Ticker

6/recent/ticker-posts

Ad Code

Responsive Advertisement

ಆತ್ಮವಿಶ್ವಾಸದಿಂದ ಕೂಡಿದ ಮನೋಬಲವೇ ಯಶಸ್ಸು ತರುವುದು : ಶ್ರೀಮತಿ ಆಶಾ ಲೋಹಿತ್

ಬೆಂಗಳೂರು : ಯಶವಂತಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಗೇರಿ ಉಪನಗರದ ಜ್ಞಾನಭಾರತಿ ಬಡಾವಣೆಯ ಮೊದಲನೇ ಹಂತದಲ್ಲಿರುವ  ಸಮೃದ್ಧಿ ಸ್ವಸಹಾಯ ಸಂಘದ ವಾರ್ಷಿಕ ವರದಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. 



ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಘದ ಪದಾಧಿಕಾರಿಗಳು, ಶ್ರೀಮತಿ ಆಶಾ ಲೋಹಿತ್ ಅವರು ಸಮೃದ್ಧಿ ಸ್ವಸಹಾಯ ಸಂಘವನ್ನು ನೋಂದಣಿ ಮಾಡಿಸಲು ನೀಡಿದ ಮಾರ್ಗದರ್ಶನ ಹಾಗೂ ಸಹಕಾರವನ್ನು ಸ್ಮರಿಸಿ ಸಂಘದ ಎಲ್ಲ ಸದ್ಯಸರು ಅಭಿನಂದನೆ ಸಲ್ಲಿಸುವುದರೊಂದಿಗೆ, ಸಂಘದ ಯಶಸ್ಸಿನಲ್ಲಿ  ಪ್ರಮುಖ ಪಾತ್ರವನ್ನು ವಹಿಸಿದ ಸಮಾಜ ಸೇವಕರಾದ ಶ್ರೀಮತಿ ಆಶಾ ಲೋಹಿತ್ ಹಾಗೂ ಅವರೊಂದಿಗೆ ಶ್ರೀಮತಿ ಶೇಷಾಂಭಾರವರಿಗೆ ಇದೇ ವೇಳೆ ಸಂಘದ ವತಿಯಿಂದ   ಹೃತ್ಪೂರ್ವಕವಾಗಿ ಸನ್ಮಾನಿಸಿ, ಗೌರವಿಸಿದರು. 

ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ  ಆಶಾ ಲೋಹಿತ್ ಅವರು ಸಂಘದ ಎಲ್ಲಾ ಸದಸ್ಯರ ನಡುವೆ ಇರುವ ಹೊಂದಣಿಕೆ ಹಾಗೂ ಸುಮಾರು 20 ವರ್ಷಗಳ ಒಡನಾಟದ ಜೊತೆಗೆ, ಎಲ್ಲರೂ ಒಗ್ಗೂಡಿಕೊಂಡು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೂ ಹೆಚ್ಚಿನ ಮಹತ್ವವನ್ನು  ನೀಡದೆ, ಸದಸ್ಯರೆಲ್ಲರೂ ಒಬ್ಬರಿಗೊಬ್ಬರು  ಅನುಸರಿಸಿಕೊಂಡು ಜೊತೆ ಜೊತೆಯಾಗಿ ಮುಂದೆಜ್ಜೆ ಇಡುತ್ತಾ ಪ್ರಗತಿಯ ಪಥದಲ್ಲಿ ಸಾಗಲು ಸಂಘದ ಪ್ರತಿ ಸದಸ್ಯರಲ್ಲಿರುವ  ಸಮನ್ವಯ ಗುಣದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದರೊಂದಿಗೆ, ಯಶಸ್ಸು ಎಂದರೆ ಏನು ಎಂಬುದನ್ನು ಬಹಳ ಸರಳವಾಗಿ ಈ ರೀತಿ ವಿವರಿಸಿದರು "ಯಶಸ್ಸು ಸಿಗುತ್ತೋ ಇಲ್ವೋ ಯಾರಿಗೂ ಗೊತ್ತಿರುವುದಿಲ್ಲ, 

ಆದರೆ  ನಮ್ಮ ಪ್ರಯತ್ನವನ್ನು ಮಾತ್ರ ನಾವು ಎಂದಿಗೂ ಬಿಡದೆ ಆತ್ಮವಿಶ್ವಾಸ ಹಾಗೂ ಮನೋಬಲದಿಂದ  ಮುಂದುವರಿಸಬೇಕು ಅದುವೇ ಯಶಸ್ಸಿನ ಸೂತ್ರ. ಗೆದ್ರೆ ನಮ್ಮ ಕನಸುಗಳು ನನಸಾಗುತ್ತೆ, ಇಲ್ಲದಿದ್ರೆ ಸಫಲವಾಗದಿರಲು ಕಾರಣವೇನೆಂಬುದರ ಬಗ್ಗೆ ಚಿಂತನೆ ನಡೆಸಿ, ಪುನಃ ಆ ನಮ್ಮ ಪ್ರಯತ್ನದಲ್ಲಿ ಅಗತ್ಯ ಸಿದ್ಧತೆಗಳೊಂದಿಗೆ ಮೊದಲಿಂದ ಶುರು ಮಾಡಿದಾಗ, ಯಶಸ್ಸು ಕೈಗೂಡುತ್ತದೆ" ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಈ ಕಾರ್ಯಕ್ರಮದಲ್ಲಿ ತಮ್ಮ ಸೇವೆಯನ್ನು ಪರಿಗಣಿಸಿ ಕೃತಜ್ಞತಾಪೂರ್ವಕವಾಗಿ ಸತ್ಕರಿಸಿದ  ಶ್ರೀಮತಿ ರಜನಿ,  ಶ್ರೀಮತಿ ಕಲಾ ರಾಮಪ್ಪ,  ಶ್ರೀಮತಿ ಸೆಲ್ವಿ ತಮರಸ್,  ಶ್ರೀಮತಿ ರತ್ನ, ಶ್ರೀಮತಿ ಗೀತಾ, ಶ್ರೀಮತಿ ರೇಖಾ ದೇಶಪಾಂಡೆ ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರಿಗೂ ಶ್ರೀಮತಿ ಆಶಾ ಲೋಹಿತ್ ತುಂಬು ಹೃದಯದ ಅಭಿನಂದನೆಗಳನ್ನು   ಸಲ್ಲಿಸಿದರು.

Post a Comment

0 Comments

Ad Code

Responsive Advertisement