ಕಲ್ಬುರ್ಗಿ: ಕಲ್ಯಾಣ ಕರ್ನಾಟಕ ಜನರ ಬಹುದಿನದ ಬೇಡಿಕೆಯಾಗಿದ್ದ ಕಲಬುರಗಿ ರಾತ್ರಿ ವಿಮಾನ ನಿಲ್ದಾಣ ಸಂಚಾರ ಇನ್ನೇನು ಶೀಘ್ರವೇ ಹಸಿರು ನಿಶಾನೆ ಪಡೆಯುವ ನಿರೀಕ್ಷೆ ತಾಲೀಮಿನಲ್ಲಿದೆ.
ದೆಹಲಿಯಿAದ ವಿಶೇಷ ವಿಮಾನವನ್ನು ಹಾಗೂ ಸ್ಯಾಟಲೈಟ್ ಉಪಕರಣ ಹೊಂದಿರುವ ವಿಶೇಷ ವಿಮಾನವನ್ನು ತಂದು ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನ ಇಳಿಯಲು ಮತ್ತು ಹಾರಾಟ ನಡೆಸಲು ಬೇಕಾಗಿರುವ ಎಲ್ಲ ಸೌಕರ್ಯಗಳ ಪರೀಕ್ಷೆ ನಡೆದಿದೆ.
ರಾತ್ರಿ ಹಾರಾಟ ಕುರಿತ ಸೌಕರ್ಯಗಳ ಪರೀಕ್ಷೆಯ ಬಳಿಕ, ಕುರಿತ ವರದಿ ನಿರೀಕ್ಷಕರಿಗೆ ನೀಡಲಾಗಿದ್ದು ಇದನ್ನು ವಾರದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ರಾತ್ರಿ ವಿಮಾನ ಸಂಚಾರಕ್ಕೆ ಈಗಾಗಲೇ ಪೂರ್ವಸಿದ್ದತೆ ಪೂರ್ಣಗೊಂಡಿದೆ.
ದೆಹಲಿಯಿಂದ ವಿಶೇಷ ವಿಮಾನವನ್ನು ಹಾಗೂ ಸ್ಯಾಟಲೈಟ್ ಉಪಕರಣ ಹೊಂದಿರುವ ವಿಶೇಷ ವಿಮಾನವನ್ನು ತಂದು ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನ ಇಳಿಯಲು ಮತ್ತು ಹಾರಾಟ ನಡೆಸಲು ಬೇಕಾಗಿರುವ ಎಲ್ಲ ಸೌಕರ್ಯಗಳ ಪರೀಕ್ಷೆ ನಡೆದಿದೆ.
0 Comments