ಜಮೀರ್ ಅಹ್ಮದ್ ಖಾನ್ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನವನ್ನ ಸ್ವೀಕರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಮಾಸುವ ಮುನ್ನವೇ ಇನ್ನೊಬ್ಬ ಸಚಿವ ರಹೀಂ ಖಾನ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ಸ್ವೀಕರಿಸಿರುವುದು ನಾಚಿಗೇಡಿನ ಸಂಗತಿ.

ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದ ಸಚಿವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ದೊಡ್ಡ ವ್ಯಂಗ್ಯವಾಗಿದೆ. ಸಚಿವರ ನಡೆ ಭಾಷಾವರು ಪ್ರಾಂತಕ್ಕೆ ಮಾಡಿದ ಅಪಚಾರವಾಗಿದೆ.
ಕರ್ನಾಟಕದ ಅಧಿಕೃತಭಾಷೆ ಕನ್ನಡವನ್ನು ಕಡೆಗಣಿಸಿದ ರಹೀಂ ಖಾನ್ ಅವರ ಈ ನಡೆಯನ್ನು ಕನ್ನಡಕ್ಕೆಸಗಿದ ದ್ರೋಹ ಎಂದು ಕನ್ನಡ ಗೆಳೆಯರ ಬಳಗವು ಭಾವಿಸುತ್ತದೆ. ಈ ಕನ್ನಡ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ. ಕನ್ನಡದ ಅಸ್ಮಿತೆಯನ್ನು ಕಾಪಾಡಲು ಬದ್ದ ಎಂದು ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್‌ನ ಸಚಿವರಿಬ್ಬರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಆಘಾತಕಾರಿ ನಡೆಯಾಗಿದೆ. ಈ ಸಚಿವರಿಂದ ಕನ್ನಡ ಹಿತ ರಕ್ಷಣೆ ನಿರೀಕ್ಷಿಸುವದು ಸಾಧ್ಯವೇ? ಎಂಬ ಅನುಮಾನ ಬರುತ್ತದೆ. ವೈಯಕ್ತಿಕವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕನ್ನಡ ಬದ್ಧತೆ, ಪೃತಿ ಪ್ರಶ್ನಾತೀತವಾದದ್ದು. ಆದರೆ, ಅವರ ಸಂಪುಟದ ಸಚಿವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕನ್ನಡಿಗರ ಭಾವನೆ ಧಕ್ಕೆ ತಂದಿದೆ. ಇನ್ನು ಮುಂದೆ ಕನ್ನಡಕ್ಕೆ ಸಚಿವರಿಂದ ಕನ್ನಡಕ್ಕೆ ಅಪಚಾರವಾಗದಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳಲ್ಲಿ ಕನ್ನಡ ಗೆಳೆಯರ ಬಳಗವು ಮನವಿ ಮಾಡುತ್ತದೆ.
0 Comments