ವರದಿ ಮಧು ದೇವನಹಳ್ಳಿ...
ವಾರ್ತಾ ಜಾಲ ದೇವನಹಳ್ಳಿ: ವಿಜಯಪುರ ಪಟ್ಟಣದ ಯಲುವಳ್ಳಿ ರಸ್ತೆಯ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ 48 ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ ಹಾಗೂ ಗಿರಿಜಾ ಕಲ್ಯಾಣೋತ್ಸವವು ಅದ್ದೂರಿಯಾಗಿ ನಡೆಯಿತು.
ಈ ಪೂಜಾ ಕಾರ್ಯಕ್ರಮದ ಪ್ರಯುಕ್ತ ದೇವಾಲಯವನ್ನು ವಿವಿಧ ಬಗ್ಗೆಯ ಪುಷ್ವಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವಾಲಯದ ಹೊರ ಭಾಗದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬಂದಂತಹ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಪೂಜಾ ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ರಾಜೇಶ್ವರಿ ಭಾಸ್ಕರ್ ಭಾಗವಹಿಸಿ ಮಾತನಾಡಿ, ವಿಜಯಪುರ ಪಟ್ಟಣಕ್ಕೆ ತನ್ನದೇ ಆದ ಇತಿಹಾಸವಿದ್ದು, ಈ ಪಟ್ಟಣದಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪಟ್ಟಣವು ಒಂದು ಧಾರ್ಮಿಕ ಕೇಂದ್ರವಾಗಿದ್ದು, ಇಲ್ಲಿ ಇಂದು ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಇದು ಸರ್ವರಿಗೂ, ಸರ್ವ ಜನಾಂಗಕ್ಕೂ ಒಳ್ಳೆಯದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಧಾರ್ಮಿಕ ಚಿಂತಕ ರಾಮಮೂರ್ತಿ ಮಾತನಾಡಿ, ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ 48 ದಿನಗಳಿಂದ ಪೂಜಾ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿದ್ದು, ಇಂದು ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯದ ಸಂಚಾಲಕರಾದ ಸುಮಂತ, ಧಾರ್ಮಿಕ ಚಿಂತಕಿ ಪದ್ಮಾವತಮ್ಮ, ಮಂಜುಳಮ್ಮ, ಪುನೀತ್ ಕುಮಾರ್, ಸಂಪತ್ ಕುಮಾರ್, ಮೇಘಾ, ಸಂದೀಪ್, ತೇಜಸ್‌ಶರ್ಮ, ಸ್ವರೂಪ್, ಕವಿತಾ, ರಾಘವೇಂದ್ರ, ಗಣಪತಿ ರಾಜಣ್ಣ ಕುಟುಂಬದರು, ಪುರೋಹಿತರಾದ ಮುರುಳಿ ಶರ್ಮ, ನರಸಿಂಹಮೂರ್ತಿ, ನಾಗೇಶ್ ಇತರರು ಭಾಗವಹಿಸಿದ್ದರು.

0 Comments