*ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಮತದಾನ ಜಾಗೃತಿ ಜಾಥ*
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಎ.ಎಸ್.ಸಿ.ಕಾಲೇಜು ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ.
*ಸಹಾಯಕ ಕಾರ್ಯಪಾಲಕ ಅಭಿಯಂತರ,ನೋಡಲ್ ಅಧಿಕಾರಿ ಉಮೇಶ್ ರವರು, ಸಹಾಯಕ ಅಭಿಯಂತರಾದ ವಿಜಯಕುಮಾರ್*, ಕಂದಾಯಧಿಕಾರಿ ರಾಜೇಂದ್ರನ್ ಬಿಬಿಎಂಪಿ ಅಧಿಕಾರಿಗಳಾದ ಮಮತ, ಪ್ರಶಾಂತ್ ಹಾಗೂ ಪ್ರಾಂಶುಪಾಲರಾದ ರಾಮಕೃಷ್ಣ ಮುರುಳಿ ಎನ್.ಎಸ್.ಎಸ್.ಸಂಯೋಜಕರಾದ ವಿಶ್ವರಾಧ್ಯ ಶಿಕ್ಷಕರಾದ ರವಿಕುಮಾರ್,ಗಗನ,ಗಿರೀಶ್ ರವಿ.ಎಸ್.ಆರ್, ಗಣಪತಿಭಟ್, ಆನಂದ್ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತದಾನ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.
ಎ.ಎಸ್.ಸಿ.ಕಾಲೇಜಿನಿಂದ ಕರುಮಾರಿಯಮ್ಮ ದೇವಸ್ಥಾನ ರಾಜಾಜಿನಗರ, ಡಾ.ಸಮುದಾಯ ಭವನ, ರಾಜಾಜಿನಗರ 6ನೇ ಬ್ಲಾಕ್ ಪ್ರಮುಖ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥ ಸಾಗಿತು.
ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ವಾದ ಭಾರತ ದೇಶದಲ್ಲಿ ಶೇಕಡ 40%ರಷ್ಟು 18ವಯಸ್ಸಿನಿಂದ 32ವಯಸ್ಸಿನ ಯುವ ಸಮೂಹದ ಮತದಾನ ಹಕ್ಕು ಪಡೆದಿರುತ್ತಾರೆ.
ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮೇ 1೦ರಂದು ನಡೆಯಲಿದೆ. ಯುವಕ, ಯುವತಿಯರು ಹೆಚ್ಚಿನ ರೀತಿಯಲ್ಲಿ ಆಗಮಿಸಿ ಮತದಾನ ಮಾಡಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಯುವ ಸಮೂಹ ಈ ದೇಶದ ಸಂಪತ್ತು, ಚುನಾವಣೆ ಎಂಬ ಹಬ್ಬದಲ್ಲಿ ಅಮೂಲಯವಾದ ಮತ ಹಾಕಬೇಕು ಎಂದು ಮನವಿ ಮಾಡಲಾಯಿತು.



0 Comments