Ticker

6/recent/ticker-posts

Ad Code

Responsive Advertisement

ಅಹಮದಾಬಾದ್‌ನಲ್ಲಿ ಯಶಸ್ವಿ ವಿಶ್ವ ರೋಮಾ ಬಂಜಾರ ದಿನಾಚರಣೆ

ಭಾರತದ ಎಲ್ಲೆಡೆ ಹರಡಿರುವ ಬಂಜಾರರು ಆಧುನಿಕತೆಯ ಜೊತೆ ಜೊತೆಯಲ್ಲಿ ಮುಂದುವರೆಯುತ್ತಿರುವ ಈ ಸಂದರ್ಭದಲ್ಲಿ, ತಮ್ಮ ಸಮುದಾಯದ ಆಸ್ಮಿತೆಯಾದ ಭಾಷೆ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಮರೆಯಬಾರದೆಂದು, ಕರ್ನಾಟಕದ ವಿಧಾನ ಪರಿಷತ್ತಿನ ವಿಪಕ್ಷದ ಮುಖ್ಯ ಸಚೇತಕರಾದ  ಪ್ರಕಾಶ್‌ ಕೆ. ರಾಠೋಡ ಅವರು ಬಂಜಾರ ಯುವಜನತೆಗೆ ಕರೆ ನೀಡಿ, ಗುಜರಾತ್‌ ರಾಜ್ಯದ ರಾಜಧಾನಿ ಅಹಮದಾಬಾದ್‌ನಲ್ಲಿ ಇತ್ತೀಚೆಗೆ  ನಡೆದ 'ವಿಶ್ವ ರೋಮಾ ಬಂಜಾರ ದಿನಾಚರಣೆ' ಮತ್ತು “ಬಂಜಾರೋಂಕಿ ರಾಜ್" ಹಿಂದಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು .

.1990 ರಲ್ಲಿ ಪೋಲ್ಯಾಂಡನಲ್ಲಿ ವಿಶ್ವ ರೋಮಾನಿ ಕಾಂಗ್ರೆಸ್ ಅಂತರರಾಷ್ಟ್ರೀಯ ಅಧಿವೇಶನದಲ್ಲಿ ವಿಶ್ವ ರೋಮಾನಿ ಬಂಜಾರ ಜನಾಂಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿಗೊಳಿಸಲು ಏಪ್ರಿಲ್ 8 ರಂದು ಪ್ರತಿ ವರ್ಷ ವಿಶ್ವ ರೋಮಾ ಬಂಜಾರ ದಿವಸ ಆಚರಣೆ ಮಾಡಬೇಕೆಂದು ಘೋಷಣೆ ಮಾಡಿದರು. ರೋಮಾ ಬಂಜಾರ ಜನಾಂಗದ ಮೇಲೆ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅವರು ಬಡತನದಲ್ಲಿರುವಂತಹ ಬಡತನ ರೇಖೆಗಿಂತ ಕೆಳಗೆ ಇರುವಂತಹ ಪರಿಸ್ಥಿತಿಯನ್ನು ಗಮನಿಸಿ, ವಿಶ್ವದ ಗಣ್ಯಾತಿಗಣ್ಯಗಳು ಬೆಂಬಲಿಸಿದರು. ಕ್ರೈಸ್ತ ಸಮಾಜದ ಮುಖ್ಯಸ್ಥ 2ನೇ ಪೋಪ್ ಜಾನ್ ಪೌಲ್  ರವರು ತಮ್ಮ ಹಿಂಬಾಲಕರಿಗೆ ರೋಮಾ ಬಂಜಾರ ಜನಾಂಗದವರಿಗೆ ಸಹಾನುಭೂತಿ ಮತ್ತು ಗೌರವ ಕೊಡಬೇಕೆಂದು ಘೋಷಿಸಿದರು. 2004ರಲ್ಲಿ ಯುನೈಟೆಡ್  ಸ್ಟೇಟ್ ಡಿಪಾರ್ಟ್‌ಮೇಂಟ್‌ನ ಕಾರ್ಯದರ್ಶಿ ಆಡಮ್ ಅರಲಿ ರವರು ಬಂಜಾರ ರೋಮಾ ರವರು ಎದುರಿಸುತ್ತಿರುವ ನಿರಂತರ ಮಾನವ ಹಕ್ಕು ಉಲ್ಲಂಘನೆ ಮತ್ತು ಸಹಿಷ್ಣುತೆಯನ್ನು  ಪ್ರೋತ್ಸಾಹಿಸಲು ಯುರೋಪಿಯನ್ ದೇಶಗಳಿಗೆ ಸಲಹೆ ಕೊಟ್ಟು ಒತ್ತಾಯಿಸಿದರು. 2006 ರಲ್ಲಿ ಮೌಡ್ ಡಿ ಬೋರ್ ಬಾಕ್ಯಸಹೊರವರು ರೋಮಾನಿ ಬಂಜಾರ ಜನರಿಗೆ ತಮ್ಮ ಕಳಪೆ ಜೀವನ ಪರಿಸ್ಥಿತಿಯಲ್ಲಿರುವ ಜನರ ವ್ಯವಸ್ಥೆ ಸುಧಾರಿಸುವ ಬಗ್ಗೆ ಪ್ರಸ್ತಾಪಿಸಿದರು. 2009ರಲ್ಲಿ ಅಮೇರಿಕಾ ದೇಶದ ಕಾರ್ಯಧ್ಯಕ್ಷರಾದ ಹಿಲರಿ ಕ್ಲಿಂಟನ್ ಯುರೋಪಿನಲ್ಲಿ ಮಾನವ ಹಕ್ಕು ಉಲ್ಲಂಘನೆ ನಿವಾರಿಸಲು ಆಮೇರಿಕಾ ದೇಶ ಬದ್ಧವಾಗಿದೆ ಎಂದು ಯರೋಪಿಯನ್ ದೇಶಗಳಿಗೆ ಒತ್ತಾಯಿಸಿದರು.


ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದದಲ್ಲಿ ಜಾರಿಯಿರುವ ಮೀಸಲಾತಿ ಸೌಲಭ್ಯದಿಂದ ಬಂಜಾರರು ಅಭಿವೃದ್ಧಿಯ ಪಥದಲ್ಲಿ ದೃಢ ಹೆಜ್ಜೆಯಿರಿಸಿದ್ದಾರೆ. ಅಂಥದೇ ಸೌಲಭ್ಯಗಳು ಗುಜರಾತ್ ರಾಜ್ಯದಲ್ಲೂ

ಜಾರಿಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ವಿಶ್ವ ಬಂಜಾರ ರೋಮಾ ದಿನಾಚರಣೆಯ ಮಹತ್ವವನ್ನು ವಿವರಿಸಿದ ಅವರು ಬಂಜಾರರಂತೆ ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ರೋಮಾ ಜನಾಂದ ಸೋದರರ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವದ ಧಾರ್ಮಿಕ ನಾಯಕರು, ರಾಜಕೀಯ ಮುತ್ಸದ್ಧಿಗಳು ದುರ್ಬಲ ವರ್ಗಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿರುವುದನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ  ಡಿ. ರಾಮಾ ನಾಯ್ಕ ಅವರು ಬರೆದ "ಬಂಜಾರೋ ಕೀ ರಾಜ್" ಪುಸ್ತಕವನ್ನು ಬಿಡುಗಡೆ ಮಾಡಿದ ಗುಜರಾತಿನ ಹಿರಿಯ ವಿದ್ವಾಂಸರಾದ ಸುಭಾಷ್ ಬ್ರಹ್ಮಭಟ್‌ ಅವರು ಬಂಜಾರ ಬದುಕಿನ ಸಮಗ್ರ ಕೈಪಿಡಿಯಂತಿರುವ ಈ ಪ್ರಸ್ತಕವು ಬಂಜಾರ ಭಗವದ್ಗೀತೆಯೆಂದು ಬಣ್ಣಿಸಿದರು. ಇದು ಪ್ರತಿಯೊಬ್ಬ ಬಂಜಾರರ ಮನೆಯಲ್ಲಿ ಇರಬೇಕಾದ ಕೃತಿಯೆಂದು ನುಡಿದರು. ರಾಜಸ್ಥಾನದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ, ಕಾದಂಬರಿಕಾರ ಮತ್ತು ಸಂಶೋಧಕ ಹರಿ ರಾಮ್ ಮೀನಾ ಅವರು, ರಾಜಸ್ಥಾನದಲ್ಲಿ ಸ್ವತಂತ್ರ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಬಂಜಾರಾ ಸಮುದಾಯದ ಗುರು ಗೋವಿಂದ್ ಗುರು ಅವರ ಸಾಕ್ಷ್ಯಚಿತ್ರ ಪ್ರದರ್ಶನ ಮೂಲಕ ಬಂಜಾರಾ ಜನಾಂಗದ ಕೊಡುಗೆಯನ್ನು ಬಿಂಬಿಸಿದರು. ಹೆಚ್.ಕೆ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲ ಡಾ. ಗೋವರ್ಧನ್ ಅವರು ಡಿ. ರಾಮಾ ನಾಯ್ಡ್ ಬರೆದ ಪುಸ್ತಕವನ್ನು ವಿಶ್ಲೇಷಣೆ ಮಾಡಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಸಾಹಿತಿ ಡಾ. ಕೆ ಪುಟ್ಟಸ್ವಾಮಿ ಅವರು ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಕರ್ನಾಟಕ ಮತ್ತು ಗುಜರಾತಿನ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ವಿವರಿಸುತ್ತಾ ಮಹಾತ್ಮ ಗಾಂಧಿ ಮತ್ತು ಕರ್ನಾಟಕ ರಾಜ್ಯದ ನಡುವಿನ ಸಂಬಂಧಗಳ ಚಾರಿತ್ರಿಕ ವಿವರವನ್ನು ಸಭೆಗೆ ವಿವರಿಸಿದರು. 


