Ticker

6/recent/ticker-posts

Ad Code

Responsive Advertisement

ರಾಜ್ಯದ ಜನತೆಗೆ ಸದ್ಯಕ್ಕೆ ಸಿಗೋದಿಲ್ವಾ ಅನ್ನಭಾಗ್ಯ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ಚರ್ಚೆ ನಡೆಸಲು ಸಭೆ ಮಾಡಿದ್ದರು. ಅನ್ನಭಾಗ್ಯ ಜಾರಿ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿವಂತೆ 10 ಕೆಜಿ ಅಕ್ಕಿಯನ್ನು ಯಾವ ರೀತಿ ಕೊಡಬಹುದು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಹಿಂದೆ ಇದ್ದ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದ್ದರು, ಈಗ ನಾವು 10 ಕೆಜಿ ಕೊಡಬೇಕು ಎಂದರೆ ಡಬಲ್ ಆಗುತ್ತೆ. ಆದ್ದರಿಂದ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು, ಕೊಟ್ಟ ಮಾತಿನಂತೆ ಹಕ್ಕಿ ಕೊಡಲು ತಯಾರಿ ನಡೆಸಿದ್ದೇವೆ. 10 ಕೆಜಿ ಅಕ್ಕಿ ಕೊಡುವುದು ಖಚಿತ, ಆದರೆ ಯಾವ ದಿನಾಂಕದಿAದ ಕೊಡುತ್ತೇವೆ ಅಂತ ಸಿಎಂ ಅವರು ನಿಗದಿ ಮಾಡುತ್ತಾರೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.“ನೆನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಚ್.ಮುನಿಯಪ್ಪ ಅವರು, ಮಂತ್ರಿಯಾದ ಮೇಲೆ ಮೊದಲ ಬಾರಿಗೆ ಸಭೆ ಮಾಡಿದ್ದೇನೆ. 10 ಕೆಜಿ ಅಕ್ಕಿ ಯಾವ ರೀತಿಯಲ್ಲಿ ಕೊಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಹೆಚ್ಚುವರಿ ಆರ್ಥಿಕ ಹೊಡೆತ ಇಲಾಖೆಗೆ ಬರುತ್ತೆ, ಇದನ್ನು ಹೇಗೆ ಸರಿದೂಗಿಸಬೇಕು. ಇದರ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ.

ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುವ ವಿಶ್ವಾಸ ಇದೆ. ಪ್ರತಿ ಕೆಜಿಗೆ 34 ರೂಪಾಯಿ ಖರ್ಚು ಆಗಲಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ. ಈಗ ಕೇಂದ್ರ ಸರ್ಕಾರ ಈ ಬೆಲೆಗೆ ಕೊಡುತ್ತಿದೆ. ಟ್ರಾನ್ಸ್ಪೋರ್ಟ್ ಗೆ 3.70 ರೂಪಾಯಿ ಬೇಕಾಗುತ್ತೆ. ಅಕ್ಕಿ ಎಷ್ಟು ಬೇಕು? ಯಾವ ದಿನಾಂಕದಿ0ದ ಜಾರಿ ಎಂಬುದನ್ನ ಸಿಎಂ ಹೇಳುತ್ತಾರೆ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡದಿದ್ದರೆ ಟೆಂಡರ್ ಕರೆಯಯತ್ತೇವೆ. ಪ್ರತಿ ತಿಂಗಳು 2 ಲಕ್ಷ 18 ಸಾವಿರ ಮೆಟ್ರಿಕ್ ಟನ್ ಅಕ್ಕಿ ಖರೀದಿ ಮಾಡಬೇಕು. 42 ಕೋಟಿ ರೂಪಾಯಿ ಪ್ರತಿ ತಿಂಗಳು ಅಕ್ಕಿ ಖರೀದಿಗೆ ಹಣ ಬೇಕಾಗುತ್ತೆ ಎಂದು ತಿಳಿಸಿದರು. ರಾಜ್ಯದಲ್ಲಿ ಇರುವ ಒಟ್ಟು ಎಪಿಎಲ್ , ಬಿಪಿಎಲ್ ಕಾರ್ಡ್ (ಕೇಂದ್ರ ಮತ್ತು ರಾಜ್ಯದ ಒಟ್ಟು ಕಾರ್ಡ್ ಗಳ ಸಂಖ್ಯೆ). ಒಟ್ಟು ಕಾರ್ಡ್ ಗಳು - 1,31,70,600. ಒಟ್ಟು ಫಲಾನುಭವಿಗಳು- 4,36,97,568. ಈಗ ಇದಕ್ಕೆ ಕೊಡ್ತಿರೋ ಒಟ್ಟು ಅಕ್ಕಿ- 2,18,487.84 ಮೆಟ್ರಿಕ್ ಟನ್ . ಒಟ್ಟು ಹಣ ಪ್ರತಿ ತಿಂಗಳಿಗೆ- 742.86 ಕೋಟಿ ರೂಪಾಯಿ. ವಾರ್ಷಿಕ ಹಣ - 8914.32 ಕೋಟಿ ರೂಪಾಯಿ.

Post a Comment

0 Comments

Ad Code

Responsive Advertisement