Ticker

6/recent/ticker-posts

Ad Code

Responsive Advertisement

BIG NEWS : ರೌಡೀಷೀಟರ‍್ಸ್, ರಿಯಲ್ ಎಸ್ಟೇಟ್ ದೊರೆಗಳಾಗಲೀ ಅಕ್ರಮಗಳಲ್ಲಿ ಬಾಗಿಯಾದರೆ ಎಡೆಮುರಿ...: ನೂತನ ಪೊಲೀಸ್ ಕಮೀಷನರ್ ದಯಾನಂದ್ ಎಚ್ಚರಿಕೆ

ಬೆಂಗಳೂರು : ಬೆಂಗಳೂರು ನಗರದಲ್ಲಿ ಇನ್ನು ಮುಂದೆ ರೌಡಿ ಷೀಟರ್ ಗಳಾಗಲೀ, ರಿಯಲ್ ಎಸ್ಟೇಟ್ ಮಾಫಿಯಾ ದೊರೆಗಳಾಗಲೀ ಯಾವುದೇ ರೀತಿಯ ಅಕ್ರಮಗಳಲ್ಲಿ ಬಾಗಿಯಾದದ್ದು ಕಂಡುಬ0ದರೆ ಅಂತಹವರ ಯಾವುದೇ ಮುಲಾಜಿಲ್ಲದೇ ಎಡೆಮುರಿ ಕಟ್ಟಲಾಗುವುದೆಂದು ನೂತನ ಪೋಲೀಸ ಕಮೀಷನರ್ ಬಿ ದಯಾನಂದ್ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ನೂತನ ಪೊಲೀಸ್ ಆಯುಕ್ತ ದಯಾನಂದ್ ರವರು ಪದಗ್ರಹಣ ಪಡೆದ ಮೊದಲ ದಿನವೇ ಎಚ್ಚರಿಕೆ ಸಂದೇಶ ರವಾನಿಸಿರುವುದರ ಹಿಂದೆ ಅವರ ಕಾರ್ಯವೈಖರಿಯ ಜೊತೆಗೆ ಹಾಗೂ ತಮ್ಮದೇ ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳಿಗೂ ಮತ್ತೊಂದು ರೀತಿಯ ಎಚ್ಚರಿಕೆ ತಲುಪಿಸಿದಂತಿದೆ.

ಹೌದು ! ಪೋಲೀಸು ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕ ವಲಯದಲ್ಲಿ ಅಶಾಂತಿ ಕದಡುವವರ ವಿರುದ್ಧ ಸಮರವನ್ನೆ ಸಾರುತ್ತಾ ಬಂದಿರುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿರುವಂತಹ ವಿಷಯವೇ ಸರಿ....

1994 ನೇ ಬ್ಯಾಚಿನ ಬಿ. ದಯಾನಂದ್ ರವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪ ವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕರಿಂದ ಹಿಡಿದು ಈಗ ಅಲಂಕರಿಸಿರುವ ನಗರ ಪೋಲೀಸು ಕಮೀಷನರ್ ವರೆವಿಗೂ ಅಲ್ಲದೇ 1998 ರಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಈಗಾಗಲೇ ವಿಜಯಪುರ, ಬೆಳಗಾವಿ, ಚಿತ್ರದುರ್ಗ, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಯಲ್ಲೂ ರಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಕೋಲಾರ ಜಲ್ಲೆಗೆ 2003 ಹಾಗೂ 2008 ಎರಡು ಬಾರಿ ಕಾರ್ಯನಿರ್ವಹಿಸಿರುವ ದಯಾನಂದ್ ರವರು ಅದೆಷ್ಟರ ಮಟ್ಟಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದರೆಂದರೆ ಜಿಲ್ಲೆಯಲ್ಲಿ ತಲೆ ಎತ್ತಿದ್ದ ಜೂಜು ಅಡ್ಡೆಗಳು, ಮರಳು ಮಾಫಿಯಾ ದೊರೆಗಳು ಹೇಳದೇ ಕೇಳದೇ ಮರೆಯಾಗಿ ಹೋಗಿದ್ದರು. ಇದರ ಜೊತೆಗೆ ತಮ್ಮದೇ ಇಲಾಖೆಯಲ್ಲಿದ್ದ ಒಂದಷ್ಟುಅಧಿಕಾರಿಗಳು ಸಾಹೇಬರು ಇರುವವರೆಗೂ ನಮ್ಮ ಆಟ ಏನೂ ನಡೆಯುವುದಿಲ್ಲವೆಂದು ನೆರೆಯ ಜಿಲ್ಲೆಗೆ ವರ್ಗಾವಣೆಗೊಂಡಿದ್ದೂ ಉಂಟು. 

2008 ರಲ್ಲಿ ದಯಾನಂದ್ ಸಾಹೇಬರೇ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಸಮಯದಲ್ಲಿ ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶದಲ್ಲಿ ಉಂಟಾದ ಮತೀಯ ಗಲಭೆಯೊಂದರ ಕಿಡಿಯ ಜ್ವಾಲೆ ಅದೆಷ್ಟರ ಮಟ್ಟಿಗೆ ವ್ಯಾಪಿಸಿತ್ತೆಂದರೆ ನಗರದ ಬಸ್ ನಿಲ್ದಾಣದ ಸಮೀಪ ಪೊಲೀಸು ಅಧಿಕಾರಿಯೊಬ್ಬರ ಕಣ್ಣಿಗೆ ಹಾನಿಯಾಗಿ ಆ ಅಧಿಕಾರಿಯ ಕಣ್ಣು ಸಂಪೂರ್ಣ ಹಾನಿಯಾಯಿತು.

ಆ ಸಮಯದಲ್ಲಿ ದಯಾನಂದ್ ರವರೇ ಖುದ್ದು ಫೀಲ್ಡಿಗಿಳಿದು ಲಾಠಿ ರುಳಪಿಸುತ್ತಾ ತಮ್ಮ ಸಿಬ್ಬಂಧಿಗೆ ಧೈರ್ಯ ತುಂಬುವ ಮೂಲಕ ಪರಿಸ್ಥಿತಿಯನ್ನ ಹತೋಟಿಗೆ ತಂದದ್ದು ಸಾರ್ವಜನಿಕರು ಹಾಗೆ ಇಲಾಖಾ ಸಿಬ್ಬಂದಿ ಇಂದಿಗೂ ನೆನೆಸಿಕೊಳ್ಳುತ್ತಾರೆ.

ನಂತರ ಇದೇ ಗಲಭೆಗೆ ಸಂಬ0ಧಿಸಿದ0ತೆ ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆಯೊಂದು ನಡೆದು ಆಗಿನ ಉಸ್ತುವಾರಿ ಸಚಿವರಾಗಿದ್ದ ಆಲಂಗೂರು ಶ್ರೀನಿವಾಸ್ ರವರು ಪೋಲೀಸ್ ಕಾರ್ಯವೈಖರಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರಿಂದ ತಕ್ಷಣವೇ ಎದ್ದು ನಿಂತ ದಯಾನಂದ್ ರವರು ನಮ್ಮ ಅಧಿಕಾರಿಯೊಬ್ಬರು ತಮ್ಮ ಒಂದು ಕಣ್ಣು ಕಳೆದುಕೊಂಡಿದ್ದಾರೆ ಪೋಲೀಸು ಇಲಾಖೆ ಹಾಗೂ ಸಿಬ್ಬಂಧಿಗಳ ಮೇಲೆ ಹೀಗೆ ಮಾತನಾಡುವುದು ನಿಮ್ಮ ಘನತೆಗೆ ತಕ್ಕುದ್ದಲ್ಲವೆಂದು ಏರು ಧ್ವನಿಯಲ್ಲೇ ಹೊರ ನಡೆದದ್ದು ಇಂದಿಗೂ ಪೊಲೀಸು ಸಿಬ್ಬಂದಿ ಹಾಗೂ ಸಾರ್ವಜನಿಕರು ನೆನಸಿಕೊಳ್ಳುತ್ತಾರೆ

ಏನೇ ಆಗಲೀ, ಕಾಂಗ್ರೆಸ್ ಸರ್ಕಾರವು ಒಬ್ಬ ನೇರ ನಿಷ್ಠುರ ಹಾಗೂ ಖಡಕ್ ಅಧಿಕಾರಿಯೊಬ್ಬರನ್ನ ಪೋಲೀಸು ಕಮೀಷನರ್ ಸ್ಥಾನಕ್ಕೆ ನೇಮಿಸಿರುವುದು ಹರ್ಷದಾಯಕ ವಿಚಾರವೇ ಸರಿ, ಈ ಸಂದರ್ಭದಲ್ಲಿ ವಾರ್ತಾ ಜಾಲ ಪತ್ರಿಕಾ ಸಿಬ್ಬಂದಿ ನೂತನ ಕಮೀಷನರ್ ದಯಾನಂದ್ ಅವರಿಗೆ ಶುಭವನ್ನು ಕೋರುತ್ತದೆ.

-ಸಾಯಿನಾಥ ದರ್ಗಾ

Post a Comment

0 Comments

Ad Code

Responsive Advertisement