Ticker

6/recent/ticker-posts

Ad Code

Responsive Advertisement

ಪೀಣ್ಯ ಕೈಗಾರಿಕಾ ಪ್ರದೇಶ ಟೌನ್ ಸಿಟಿ ಮಾಡುವುದು ನನ್ನ ದೊಡ್ದ ಕನಸು : ಮಂಜುನಾಥ್

ಬೆಂಗಳೂರು:  ನಮ್ಮ ದೇಶದ ಹೆಗ್ಗಳಿಕೆಯಾಗಿರುವ ಪೀಣ್ಯ ಕೈಗಾರಿಕಾ ಸಂಘದ ತುಂಬಾ ದಿನದ ಬೇಡಿಕೆಯಾದ ಕೈಗಾರಿಕಾ ಟೌನ್ ಸಿಟಿ ನಿರ್ಮಾಣ ಮಾಡಲು ಪ್ರಯತ್ನ ಪಡುವೆ ಎಂದು ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘ ಏರ್ಪಡಿಸಿದ್ದ ಸೌಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜುನಾಥ್ ನಾನು ಶಾಸಕನಾದ ದಿನದಿಂದಲೂ ಈ ಭಾಗದಲ್ಲಿ ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳನ್ನು ಮಾಡಿಸಿದ್ದೇನೆ. ಕೈಗಾರಿಕೆಗಳಲ್ಲಿ ನಮ್ಮ ಕ್ಷೇತ್ರದ ಜನ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯದ ಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೆಲ್ಲಾ ನನಗೆ ಮುಖ್ಯವಾಗಲಿಲ್ಲ. ನನಗೆ ಎಲ್ಲಾ ಕಾರ್ಮಿಕರೂ ಒಂದೇ ಇಲ್ಲಿಯ ಮಾಲೀಕರು, ಕಾರ್ಮಿಕರೂ ವಿವಿಧ ಜಾತಿ, ಧರ್ಮ, ಭಾಷೆಯವರು ಇದ್ದಾರೆ. ಅವರಿಗೆ ಓಡಾಡಲು ಬಸ್ಸಿನ ವೆವಸ್ಥೆ, ಕುಡಿಯುವ ನೀರಿನ ವೆವಸ್ಥೆ, ಒಳ್ಳೆಯ ರೆಸ್ತೆ, ಬೀದಿದೀಪ ಹೀಗೆ ಏನೆಲ್ಲಾ ಅಭಿರುದ್ದಿ ಮಾಡಲು ಸಾಧ್ಯ ಅದನ್ನೆಲ್ಲಾ ನನ್ನ ಶಕ್ತಿ ಮೀರಿ ಮಾಡಿದ್ದೇನೆ. ಆದರೆ ನಿಮ್ಮ ನಿರೀಕ್ಷೆಗೆ ತಕ್ಕನಾಗಿ ಕೆಲಸ ದೊಡ್ಡ ಮಟ್ಟದಲ್ಲಿ ಆಗಲಿಲ್ಲ. ಅದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವೆ ಎಂದು ಮಂಜುನಾಥ್ ಹೇಳಿದರು.


ನನಗೆ ಈ ಬಿಜೆಪಿ ಸರ್ಕಾರ ತೊಂದರೆ ಕೊಟ್ಟಿದ್ದು, ನಾನು ಕೋರ್ಟಿಗೆ ಹೋಗಿ ಹಣ ಬಿಡುಗಡೆ ಮಾಡಿಸಿದ್ದು, ಕಾಮಗಾರಿಗೆ ಸ್ಥಳೀಯ ಬಿಜೆಪಿಯವರು ತಡೆ ಹಿಡಿದಿದ್ದು ಎಲ್ಲವೂ ನಿಮಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗುವುದಿಲ್ಲ. ಕ್ಷೇತ್ರದ ಜನ ಜೆಡಿಎಸ್ ಪರವಾಗಿದ್ದಾರೆ. ನೀವು ಸಹ ನಿಮ್ಮ ಕಾರ್ಮಿಕರ ಮನವಲಿಸಿ ಜೆಡಿಎಸ್ ಗೆಲ್ಲಲು ಸಹಾಯ ಮಾಡಿ ಎಂದು ಕಾರ್ಯಕ್ರಮದಲ್ಲಿ ಮತಯಾಚನೆ ಮಾಡಿದರು.


