ನಾಲ್ಕು ದಶಕಗಳಿಂದಲೂ ರಾಜಕೀಯದ ಎಲ್ಲಾ ಆಯಾಮಗಳಲ್ಲಿಯೂ ಸೇವೆ ಸಲ್ಲಿಸುತ್ತಾ ಬಂದಿರುವ ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನಾನು ಸ್ವ-ಇಚ್ಛೆಯಿಂದ ಚುನಾವಣಾ ಕಣದಲ್ಲಿ ನನ್ನ ಹೆಸರನ್ನು ಪರಿಗಣಿಸಬಾರದಾಗಿ ಅವರು ವಿನಂತಿ ಮಾಡಿಕೊಂಡಿದ್ದಾರೆ.
ನಾನು ರಾಜಕೀಯ ಜೀವನದಲ್ಲಿ ಬೂತ್‍ಮಟ್ಟದಿಂದ ಹಿಡಿದು, ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆಯವರೆವಿಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ’ ಎಂದು ಅವರು ವಂದನಾಪೂರ್ವಕವಾಗಿ ತಿಳಿಸಿರುತ್ತಾರೆ.
ಭಾಜಪ ರಾಷ್ಟ್ರೀಯ ಅಧ್ಯಕ್ಷರಾದ ಜಗತ್‍ಪ್ರಕಾಶ್ ನಡ್ಡಾಜಿ ಅವರಿಗೆ ಈಶ್ವರಪ್ಪ ಅವರು ಪತ್ರ ಮುಖೇನ ರಾಜಕೀಯ ನಿವೃತ್ತಿಯನ್ನು ತಿಳಿಸಿರುತ್ತಾರೆ.

0 Comments