ಬಂಜಾರೋಂಕಿ ರಾಜ್ ಪುಸ್ತಕವು ಡಿ. ರಾಮಾ ನಾಯ್ಕ ಅವರು ಇಂಗ್ಲೀಷ್‌ನಲ್ಲಿ ಬರೆದ "ಪ್ರೌಡ್ ಟು ಬಿ ಬಂಜಾರ" ಕೃತಿಯ ಹಿಂದಿ ಅನುವಾದ. ಲೇಖಕ ಡಿ. ರಾಮಾ ನಾಯಕ್ ಅವರು ಮಾತನಾಡುತ್ತಾ, ಈ ಕೃತಿಯ ರಚನೆಯ ಹಿನ್ನೆಲೆ, ಬರೆಯಲು ಮಾಡಿಕೊಂಡ ಸಿದ್ಧತೆಯನ್ನು ನೆನೆಯುತ್ತಾ ಉಪೇಕ್ಷೆಗೊಳಗಾದ ತಮ್ಮ ಸಮಾಜದ ಹಿರಿಮೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಚಿಸಿದ ಕೃತಿಯಾಗಿದೆಯೆಂದರು. ಗುಜರಾತಿನ್ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಅಧ್ಯಕ್ಷರು ಜಿತೇಂದ್ರ ಬಂಜಾರಾ ಅವರು ಸಭೆಯ ಉಸ್ತುವಾರಿ ವಹಿಸಿ ಸಮಾರಂಭವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದರು.

- ಕೆ. ಸುಕುಮಾರ್ ರಾಜು.

ಚಿತ್ರದಲ್ಲಿ (ಎಡದಿಂದ ಬಲಕ್ಕೆ) ರಾಷ್ಟ್ರ ಪ್ರಶಸ್ತಿ ವಿಜೇತ ಸಾಹಿತಿ, ಪುಟ್ಟಸ್ವಾಮಿ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಕಾರ್ಯಧ್ಯಕ್ಷರು ಡಿ. ರಾಮಾ ನಾಯ್ಕ, ಗುಜರಾತಿನ ಹಿರಿಯ ವಿದ್ವಾಂಸರಾದ ಸುಭಾಶ್ ಬ್ರಹ್ಮಭಟ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಪ್ರಕಾಶ್ ಕೆ. ರಾಠೋಡ ಮತ್ತು ರಾಜಸ್ಥಾನದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ, ಕಾದಂಬರಿಕಾರ ಮತ್ತು ಸಂಶೋಧಕ ಹರಿ ರಾಮ್ ಮೀನಾ ರವರು ಉಪಸ್ಥಿತಿರಿದ್ದರು.

............................

Post a Comment

0 Comments

Ad Code

Responsive Advertisement