ಕೈಗಾರಿಕಾ ಪ್ರದೇಶದಲ್ಲಿ ಅಂಡರ್ ಪಾಸ್ ಬೇಕಾಗಿದೆ, ಸರ್ಕಲ್ ಗಳಲ್ಲಿ ಪಾದಚಾರಿ ಹಾಗೂ ಸಿಗ್ನಲ್ ದ್ವೀಪ ಅಳವಡಿಸ ಬೇಕಾಗಿದೆ. ಬಸ್ಸು ತಂಗುದಾಣ  ಅಲ್ಲಿ ಪ್ರಯಾಣಿಕರು ಮಳೆ, ಬಿಸಲಿನಲ್ಲಿ ಆರಾಮಾಗಿ ಕುಳಿತು ಕೊಳ್ಳುವ ವೆವಸ್ಥೆ ಮಾಡಬೇಕಾಗಿದೆ. ಹೀಗೆ ಹಲವು ಹತ್ತು ಕನಸುಗಳು ನನ್ನಲ್ಲಿ ಇದ್ದಾವೆ. ಮತ್ತೆ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗುವುದು ಶತ ಸಿದ್ದ. ನೀವೆಲ್ಲರೂ ಸೇರಿ ನನ್ನನ್ನು ಚುನಾಯಿಸಿ ನಾನು ನಿಮ್ಮ ಸೇವಕನಾಗಿ ಈಗಲೂ ಇದ್ದೇನೆ. ಮುಂದೆಯೂ ಇರುತ್ತೇನೆ ಎಂದು ಪೀಣ್ಯ ಕೈಗಾರಿಕಾ ಸಂಘದ ಪದಾಧಿಕಾರಿಗಳಿಗೆ  ಮಂಜುನಾಥ್ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಸಂಘದ ಹಲವಾರು ಪದಾಧಿಕಾರಿಗಳು ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಈ ಪ್ರದೇಶದಲ್ಲಿ ಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ ಮಾಡಿದ ನೆರವನ್ನು ನೆನಪು ಮಾಡಿ ಇಂಥ ಸರಳ ವೆಕ್ತಿಗೆ ನಾವು ಬೆಂಬಲಿಸೋಣ ಎಂದು ಕರೆ ಕೊಟ್ಟರು.


ಸಂವಾದ ಕಾರ್ಯಕ್ರಮದಲ್ಲಿ ಸಂಘದ‌ ಅದ್ಯಕ್ಷ‌ ಮಂಜುನಾಥ್ ಎಚ್, ಹಿರಿಯ ಉಪಾದ್ಯಕ್ಷ ಆರೀಪ್ ಎಚ್.ಎಂ, ಉಪಾದ್ಯಕ್ಷ‌ ಶಿವಕುಮಾರ್ ಆರ್, ಕಾರ್ಯದರ್ಶಿ ಚಂದ್ರಶೇಖರ್ ಎಂ, ಜಂಟಿ ಕಾರ್ಯದರ್ಶಿ ಮಲ್ಲೇಶ್ ಗೌಡ ಎಚ್.ಕೆ, ಖಜಾಂಚಿ ತಿಪ್ಪೇಶಪ್ಪ ಬಿ‌‌ಸಿ, ಜಂಟಿ ಖಜಾಂಚಿ ರಮೇಶ್ ಎಚ್.ಜಿ ನಿಕಟಪೂರ್ವ ಅದ್ಯಕ್ಷರಾದ ಮುರಳಿಕೃಷ್ಣ ಬಿ, ಶ್ರೀನಿವಾಸ್ ಅಸ್ರಣ್ಣ, ಕೃಷ್ಣಮೂರ್ತಿ ಎಂ.ಆರ್, ಕೈಗಾರಿಕೋದ್ಯಮಿ ತಿಮ್ಮೇಗೌಡ ಸೇರಿದಂತೆ ನೂರಾರು ಉದ್ಯಮಿಗಳು ಭಾಗವಹಿಸಿದ್ದರು.

ವರದಿ.. ಎಂ ಶ್ರೀನಿವಾಸ್ ಕುಮಾರ್

Post a Comment

0 Comments

Ad Code

Responsive Advertisement