ಬೆಂಗಳೂರು : ಬೇಸಿಗೆ ಶಿಬಿರವನ್ನು ನಗರದ ಜಾಲಹಳ್ಳಿಯ ಬಿ ಇ ಎಲ್ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬಿ ಇ ಎಲ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ0ತ ಶ್ರೀಯುತ ನರಸಿಂಹ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಮತ್ತು ಮಂಡಳಿಯ ಸದಸ್ಯರು ಹಾಗೂ ಬಿ ಇ ಎಲ್ ಆಂಗ್ಲ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸ್ವಾತಿ.ಕೆ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.,
ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎರಡು ವಾರಗಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ತ್ಯಾಜ್ಯ ವಸ್ತುಗಳಿಂದ ಹಲವಾರು ಉಪಯುಕ್ತ ವಸ್ತುಗಳನ್ನು ಪ್ರದರ್ಶಿಸಿ ಕುತೂಹಲ ಹಾಗೂ ಆಸಕ್ತಿಯಿಂದ ಕಲಿತಂತಹ ಹಲವಾರು ವಿಷಯಗಳಾದ ಪ್ರಥಮ ಚಿಕಿತ್ಸೆ , ಅಗ್ನಿ ದುರಂತ ,ವಿವಿಧ ದಾರದ ಬಗ್ಗೆ ವಿಜ್ಞಾನದ ಪ್ರಯೋಗಗಳ ಕುರಿತು ಹಾಗೂ ಜ್ಞಾಪಕ ಶಕ್ತಿ ತರಗತಿಯ ಬಗ್ಗೆ ಆಹಾರ ಮತ್ತು ಪೋಷಣೆ, ಸಾಂಪ್ರದಾಯಿಕ ಆಟಗಳು, ತ್ಯಾಜ್ಯದಿಂದ ಉತ್ತಮವಾದ ಉಪಯುಕ್ತ ವಸ್ತುಗಳ ಕಲಿಕೆ, ಚಿತ್ರಕಲೆ, ಇಂಗ್ಲಿಷ್ ವ್ಯಾಕರಣ ಮತ್ತು ಬೆಂಕಿ ಇಲ್ಲದೆ ಮಾಡುವ ಆಹಾರಗಳ ಕುರಿತು ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡರು.
ಜೊತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಬೇಸಿಗೆಯ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿತ್ತು, ಮಕ್ಕಳು ಈ ಶಿಬಿರದಲ್ಲಿ ಭಾರತ್ ಸ್ಕೌಟ್ಸ್ ನ ಉದ್ದೇಶಗಳ ಬಗ್ಗೆ ಹಾಗೂ ಚುನಾವಣೆ ಮತದಾನದ ಜಾಗೃತಿಯ ಬಗ್ಗೆ ಮತ್ತು ಆದರ್ಶ ವ್ಯಕ್ತಿಯಾದ ಮಹಾತ್ಮ ಗಾಂಧೀಜಿಯವರ ಕುರಿತು ಮುಕ್ತವಾಗಿ ಮಾತನಾಡಿದರು ಹಾಗೂ ಮತದಾನದ ಜಾಗೃತಿಯ ಅಭಿಯಾನದಲ್ಲಿಯೂ ಸಹ ಭಾಗವಹಿಸಿದ್ದರು, ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರುಗಳು ಮಕ್ಕಳ ಸೃಜನಶೀಲತೆಯ ಚಟುವಟಿಕೆಯ ಕಲಿಕೆಯ ಕುರಿತು ಸಂತಸದ ಹಿತ ನುಡಿಗಳನ್ನು ವ್ಯಕ್ತಪಡಿಸಿದರು.





0 Comments