Ticker

6/recent/ticker-posts

Ad Code

Responsive Advertisement

ಬ್ರಿಜ್ ಭೂಷಣ್ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಿ, ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸಿ-ನಾಗೇಶ್ ಒತ್ತಾಯ

ಲೋಕಸಭಾ ಸದಸ್ಯರು, ಭಾರತೀಯ ಕುಸ್ತಿ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್ ಭೂಷಣ್ ವಿರುದ್ದ ಮಹಿಳಾ ಕ್ರೀಡಾಪಟುಗಳ ಲೈಂಗಿಕ ಕಿರುಕುಳ ಆರೋಪ.

ಅಖಿಲ ಕರ್ನಾಟಕ ಕ್ರೀಡಾಪಟುಗಳು ಸಂಘದ ಅಧ್ಯಕ್ಷರಾದ ನಾಗೇಶ್ ರವರು ಮಾತನಾಡಿ, ನಮ್ಮ ದೇಶದ ಮಹಿಳಾ ಕ್ರೀಡಾಪಟುಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. 7ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳು ಬ್ರಿಜ್ ಭೂಷಣ್ ರವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದರು.

ಅದರೆ ಅವರ ಮೇಲೆ ಸೂಕ್ತ ತನಿಖೆ ಮಾಡಲು ನ್ಯಾಯಲಯದಿಂದ ಆದೇಶ ತರಬೇಕಾಯಿತು ಮತ್ತು ಬ್ರಿಜ್ ಭೂಷಣ್ ರವರನ್ನು ಬಂಧಿಸಲು ಮೀನಮೇಷ ಏಣಿಸುತ್ತಿದೆ ಕೇಂದ್ರ ಸರ್ಕಾರ.

ದೆಹಲಿ ಜಂತರ್ ಮಂಥರ್ ಅಂತರಾಷ್ಟ್ರಿಯ ಕುಸ್ತಿ ಪಟುಗಳಾದ ಸಾಕ್ಷಿ ಮಲ್ಲಿಕ್, ವಿನೀಶಾ ಪೋಗಟ್ ಹಲವಾರು ಕ್ರೀಡಾ ಪಟುಗಳು ಸತತವಾಗಿ ಹೋರಾಟ ಮಾಡುತ್ತಿದೆ.

ಪಾರ್ಲಿಮೆಂಟ್ ಮುತ್ತಿಗೆ ಪ್ರತಿಭಟನೆಯಲ್ಲಿ ಪೊಲೀಸ್ ರವರಿಂದ ಕ್ರೀಡಾ ಪಟುಗಳ ಮೇಲೆ ಹಲ್ಲೆಯಾಗಿದೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅರೋಪಿಯಾದ ಬ್ರಿಜ್ ಭೂಷಣ್ ರವರನ್ನು ಬಂಧಿಸಬೇಕು ಎಂದು ನಮ್ಮ ಸಂಘದಿಂದ ಒತ್ತಾಯ ಹಾಗೂ ಕುಸ್ತಿ ಪಟುಗಳ ಹೋರಾಟಕ್ಕೆ ನಮ್ಮ ಬೆಂಬಲ ಎಂದು ಹೇಳಿದರು.

Post a Comment

0 Comments

Ad Code

Responsive Advertisement