Ticker

6/recent/ticker-posts

Ad Code

Responsive Advertisement

BIG NEWS : ಶಿವಾಜಿನಗರ: ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ಪ್ರಕಾಶ್ ನೆಡುಂಗಡಿ ಭರ್ಜರಿ ಪ್ರಚಾರ

ಬೆಂಗಳೂರಿನ ಶಿವಾಜಿನಗರ ವಿಧಾನಸಬಾ ಕ್ಷೇತ್ರದ ಸಂಪಂಗಿ ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ಪ್ರಕಾಶ್ ನೆಡುಂಗಡಿ ಅಬ್ಬರದ ಚುನಾವಣಾ ಪ್ರಚಾರವನ್ನ ನಡೆಸಿದ್ದಾರೆ.

ಶಿವಾಜಿನಗರ ಕ್ಷೇತ್ರದ ಸಂಪಂಗಿ ರಾಮನಗರದಲ್ಲಿ ಭರ್ಜರಿ ಪ್ರಚಾರವನ್ನ ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ಪ್ರಕಾಶ್ ನೆಡುಂಗಡಿ ಅವರು ಮಾಡಿದ್ದು. ಈ ವೇಳೆ ಆಮ್ ಆದ್ಮಿ ಪಕ್ಷದ ಪ್ರಚಾರ ಮತ್ತು ಜನಸಂಪರ್ಕ ಸಮಿತಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಚಂದ್ರ, ನಟಿ ಹಾಗೂ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕಿ ಪೂಜಾ ರಮೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅಭ್ಯರ್ಥಿ ಪ್ರಕಾಶ್ ನೆಡುಂಗಡಿ, ಆಮ್ ಆದ್ಮಿ ಪಕ್ಷ ಭ್ರಷ್ಟಚಾರ ಮುಕ್ತ ಇದೆ. ಪ್ರತಿಯೊಬ್ಬರ ಮನೆಬಾಗಿಲಿದೆ ಬಂದು ನಿಮ್ಮ ಸಮಸ್ಯೆಗಳನ್ನ ಆಲಿಸುತ್ತೇವೆ. ಕೊರೋನ ಸಮಯದಿಂದನೂ ನಾನು ಇಲ್ಲಿಗೆ ಬಂದು ಕೆಲಸ ಮಾಡಿದ್ದೇನೆ. ಹಾಗೆ ಆಮ್ ಆದ್ಮಿ ಕ್ಲಿನಿಕ್ ಅನ್ನ ಶುರುಮಾಡಿ ಈಗಾಗಲೇ ಸುಮಾರು 10,000 ಜನರಿಗೆ ಉಚಿತ ಚಿಕಿತ್ಸೆಯನ್ನು ಕೂಡ ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಒಂದು ಎಮರ್ಜೆನ್ಸಿ ಆಸ್ಪತ್ರೆ ಹಾಗೂ ಮೋಹಲ್ಲಾ ಕ್ಲಿನಿಕ್ ಅನ್ನ ಪ್ರಾರಂಭ ಮಾಡುತ್ತೇವೆ. ಹಾಗಾಗಿ ನಿಮ್ಮ ಮತ ನಮ್ಮ ಪಕ್ಷಕ್ಕೆ ನೀಡಿ ಎಂದು ಪ್ರಕಾಶ್ ನೆಡುಂಗಡಿ ಮನವಿ ಮಾಡಿಕೊಂಡಿದ್ದಾರೆ.

Post a Comment

0 Comments

Ad Code

Responsive Advertisement