ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ದಿ.ಬೆಂಗಳೂರು ಸಿಟಿ ಕಾರ್ಪೋರೇಷನ್ ವರ್ಕರ್ಸ್ ಫೆಡರೇಷನ್ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ 132ನೇ ಜನ್ಮದಿನಾಚರಣೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಪರಿರ್ವತನಾ ರಥದ ಮೂಲಕ ಮತದಾನ ಜಾಗೃತಿ ಅಭಿಯಾನ. ಮಾನ್ಯ ಬಿಬಿಎಂಪಿ ಆಡಳಿತಾಧಿಕಾರಿ ಶ್ರೀ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ಮತ್ತು ಪೌರ ಕಾರ್ಮಿಕರ ಮುಖಂಡರಾದ ಬಾಬುರವರು ಬಾಬ್ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ, ಸಾಮಾಜಿಕ ಪರಿವರ್ತನಾ ರಥದ ಮೂಲಕ ಮತದಾನ ಜನಜಾಗೃತಿಗೆ ಚಾಲನೆ ನೀಡಿದರು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉತ್ತಮವಾಗಿ ಬದುಕಿ,ಬಾಳಲು ಸಂವಿಧಾನ ಎಲ್ಲರಿಗೂ ಅವಕಾಶ ನೀಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ ಮೇ 10ರಂದು ಮತದಾನವಾಗಲಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ನೀಡಿದೆ, ಪ್ರತಿಯೊಬ್ಬರು ಮತದಾನ ಮಾಡಿ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಬೇಕು ಎಂದು ಹೇಳಿದರು. ಅದ್ಯಕ್ಷರಾದ ಬಾಬುರವರು ಮಾತನಾಡಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಎಲ್ಲ ಧರ್ಮ, ವರ್ಗದವರು ಸರಿಸಮಾನವಾಗಿ ಬಾಳಬೇಕು ಎಂದು ಸಮ ಸಮಾಜ ನಿರ್ಮಾಣವಾಗಬೇಕು ಎಂದು ನಮ್ಮ ದೇಶಕ್ಕೆ ಸಂವಿಧಾನ ನೀಡಿದರು. ಅಂಬೇಡ್ಕರ್ ರವರು ಹೇಳಿದ್ದರು ಒನ್ ಮ್ಯಾನ್ ಒನ್ ವೋಟ್ ಎಂಬ ಸಂದೇಶವನ್ನು ಇಂದು ನಮ್ಮ ಸಂಸ್ಥೆಯ ಮೂಲಕ ಬೆಂಗಳೂರುನಗರ ವಿವಿಧ ಪ್ರದೇಶದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

0 Comments