Ticker

6/recent/ticker-posts

Ad Code

Responsive Advertisement

ಶ್ರೀ ಶ್ರೀಪಾದರಾಜರ ಆರಾಧನೆ ಮತ್ತು ಶ್ರೀಯೋಗನರಸಿಂಹ ದೇವರ ರಥೋತ್ಸವ ಅಹ್ವಾನ ಪತ್ರಿಕೆ ಶ್ರೀಗಳಿಂದ ಬಿಡುಗಡೆ









ಬೆಂಗಳೂರು :ಶ್ರೀ ಶ್ರೀಪಾದರಾಜರ ಆರಾಧನೆ ಮತ್ತು ಶ್ರೀಯೋಗನರಸಿಂಹ ದೇವರ ರಥೋತ್ಸವ ಅಹ್ವಾನ ಪತ್ರಿಕೆಯನ್ನು ಮುಳಬಾಗಿಲು ಶ್ರೀಪಾದರಾಜಮಠದ ಶ್ರೀ ಸುಜಯನಿಧಿ ತೀರ್ಥರು ಬಿಡುಗಡೆ ಮಾಡಿದರು.

ನಂತರ ಸಾಂಕೇತಿಕವಾಗಿ ಉಪಸ್ಥಿರಿದ್ದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಧ್ಯಕ್ಷ ಮುರಳೀಧರ ಮತ್ತು ಸಂಘಟನಾ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್ ಅವರಿಗೆ ನೀಡಿ ರಥೋತ್ಸವ ಮತ್ತು ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಯೋಗನರಸಿಂಹ ಸ್ವಾಮಿಯ ಮತ್ತು ಶ್ರೀಪಾದರಾಜರ ಸೇವೆಯನ್ನು ಮಾಡಿ ಯಶಸ್ವಿಗೊಳಿಸಲು ಸಹಕರಿಸುವಂತೆ ಅವರು ತಿಳಿಸಿದರು,

ಜೂ-2ರಿಂದ 4 ರ ವರೆಗೆ ಆರಾಧನಾ ಮಹೋತ್ಸವ ನಡೆಯಲಿದ್ದು

ಶ್ರೀ ಶೋಭನಕೃತ್ ನಾಮ ಸಂವತ್ಸರ ಜೇಷ್ಠ ಶುದ್ಧ ತ್ರಯೋದಶಿ ಶುಕ್ರವಾರ (2-6-23)ಬೆಳಿಗ್ಗೆ 7-00ರಿಂದ 8-30ರವರೆಗೆ ಸಂಸ್ಥಾನ ಪೂಜೆ,8-30ಕ್ಕೆ ಶ್ರೀಪಾದರಾಜರ ಬೃಂದಾವನ ಕ್ಕೆ ಪಂಚಾಮೃತ ಅಭಿಷೇಕ,10-30ಕ್ಕೆ ಉದ್ಘಾಟನೆ ಮತ್ತು ಶ್ರೀಸ್ವರ್ಣವರ್ಣ ತೀರ್ಥ ವಿದ್ವತ್ ಸಭೆ, ಮದ್ಯಾಹ್ನ 1-00ಕ್ಕೆ ತೀರ್ಥ ಪ್ರಸಾದ,

ಸಂಜೆ 6-00ರಿಂದ 7-30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು,7-30ಕ್ಕೆ ಪ್ರಕಾರರೊತ್ಸವ ಹಾಗೂ ಮಹಾಮಂಗಳಾರತಿ.

ಶ್ರೀ ಶೋಭನಕೃತ್ ನಾಮ ಸಂವತ್ಸರ ಜೇಷ್ಠ ಶುದ್ಧ ಚತುರ್ದಶಿ  ಶನಿವಾರ (3-6-23)ಬೆಳಿಗ್ಗೆ 7-00ರಿಂದ 8-30ರವರೆಗೆ ಸಂಸ್ಥಾನ ಪೂಜೆ,8-30ಕ್ಕೆ ಶ್ರೀಪಾದರಾಜರ ಬೃಂದಾವನ ಮತ್ತು ಯೋಗನರಸಿಂಹ ದೇವರಿಗೆ  ಪಂಚಾಮೃತ ಅಭಿಷೇಕ,10-30ಕ್ಕೆ ಶ್ರೀಸ್ವರ್ಣವರ್ಣ ತೀರ್ಥ ವಿದ್ವತ್ ಸಭೆ ಮತ್ತು ಸರ್ವಮೂಲ ಪಾರಾಯಣ,

11-00ಕ್ಕೆ *ರಥೋತ್ಸವ* ಮದ್ಯಾಹ್ನ 1-00ಕ್ಕೆ ತೀರ್ಥ ಪ್ರಸಾದ,

ಸಂಜೆ 6-00ರಿಂದ 7-30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು,7-30ಕ್ಕೆ ಪ್ರಕಾರರೊತ್ಸವ ಹಾಗೂ ಮಹಾಮಂಗಳಾರತಿ.

ಶ್ರೀ ಶೋಭನಕೃತ್ ನಾಮ ಸಂವತ್ಸರ ಜೇಷ್ಠ ಶುದ್ಧ ಪೌರ್ಣಮಿ  ಭಾನುವಾರ  (4-6-23)ಬೆಳಿಗ್ಗೆ 7-00ರಿಂದ 8-30ರವರೆಗೆ ಸಂಸ್ಥಾನ ಪೂಜೆ,8-30ಕ್ಕೆ ಶ್ರೀಪಾದರಾಜರ ಬೃಂದಾವನ ಮತ್ತು ಯೋಗನರಸಿಂಹ ದೇವರಿಗೆ  ಪಂಚಾಮೃತ ಅಭಿಷೇಕ,10-30ಕ್ಕೆ ಶ್ರೀಸ್ವರ್ಣವರ್ಣ ತೀರ್ಥ ವಿದ್ವತ್ ಸಭೆ ಮತ್ತು ಸರ್ವಮೂಲ ಪಾರಾಯಣ,

11-00ಕ್ಕೆ ಶ್ರೀಸತ್ಯನಾರಾಯಣ ಪೂಜೆ, ಮದ್ಯಾಹ್ನ 1-00ಕ್ಕೆ ತೀರ್ಥ ಪ್ರಸಾದ,

ಸಂಜೆ 6-00ರಿಂದ 7-30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು,7-30ಕ್ಕೆ *ತೆಪ್ಪೋತ್ಸವ* ಹಾಗೂ ಮಹಾಮಂಗಳಾರತಿ.8-00ಕ್ಕೆ 

 ಶ್ರೀ ಸುಜಯನಿಧಿ ತೀರ್ಥರಿಂದ ಅನುಗ್ರಹ ಸಂದೇಶ ಆಶೀರ್ವಚನ ಫಲಮಂತ್ರಾಕ್ಷತೆ .

 ಈ ಮೇಲ್ಕಂಡ ಎಲ್ಲ ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತಭಿಮಾನಿಗಳು ಬಾಗವಹಿಸಿ ಶ್ರೀಶ್ರೀಪಾದರಾಜ ಗುರುಸಾರ್ವಭೌಮರ ಅಂತಾರ್ಯಾಮಿ ಶ್ರೀಹಯವದನ ರಂಗವಿಠ್ಠಲ ಹಾಗೂ ಶ್ರೀಗೋಪಿನಾಥ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಪಾದರಾಜ ಮಠದ 

ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥರು ಭಕ್ತರಿಗೆ ಅಹ್ವಾನಿಸಿದರು.

Post a Comment

0 Comments

Ad Code

Responsive Advertisement