ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ಸೈಕಲ್ ಒಂದು ಅತ್ಯುತ್ತಮವಾಗಿರುವಂತಹ ಸಾಧನವಾಗಿದೆ. ಹಿಂದಿನ ದಿನದಲ್ಲಿ ಸೈಕಲ್ ಕೇವಲ ಆರೋಗ್ಯ ಅಷ್ಟೇ ಅಲ್ಲದೆ ಪರಿಸರ ಸಂರಕ್ಷಕನಾಗಿ ಕೆಲಸ ಮಾಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎ ನರೇಂದ್ರ ಕುಮಾರ್ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ವಿಶ್ವ ಬೈಸಿಕಲ್ ದಿನಾಚರಣೆಯ ಪ್ರಯುಕ್ತ ಆರೋಗ್ಯಕ್ಕಾಗಿ ಸೈಕಲ್ ಎಂಬ ಘೋಷ ವಾಕ್ಯದೊಂದಿಗೆ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಲಿನ್ಯ ರಹಿತವಾದ ಒಂದು ವಾಹನ ಇದೆ ಅಂದ್ರೆ ಅದು ಸೈಕಲ್. ಸೈಕಲ್ ಹೆಚ್ಚು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಶಾಲಾ ಕಾಲೇಜುಗಳಿಗೆ ಸುಮಾರು ಎರಡು ಮೂರು ಕಿಲೋಮೀಟರ್ ಗಳಿಂದ ಶಾಲಾ ಮಕ್ಕಳು ಸೈಕಲ್ ಗಳಿಂದಲೇ ಬರುತ್ತಾರೆ ಅವರ ದೇಹದ ಭಾಗಗಳು ಪ್ರತಿನಿತ್ಯ ಚಲಾವಣೆಯಲ್ಲಿ ಇರುವುದರಿಂದ ಅವರಿಗೆ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ ಅದೇ ರೀತಿ ಪ್ರತಿಯೊಬ್ಬರೂ ಸೈಕಲ್ ತುಳಿಯುವುದರಿಂದ ಪ್ರತಿಯೊಬ್ಬರ ಆರೋಗ್ಯವು ವೃದ್ಧಿಯಾಗುತ್ತದೆ ಎಂದರು.
ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಸೈಕಲ್ ಬಳಸುವುದರಿಂದ ವಾಯುಮಾಲಿನ್ಯ ಆಗುವುದಿಲ್ಲ ಹಾಗು ದೇಹಕ್ಕೆ ಉತ್ತಮ ಆರೋಗ್ಯ ಸಿಗುತ್ತದೆ. ನಗರದ ಸುತ್ತು ಮುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ವಿದ್ಯಾರ್ಥಿಗಳು ಸೈಕಲ್ ನಲ್ಲೇ ಬರುವುದರಿಂದ ಅವರ ಆರೋಗ್ಯ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಅದೇ ರೀತಿ 30 ವರ್ಷ ಮೇಲ್ಪಟ್ಟವರೆಲ್ಲ ಸೈಕಲ್ ಬಳಸುವಂತೆ ತಿಳಿಸಿದರು.
ನಗರದ ಶಾರದ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಸೈಕಲ್ ಅನ್ನು ತುಳಿದು ಆನಂದಪಟ್ಟರು. ಅಷ್ಟೇ ಅಲ್ಲದೆ ಸರ್ಕಾರಿ ಆಸ್ಪತ್ರೆಯ ಟಿಟಿ ನರಸಿಂಹಪ್ಪ ಅವರು ಸಹ ತನ್ನ ಮನೆಯಿಂದಲೇ ಸೈಕಲ್ ತುಳಿಯುತ್ತಾ ನೇರ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ನಂತರ ಸೈಕಲ್ ತುಳಿದುಕೊಂಡೆ ಕಚೇರಿಗೆ ತೆರಳಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಆರ್ ಶ್ರೀಕಾಂತ್ ,ಸಿಡಿಪಿಒ ನೌತಾಜ್,ಇಸಿಒ ಭಾಸ್ಕರ್ ಗೌಡ,ಬಿಸಿಎಂ ನಾರಾಯಣಪ್ಪ,ಸಮಾಜ ಕಲ್ಯಾಣ ಇಲಾಖೆ ಜಗದೀಶ್,ಡಾ.ವಿಜಯ್ ಕುಮಾರ್, ಭರತ್,ದೇವರಾಜ್ ,ಲೋಕೇಶ್,ಟಿಟಿ ನರಸಿಂಹಪ್ಪ ಹಾಗೂ ಶಿಕ್ಷಕ ವೃಂದದವರು ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

0 Comments