Ticker

6/recent/ticker-posts

Ad Code

Responsive Advertisement

ಭಜನ - ಪ್ರವಚನ - ಸಂಕೀರ್ತನ

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಪ್ರಿಲ್ 4 ರಿಂದ 7ರವರೆಗೆ ಪ್ರತಿದಿನ ಸಂಜೆ (6 ರಿಂದ 8) ಧಾರ್ಮಿಕ/ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಏಪ್ರಿಲ್ 4, ಮಂಗಳವಾರ ಸಂಜೆ 6ಕ್ಕೆ : ರಾಜರಾಜೇಶ್ವರಿನಗರದ ಶ್ರೀ ಪೂರ್ಣಪ್ರಜ್ಞ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ. 

ಏಪ್ರಿಲ್ 5, ಬುಧವಾರ ಸಂಜೆ 6ಕ್ಕೆ : ಉತ್ತರಹಳ್ಳಿಯ ಶ್ರೀವಾರಿಧಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ.
ಏಪ್ರಿಲ್ 6, ಗುರುವಾರ ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಪಿಟೀಲು : ಶ್ರೀಮತಿ ವಾಸುಕಿ ಪರಿಮಳ, ಮೃದಂಗ : ಶ್ರೀ ಮುರಳಿ ನಾರಾಯಣರಾವ್.
ಏಪ್ರಿಲ್ 7, ಶುಕ್ರವಾರ ಸಂಜೆ 6ಕ್ಕೆ : ವಿಶ್ವೇಶ್ವರಪುರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಸಂಚಾಲಕರಾದ ಡಾ|| ಪಿ. ಭುಜಂಗ ರಾವ್ ಅವರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement