ದಿನಾಂಕ : 31-5-2023 ರಂದು ವಿಶ್ವದಾದ್ಯಂತ 'ತಂಬಾಕು ರಹಿತ ದಿನ’ವನ್ನಾಗಿ (World No Tobacco Da ) ಆಚರಿಸಲಾಗುತ್ತಿದೆ. ಅದರ ಅಂಗವಾಗಿ ‘ಕನ್‍ಸಾರ್ಟಿಯಂ ಫಾರ್ ಟೊಬ್ಯಾಕೊ ಫ್ರೀ ಕರ್ನಾಟಕ’ (CFTFK) ವತಿಯಿಂದ ದಿನಾಂಕ. 31-5-2023 ರಂದು ಜಿಕೆವಿಕೆ ಆವರಣದಲ್ಲಿ ನಾರ್ತ್ ಬ್ಲಾಕ್ ಆಡಿಟೋರಿಯಂ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಇಲ್ಲಿ ಬೆಳಗ್ಗೆ 10-00 ಗಂಟೆಗೆ ಸಾರ್ವಜನಿಕ ಜಾಗೃತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕೃಷಿ ವಿಜ್ಞಾನಗಳ
ವಿಶ್ವವಿದ್ಯಾಲಯ, ಬೆಂಗಳೂರು ಉಪಕುಲಪತಿ ಡಾ.ಎಸ್.ವಿ.ಸುರೇಶ ರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ
ನಿಮ್ಹಾನ್ಸ್‍ನ ನಿರ್ದೇಶಕರು ಡಾ.ಪ್ರತಿಮಾ ಮೂರ್ತಿ ಆಗಮಿಸಲಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಖ್ಯಾತ
ಚಲನಚಿತ್ರ ನಿರ್ದೇಶಕರು, ‘ಇಕೋವಾಚ್’ ಸಂಸ್ಥೆಯ ನಿರ್ದೇಶಕರು, ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಶ್ರೀ
ಸುರೇಶ್ ಹೆಬ್ಳೀಕರ್ ಮಾತನಾಡಲಿದ್ದಾರೆ.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ವಿಶ್ವ ತಂಬಾಕುರಹಿತ ದಿನದ ಸಾರ್ವಜನಿಕ ಜಾಗೃತಿ ಮೂಡಿಸುವ ಈ ಸೆಮಿನಾರ್ ನಲ್ಲಿ ಭಾಗಿಯಾಗುತ್ತಿದ್ದಾರೆ.

0 Comments