ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ಚುನಾವಣೆ ಪ್ರಚಾರ ಪ್ರಯುಕ್ತ ಪಾದಯಾತ್ರೆ ಕಾರ್ಯಕ್ರಮ.
ಕಾಮಾಕ್ಷಿಪಾಳ್ಯದಿಂದ ಆರಂಭವಾದ ಚುನಾವಣೆ ಪ್ರಚಾರ ಪಾದಯಾತ್ರೆ ಬಸವೇಶ್ವರನಗರ, ಶಿವನಗರ, ರಾಜಾಜಿನಗರ, ದಯಾನಂದನಗರ, ಪ್ರಕಾಶನಗರ, ಶ್ರೀರಾಮಮಂದಿರದಲ್ಲಿ ಪಾದಯಾತ್ರೆ ಮುಕ್ತಾಯವಾಯಿತು.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಶಕ್ತಿ, ಪಕ್ಷ ಇಷ್ಟು ಬಲಿಷ್ಠವಾಗಲು ಕಾರ್ಯಕರ್ತರೆ ಕಾರಣ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 8ತಿಂಗಳ ಅವಧಿಯಲ್ಲಿ 16000ಕ್ಕಿಂತ ಹೆಚ್ಚು ಮನೆಗಳಿಗೆ ಭೇಟಿ ನೀಡಲಾಗಿದೆ.
ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿರುವುದರಿಂದ ಸಮಸ್ಯೆಗಳನ್ನು ಅಲಿಸಿ ಪರಿಹರಿಸಲು ಸಾಧ್ಯವಾಗಿದೆ.
ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರಮೋದಿ ರವರ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ, ರಾಜ್ಯ ಸರ್ಕಾರ ಜನತೆ ಪಾರದರ್ಶಕ ಸುಭದ್ರ ಆಡಳಿತ ಮತ್ತೇ ಸ್ಥಾಪಿಸಲು, ರಾಜಾಜಿನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಕಾರ್ಯಗಳು ಮತ್ತು ನೆಮ್ಮದಿ ರಾಜಾಜಿನಗರಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳು ಬಿಜೆಪಿ ಸೇರ್ಪಡೆಯಾದರು.
ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್,ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು, ರಾಜಣ್ಣ,ಹೆಚ್.ಆರ್.ಕೃಷ್ಣಪ್ಪ, ರವೀಂದ್ರನ್, ದೀಪಾ ನಾಗೇಶ್ ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಯಶಸ್ ನಾಯಕ್, ಸತೀಶ್ ಭಗವಾನ್ .ಚಲನಚಿತ್ರ ನಿರ್ಮಾಪಕ ಗಂಗಾಧರ್, ಗಿರೀಶ್ ಗೌಡ, ಶ್ರೀನಾಥ್ ಆಯ್ಯರ್, ಕಿರಣ್, ಮುನ್ನಭಾಯಿ,ವೆಂಕಟೇಶ್ ಬಾಬು,ಆನಿಲ್ ರಂಗಣ್ಣ,ಟಿ.ಎನ್.ರಮೇಶ್,ಮೋಹನ್ ರಾಜ್ ,ಚಂದ್ರಮೌಳಿ ಸಂಜಯ್ ಕುಮಾರ್, ಅಮಿತ್ ಜೈನ್,ಆದರ್ಶ್, ಮಹಿಳಾ ಮುಖಂಡರುಗಳಾದ ಪೂರ್ಣಿಮಾ,ರಾಧ, ಹೇಮಾ, ಜಯಂತಿರವರುಗಳು ಭಾಗವಹಿಸಿದ್ದರು.
.jpeg)

0 Comments