Ticker

6/recent/ticker-posts

Ad Code

Responsive Advertisement

ಅಪರಿಚಿತ ಮೃತನ ವಾರಸುದಾರರ ಪತ್ತೆಗೆ ಮನವಿ

ಬೆಂಗಳೂರು, ಏಪ್ರಿಲ್ 11 (ಕರ್ನಾಟಕ ವಾರ್ತೆ) :  ಹೂಡಿ ಮತ್ತು ಕೆ.ಆರ್. ಪುರಂ ರೈಲ್ವೆ ನಿಲ್ದಾಣಗಳ ಮಧ್ಯೆ ಏಪ್ರಿಲ್ 9 ರಂದು ಸುಮಾರು 40 ವರ್ಷದ ಅಪರಿಚಿತ ಗಂಡಸು ರೈಲು ಗಾಡಿಗೆ ಸಿಕ್ಕಿ ಮೃತಪಟ್ಟಿರುತ್ತಾರೆ. ಮೃತರ ವಾರಸುದಾರರು ಪತ್ತೆಯಾಗಿರುವುದಿಲ್ಲ.

     ಮೃತನು 5.4 ಅಡಿ ಎತ್ತರವಿದ್ದು, ಸದೃಢ ಶರೀರ, ದುಂಡು ಮುಖ, ಗೋಧಿ ಮೈಬಣ್ಣ, ಶೇವ್ ಮಾಡಿರುವ  ಕುರುಚಲು ಗಡ್ಡ ಮತ್ತು ಮೀಸೆ ಹೊಂದಿದ್ದು, ಬಲಗೈಗೆ ಹಸಿರು ಮತ್ತು ಕೆಂಪು ಬಣ್ಣದ ದಾರ ಕಟ್ಟಿರುತ್ತಾರೆ. ತಿಳಿ ಹಸಿರು ಬಣ್ಣದ ಟೀಶರ್ಟ್, ಹಳಿಯಲ್ಲಿ ಬಿದ್ದಿದ್ದ ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್, ಕಪ್ಪು ಬಣ್ಣದ ಅಂಡರ್ ವೇರ್ ಧರಿಸಿದ್ದು, ಮೃತದೇಹದ ಬಳಿ ಬ್ರೌನ್ ಕಲರ್‍ನ ಎರಡು ಚಪ್ಪಲಿಗಳು ಸಿಕ್ಕಿರುತ್ತವೆ.
   ಮೃತ ದೇಹವನ್ನು ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಶವಾಗಾರದಲ್ಲಿ    ಇಡಲಾಗಿದ್ದು, ಇದುವರೆಗೂ ವಾರಸುದಾರರು ಪತ್ತೆಯಾಗಿರುವುದಿಲ್ಲ.  ಈ ಮೇಲಿನ ಚಹರೆಯ ಗಂಡಸಿನ ವಾರಸುದಾರರು  ಯಾರಾದರೂ ಇದ್ದರೆ ದೂರವಾಣಿ ಸಂಖ್ಯೆ: 080-22942212, 080-22266260, ಮೊಬೈಲ್ ಸಂ: 9480802116, ಇಮೇಲ್ :  blorecantrly@ksp.gov.in  ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ. 080-22871291ನ್ನು ಸಂಪರ್ಕಿಸಬಹುದು ಎಂದು ದಂಡು ರೈಲ್ವೆ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement