ಖಾದರ್ ಚರ್ಚೆ

ಬೆಂಗಳೂರು, ಜೂನ್ 03 (ಕರ್ನಾಟಕ ವಾರ್ತೆ) : ಕರ್ನಾಟಕ ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ರವರೊಂದಿಗೆ ಪಾಶ್ಚಿಮಾತ್ಯ ಆಸ್ಟ್ರೇಲಿಯಾ ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಾದ MICHELLE ROBERTS, ರವರನ್ನೊಳಗೊಂಡ ಒಟ್ಟು 11 ಸದಸ್ಯರ ನಿಯೋಗವು ಜೂನ್ 3 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನ ಸಭೆಯ ಸಭಾಂಗಣದಲ್ಲಿರುವ ಚಹಾ ಕೊಠಡಿಯಲ್ಲಿ ಸಭೆ ಸೇರಿ ಸದನದ ಕಾರ್ಯವೈಖರಿ, ನಡಾವಳಿಗಳು, ನಿಯಮಾವಳಿಗಳ ಕುರಿತು ಪರಸ್ಪರ ಚರ್ಚಿಸಿದರು.

 ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ನಮ್ಮ ಸದನದ ಕಾರ್ಯವೈಖರಿ, ನಡಾವಳಿಗಳನ್ನು ವಿಸ್ತತವಾಗಿ ವಿವರಿಸಿದರು.

ಪಾಶ್ಚಿಮಾತ್ಯ ಆಸ್ಟ್ರೇಲಿಯಾ ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಾದ MICHELLE ROBERTS, ಅವರು ತಮ್ಮ ಸದನದ ಕಾರ್ಯವೈಖರಿ, ನಡಾವಳಿಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು.
 ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಸಚಿವಾಲಯದ ಅಧಿಕಾರಿಗಳು ಹಾಗೂ ಪಾಶ್ಚಿಮಾತ್ಯ ಆಸ್ಟ್ರೇಲಿಯಾ ವಿಧಾನ ಸಭೆಯ ಅಧಿಕಾರಿಗಳು ಇದ್ದರು.

Post a Comment

0 Comments

Ad Code

Responsive Advertisement