Ticker

6/recent/ticker-posts

Ad Code

Responsive Advertisement

ಶೈವಿಯ ನಯನ ಮನೋಹರ ಏಕವ್ಯಕ್ತಿ ನೃತ್ಯ ಪ್ರದರ್ಶನ

ಉದಯೋನ್ಮುಖ ನೃತ್ಯ ಕಲಾವಿದೆ ಕು. ಶೈವಿ ಗುರುರಾಜ್, ಅತ್ಯಂತ ಆತ್ಮವಿಶ್ವಾಸದಿಂದ ಹಸನ್ಮುಖದಿಂದ ಇತ್ತೀಚಿಗೆ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ  ಅವಳ ಏಕವ್ಯಕ್ತಿ ನೃತ್ಯ ಪ್ರದರ್ಶನವನ್ನು ಅನಾವರಣಗೊಳಿಸಿ, ರಸಿಕರ ಮನಸೂರೆಗೊಂಡಳು.  ಅವಳ ಗುರು ನಾಟ್ಯಾಚಾರ್ಯ ಶ್ರೀನಿವಾಸನ್ ರಾಜೇಂದ್ರನ್ ಅವರ ಕಲಾತ್ಮಕ ನೃತ್ಯ ಸಂಯೋಜನೆ, ಅದ್ಭುತ ನಟುವಾಂಗ ಕಲಾವಿದೆಯ ಯಶಸ್ವೀ ನರ್ತನಕ್ಕೆ  ಸಹಕಾರ ನೀಡಿತ್ತು. 



ಶೈವಿ ಅಂದು ಪ್ರಸ್ತುತಪಡಿಸಿದ ಪ್ರತಿ ಕೃತಿಗಳ ಆಯ್ಕೆಯೂ ವೈವಿಧ್ಯಪೂರ್ಣವಾಗಿದ್ದು, ನಯನ ಮನೋಹರತೆಯಿಂದ ಪರಿಣಾಮ ಬೀರಿತು.  ಸಮಾರಂಭದಲ್ಲಿ ನಾಟ್ಯಾಚಾರ್ಯ ಶ್ರೀನಿವಾಸ್ ರಾಜೇಂದ್ರನ್, ಪ್ರಶಾಂತ್ ಶಾಸ್ತ್ರಿ-ಹೇಮಾ ಪ್ರಭಾತ್, ಯಮುನಾ ಶ್ರೀನಿಧಿ ಮತ್ತು  ಪೋಷಕರಾದ ಗುರುರಾಜ್ ಗುಂಡಪ್ಪ -ಪ್ರೀತಿ ಗುರುರಾಜ್ ಉಪಸ್ಥಿತರಿದರು.

Post a Comment

0 Comments

Ad Code

Responsive Advertisement