ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ನಗರದ ಸಿದ್ಧಾರ್ಥ ನಗರ ಹಿರಿಯ ಕಾಂಗ್ರೆಸ್ ಮುಖಂಡರು ಪುರಸಭಾ ಮಾಜಿ ಉಪಾಧ್ಯಕ್ಷ ಏಳು ಬಾರಿ ಪುರಸಭೆಯಲ್ಲಿ ಗೆದ್ದಿದ್ದ ಚಿಕ್ಕ ಮುನಿಯಪ್ಪನವರು,ಮಾಜಿ ಪುರಸಭೆ ಸದಸ್ಯರಾದ ಮುನಿಕದಿರಮ್ಮನವರು ಹಾಗೂ ಪಿ,ಎಲ್,ಡಿ ಬ್ಯಾಂಕ್ ನಿರ್ದೇಶಕರಾದ ಮುರಳಿ ಮತ್ತು ಸಿದ್ಧಾರ್ಥ ನಗರದ ಮುಖಂಡರಾದ ಜೋಮಪ್ಪನವರ ಕದಿರಪ್ಪ, ಹಾಸ್ಟೆಲ್ ನಾರಾಯಣಸ್ವಾಮಿ, ಶಿಕ್ಷಕ ಯಾ,ಮ, ನಾರಾಯಣಸ್ವಾಮಿ ಜೆಡಿಎಸ್ ಅಭ್ಯರ್ಥಿ ಬಿಎನ್ ರವಿಕುಮಾರ್ ರವರ ಸಿದ್ಧಾಂತಗಳು ಮತ್ತು ಕಾರ್ಯ ವೈಖರಿಯನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಿಎನ್ ರವಿಕುಮಾರ್ ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡ ಅವರು ಮಾತನಾಡಿ ಈ ಕ್ಷೇತ್ರದಲ್ಲಿ ನಾವು ಸಕ್ರಿಯವಾಗಿ 20 ವರ್ಷಗಳ ಕಾಲ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಪಕ್ಷವನ್ನು ಉಳಿಸಿಕೊಂಡು ಬಂದಿದ್ದು ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ನಗರಸಭೆಯಲ್ಲಿ ನಮ್ಮ ನಿಷ್ಠಾವಂತ ಕಾರ್ಯಕರ್ತ ರಮೇಶ್ ರವರ ಪತ್ನಿಯನ್ನು ನಾವು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಗರದಲ್ಲಿ ಜೆಡಿಎಸ್ ಪಕ್ಷದ ವಿರುದ್ಧವಾಗಿ ಏನೇನು ರಾಜಕಾರಣ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಒಂದು ಪರಿಶಿಷ್ಟ ಜಾತಿ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಬೇಕಾದರೆ ಉಸ್ತುವಾರಿ ಸಚಿವರು,
ಸಂಸದರು, ಶಾಸಕರು, ಕಾಂಗ್ರೆಸ್ ಸದಸ್ಯರು ಎಲ್ಲರೂ ಒಂದಾಗಿ ಬಂದರು ಆ ಮಹಿಳೆಯನ್ನು ಅಧಿಕಾರದಿಂದ ಇಳಿಸಲು ಸಾಧ್ಯವಾಗಲಿಲ್ಲ ಈಗ ನಮ್ಮ ಹಿರಿಯರು ಚಿಕ್ಕಮುನಿಯಪ್ಪಣ್ಣನವರು ಮುನಿಕದಿರಮ್ಮ, ಮುರುಳಿ ನಮ್ಮ ಜೊತೆಗೆ ಬಂದಿದ್ದಾರೆ. ನಮಗೆ ಇನ್ನು ಬಲಬಂದಂತಾಗಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಒಳ್ಳೆಯದಾಗುತ್ತೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಜ್ಜಪ್ಪ, ನಾರಾಯಣಮ್ಮ, ರಾಮಾಂಜಿ, ನರಸಿಂಹ,ಗಂಗರಾಜು, ಮುನಿರಾಜು ಡಿ, ಮಂಜುನಾಥ,ಸ್ಟಾರ್ ಮಂಜು, ನರಸಿಂಹ, ರಘು, ದೇವರಾಜ್, ಸುರೇಶ್,
ನಲ್ಲಿಮರದ ಹಳ್ಳಿಯ ಕಾಂಗ್ರೆಸ್ ಬೆಂಬಲಿಗರು ಜೆಡಿಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ,ನಗರಸಭೆ ಸದಸ್ಯ ರಾಘವೇಂದ್ರ, ಮುಖಂಡರಾದ ರಾಮಚಂದ್ರಪ್ಪ, ಬಂಕ್ ಮಂಜಣ್ಣ, ಎಸ್,ಎಂ ರಮೇಶ್ ವಿಜಯ್ ಕುಮಾರ್ ,ಪ್ರಸಾದ್, ದ್ಯಾವಪ್ಪ, ಶ್ರೀನಿವಾಸ್,ಪ್ರಕಾಶ್, ಮಂಜುನಾಥ್, ಮೂರ್ತಿ,
ಎಂ,ಎಸ್ ಕೃಷ್ಣ, ಅನಿಲ್, ಮುಂತಾದವರು ಹಾಜರಿದ್ದರು.

0 Comments