Ticker

6/recent/ticker-posts

Ad Code

Responsive Advertisement

ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಆಂಜಿನಪ್ಪ ಪುಟ್ಟು ಏ. 20 ರಂದು ನಾಮ ಪತ್ರ ಸಲ್ಲಿಕೆ

  • ವರದಿ: ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

  • ವಾರ್ತಾಜಾಲ,ಶಿಡ್ಲಘಟ್ಟ: ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿ ಪುಟ್ಟು ಆಂಜಿನಪ್ಪ ನವರು ಸೋಮವಾರ ಅಜ್ಜಕದಿರೇನಹಳ್ಳಿ ಗ್ರಾಮದ ತೋಟದ ಮನೆಯ ಬಳಿ ಕಾಂಗ್ರೇಸ್ ಮುಖಂಡರ ಸಭೆಯನ್ನು ಆಯೋಜಿಸಿದ್ದರು.

  • ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಪುಟ್ಟು ಆಂಜಿನಪ್ಪ ನವರ ಪೋನ್ ಕರೆಗೆ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಭಾಗವಹಿಸಿದ್ದರು, ಇದೇ ಸಮಯದಲ್ಲಿ ಅನೇಕ ಮುಖಂಡರು ಮಾತನಾಡಿ, ಪುಟ್ಟು ಆಂಜಿನಪ್ಪ ನವರಿಗೆ ಕಾಂಗ್ರೇಸ್ ಪಕ್ಷ ಟಿಕೆಟ್ ಕೊಟ್ಟರು, ಟಿಕೆಟ್ ಕೊಡದಿದ್ದರು ಚುನಾವಣೆಗೆ ಸ್ಪರ್ಧಿಸಬೇಕು, ಕ್ಷೇತ್ರದಲ್ಲಿ ಯಾವ ಗ್ರಾಮಕ್ಕೆ ಬೇಟಿ ನೀಡಿದರೂ, ಪುಟ್ಟು ಆಂಜಿನಪ್ಪ ನವರಿಗೆ ನಮ್ಮ ಮತ ಎಂಬುದು ಜನ ಹೇಳುತ್ತಿದ್ದಾರೆ,

  • ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಹಿಂದೆ ಸರಿಯ ಬಾರದು ಎಂಬ ಮಾತುಗಳು ಕೇಳುತ್ತಿದ್ದೇವೆ. ಕ್ಷೇತ್ರ ಅಭಿವೃದ್ಧಿ ಕಾಣ ಬೇಕಾದರೆ ಪುಟ್ಟು ಆಂಜಿನಪ್ಪ ನವರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಸಿದರೆ ಮಾತ್ರ ಸಾದ್ಯವಾಗುತ್ತದೆ ಎಂದು ಕಾಂಗ್ರೇಸ್ ಮುಖಂಡರು ಹಾಗೂ ಪುಟ್ಟು ಆಂಜಿನಪ್ಪ ನವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

  • ಈ ಸಂದರ್ಭದಲ್ಲಿ ಮುಖಂಡರಾದ ಅಶ್ವತ್ಥರೆಡ್ಡಿ, ಅಕ್ಕಲಪ್ಪ, ನರಸಿಂಹರೆಡ್ಡಿ, ಮಂಜುನಾಥ್, ನಾರಾಯಣರೆಡ್ಡಿ, ಬಿ ಸಿ ನರಸಿಂಹರೆಡ್ಡಿ, ವಸಂತಚಾರಿ, ದೇವರಾಜ್, ವೆಂಕಟೇಶ್, ನರಸಿಂಹಪ್ಪ, ಚೌಡಪ್ಪ, ವೆಂಕಟರಾಯಪ್ಪ, ದೇವಪ್ಪ, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

  • ಸಮಾಜಸೇವಕ ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಆಂಜಿನಪ್ಪ ಪುಟ್ಟು ಮಾತನಾಡಿ, ಈದಿನ ನಾಮ ಪತ್ರವನ್ನು ಸಲ್ಲಿಸುವ ಸಲುವಾಗಿ ಕೈವಾರ ತಾತನವರ ದೇವಾಲಕ್ಕೆ ಹೋಗಿ ವಿಶೇಷ ಪೂಜೆಯನ್ನು ಸಲ್ಲಿಸಿ ಆಶೀರ್ವಾದ ಪಡೆದು ಹೊರಬಂದ ಸಮಯದಲ್ಲಿ ಕರೆಮಾಡಿದ ವರಿಷ್ಟರು ನನಗೆ ನಾಮ ಪತ್ರ ಹಾಕದಂತೆ ಸೂಚಿಸಿದ ಹಿನ್ನೆಲೆ ನಾಮಪತ್ರ ಸಲ್ಲಿಸಿಲ್ಲ, ನಿಗದಿತ ಸಮಯದೊಳಗೆ ಅಧಿಕೃತವಾಗಿ ನಿಮಗೆ ಬಿ-ಪಾರ್ಮ್ ನೀಡುತ್ತಿದ್ದಾರೆ, ಆದ್ದರಿಂದ ಏಪ್ರಿಲ್ 20 ರಂದು ಗುರುವಾರ ಸಮಯ 11 ಗಂಟೆಗೆ‌ ನಾಮ ಪತ್ರವನ್ನು ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ನನ್ನ ಅಭಿಮಾನಿಗಳ ಆಶೀರ್ವಾದ ಪಡೆದು ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement