ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ನಗರದ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜೂನ್ 1, ಶನಿವಾರ ಏರ್ಪಡಿಸಿದ್ದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ಭತ್ತದ್ ಅವರು ಹರಿದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು.
ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಶ್ರೀ ಬಿ.ಆರ್. ಪ್ರಕಾಶ್, ತಬಲಾ ವಾದನದಲ್ಲಿ ಹಾಗೂ ಶ್ರೀ ಶ್ರೀನಿವಾಸ ಕಾಖಂಡಕಿ ಸಾಥ್ ನೀಡಿದರು. ನಂತರ ಶ್ರೀ ಮಠದ ಪ್ರಧಾನ ಅರ್ಚಕರು ಕಲಾವಿದರನ್ನು ಗೌರವಿಸಿ, ಗುರುಗಳ ಪ್ರಸಾದ ವಿತರಿಸಿದರು.
ಟಿ ಟಿ ಡಿ ಹೆಚ್.ಡಿ.ಪಿ.ಪಿ.ಯ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ವಂದನಾರ್ಪಣೆ ಮಾಡಿದರು.

0 Comments