ರಾಜ ರಾಜೇಶ್ವರಿನಗರ ಕ್ಷೇತ್ರದಲ್ಲಿ ಈ ಭಾರಿ ತ್ರಿಕೋನ ಸ್ಪರ್ಧೆ !
ಜೆಡಿಎಸ್ ಅಭ್ಯರ್ಥಿಯಾಗಿ ವೇಗಸ್ ಆಸ್ಪತ್ರೆ ಚೇರ್ಮನ್ ಡಾ. ನಾರಾಯಣಸ್ವಾಮಿ ಅಖಾಡಕ್ಕೆ
ಬೆಂಗಳೂರು: ರಾಜ್ಯಾದ್ಯಂತ ಚುನಾವಣಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಬೆಂಗಳೂರಿನ ರಾಜ ರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣದ ರಂಗು ಭಾರಿ ಭರ್ಜರಿಯಾಗಿ ನಡೆಯುತ್ತಿರುವ ಮಧ್ಯದಲ್ಲಿ ನಾವೇನು ಯಾವ ರಾಜಕೀಯ ಪಕ್ಷಕ್ಕೆ ಕಡಿಮೆ ಇಲ್ಲ ಎಂಬ0ತೆ ಜೆಡಿಎಸ್ ಪಕ್ಷವು ರಾಜ ರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಹೆಸರಾಂತ ವೇಗಸ್ ಆಸ್ಪತ್ರೆಯ ಚೇರ್ಮನ್ ಹಾಗೂ ಹಿರಿಯ ವೈದ್ಯರಾಗಿರುವ ನಾರಾಯಣಸ್ವಾಮಿಯವರನ್ನು ರಾಜಕೀಯ ಅಖಾಡಕ್ಕೆ ಇಳಿಸಿದೆ. ಇದೆ ಕಳೆದ ಮಂಗಳವಾರ ನಡೆದ ಪಕ್ಷದ ಸಭೆಯಲ್ಲಿ ಡಾಕ್ಟರ್ ನಾರಾಯಣಸ್ವಾಮಿಯವರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ.
ಗುರುವಾರ ಬೆಳಿಗ್ಗೆ ಜೆಡಿಎಸ್ ಪಕ್ಷದ ಬೆಂಬಲಿಗರೊ0ದಿಗೆ ಹಾಗೂ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಪಕ್ಷದ ಅಭ್ಯರ್ಥಿಯಾಗಿರುವ ನಾರಾಯಣಸ್ವಾಮಿಯವರ ಮಾತಾಗಿತ್ತು. ನಾರಾಯಣಸ್ವಾಮಿಯವರೂ ಈಗಾಗಲೇ ಒಕ್ಕಲಿಗರ ಸಂಘದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಈಗ ಚುನಾವಣಾ ರಾಜಕೀಯಕ್ಕೆ ಇಳಿದಿದ್ದಾರೆ.
ಒಟ್ಟಾರೆ ರಾಜರಾಜೇಶ್ವರಿ ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಹೆಮ್ಮೆಯ ಕುತೂಹಲಕರ ಅಂಶವಾಗಿದೆ. ಮೂರೂ ಪಕ್ಷದ ಅಭ್ಯರ್ಥಿಗಳ ಮುಖ್ಯಮಂತ್ರಿಗಳು ಮತಪ್ರಚಾರದ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಇವರು ರಾಜಕೀಯದ ಏರಿಳಿತವನ್ನು ಯಾವ ರೀತಿ ಹೆದರಿಸುತ್ತಾರೆ ಎಂದು ಕ್ಷೇತ್ರದ ಜನತೆಯ ಕುತೂಹಲ. ಮುಂದಿನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಆಗುತ್ತಾರೆ ಎಂಬುದು ಇವರ ಮಾತಾಗಿತ್ತು. ತಾಯಿ ರಾಜರಾಜೇಶ್ವರಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

0 Comments