Ticker

6/recent/ticker-posts

Ad Code

Responsive Advertisement

BIG NEWS : ಜಿಲ್ಲಾ ಪೋಲೀಸರ ಕಾರ್ಯಾಚರಣೆ : ಖತರ್ನಾಕ್ ಇರಾನಿ ಗ್ಯಾಂಗ್ ಅಂದರ್

ಕೋಲಾರ. ರಾಜ್ಯದ ನಾನಾ ಭಾಗಗಳಲ್ಲಿ ಸಾರ್ವಜನಿಕರನ್ನ ವಂಚಿಸಿ ಓಡವೆಗಳನ್ನ ಕಸಿದುಕೊಂಡು ಪರಾರಾಯಾಗುವ ಮೂಲಕ  ಪೋಲೀಸರಿಗೆ ತಲೆನೋವಾಗಿದ್ದ ಖುಖ್ಯಾತ ಇರಾನಿ ಗ್ಯಾಂಗ್ ವೊಂದನ್ನ ಬಂಧಿಸುವಲ್ಲಿ ಜಿಲ್ಲಾ ಪೋಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯದಾದ್ಯಂತ ಚೈನ್ ಸ್ನ್ಯಾಚಿಂಗ್ ಹಾಗೂ ಒಂಟಿ ಮಹಿಳೆಯರ  ಹಾಗೂ ಅಮಾಯಕ ವೈದ್ಧರನ್ನ ನಂಬಿಸಿ ಹಣ ದೋಚುತ್ತಿದ್ದ ಪ್ರಕರಣಗಳು ನಡೆಯುತ್ತಿದ್ದು ಕಳೆದೊಂದು ವರುಷದಿಂದ ಇಂತಹ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲೂ ಆಗಾಗ ಘಟಿಸುತ್ತಿದ್ದು ಇದು ಸ್ಥಳೀಯ ಪೋಲೀಸರಿಗೂ ತಲೆ ಬಿಸಿ ಮಾಡಿತ್ತು. ಆದರೆ ಅವರ ನಸೀಬು ಖೋತಾ ಆಗಿ ಕಳೆದೆರಡು ತಿಂಗಳ ಹಿಂದೆ ನಗರದ ಈದ್ಗಾ ಮೈದಾನದ ಬಳಿ ಅಮಾಯಕ ವೈದ್ಧೆಯೊಬ್ಬರು ಬಸ್ ನಿಂದ ಇಳಿದು ಹೌಸಿಂಗ್ ಬೋರ್ಡ್ ಕಾಲೋನಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಪೋಲೀಸರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಅಲ್ಲಿ ಗಲಾಟೆಯಾಗುತ್ತಿದೆ ನೀವು ಒಡವೆಗಳನ್ನ ತೆಗೆದಿರಿಸಿಕೊಂಡು ಹೋಗಿ ಎಂದು ಆಕೆಯನ್ನ ನಂಬಿಸಿ ಒಡವೆ ಪಡೆದು ಆಕೆಯ ಕೈಗೆ ಕಲ್ಲು ಮಣ್ಣಿನ ಪೊಟ್ಟಣವೊಂದನ್ನ ನೀಡಿ ಪರಾರಿಯಾಗಿದ್ದ.

ಈ ಪ್ರಕರಣದಿಂದ  ಹೈ ಅಲರ್ಟ್ ಆದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆಗಳು ನಡೆಸಿದ ನಂತರ ಇವರುಗಳ ಬಂಧನಕ್ಕಾಗಿ ಪ್ರತ್ಯೇಕ ತಂಡಗಳನ್ನ ರಚಿಸಿದ್ದರಲ್ಲದೇ ರಾತ್ರಿ ಗಸ್ತನ್ನು ತೀವ್ರಗೊಳಿಸಿ ಅನುಮಿನಾಸ್ಪದ ವ್ಯಕ್ತಿಗಳನ್ನು ತಪಿಸಣೆಗೊಳಪಡಿಸಲೂ ಸೂಚಿಸಿದ್ದರು.

 ವರಿಷ್ಠಾಧಿಕಾರಿಗಳ ಆದೇಶದಂತೆ  ರಾತ್ರಿ ತಪಾಸಣೆ ನಡೆಸುತ್ತಿದ್ದಾಗ ಬಂಗಾರಪೇಟೆ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಮಾರಕಾಸ್ರ್ತಗಳನ್ನು ಹಿಡಿದು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾಗ ಇರಾನಿ ಗ್ಯಾಂಗ್ ನ ಒಂದಿಬ್ಬರು ಪೋಲೀಸರು ಬೀಸಿದ ಬಲೆಗ ಬಿದ್ದು  ಅವರಿಗೆ ಸಾಕಷ್ಟು ಡ್ರಿಲ್ ನಡೆಸಿದ ನಂತರ ಒಬ್ಬರ ಹೆಸರನ್ನೊಬ್ಬರು ಬಾಯಿ ಬಿಟ್ಟಿದ್ದಾರೆನ್ನಲಾಗಿದೆ.

ಬಂಧಿತ ಆರೋಪಿಗಳು ಮಧ್ಯ ಪ್ರದೇಶದ ಅಬ್ಬಾಸ್ ಆಲಿ ˌ ರಫಿಕ್ ಹುಸೇನ್ ˌ ಅಬ್ಬಾಸ್ ಆಲಿ  s/o ರಫಿಕ್ ಹುಸೇನ್ ˌ  ಮಹಮದ್ ಆಲಿ  ˌ ಖೈದರ್ ಸಾಧಿಕ್ ಜಾಫರಿ ಹಾಗೂ ಆಲಿ ಹೈದರ್ ತಂದೆ ನಜಾಫ್ ಎಂದು ಗುರುತಿಸಲಾಗಿದ್ದು ಇವರುಗಳು ನೀಡಿದ ಮಾಹಿತಿ ಮೇರೆಗೆ ನಗರದಲ್ಲಿ ನಡೆದ ಒಂದಷ್ಟು ಅಪರಾಧ ಪ್ರಕರಣಗಳೂ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲೂ ಇವರು ನಡೆಸಿರುವ ಕೈತ್ಯಗಳು ಒಂದೊಂದಾಗಿ ಬಯಲಾಗಿದೆ.


ಆರೋಪಿಗಳು ಕೋಲಾರ ˌ  ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಗಳಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ  ಸುಳಿಗೆ ˌ ವಂಚನೆ, ಮೋಸˌ ಸರಗಳ್ಳತನ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವುದು ಪೋಲೀಸರ ತನಿಖೆಯಿಂದ ಬಯಲಾಗಿದ್ದು  ಆರೋಪಿಗಳನ್ನ ತಮ್ಮ ವಶಕ್ಕೆ ಒಪ್ಪಿಸಬೇಕೆಂಬ ಒತ್ತಡವೂ ಬಂದಿದೆಯೆನ್ನಲಾಗಿದೆ. 

ಈ ಕುರಿತು ತಮ್ಮ ಅಧಿಕಾರಿ ಹಾಗೂ ಸಿಬ್ಬಂಧಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿರುವ ಜಿಲ್ಲಾ ವರಿಷ್ಠಾಧಿಕಾರಿ ಎಂ. ನಾರಾಯಣ್ ಇಡೀ ಪ್ರಕರಣದ ವಿವರಗಳನ್ನ  ಎಳೆ ಎಳೆಯಾಗಿ ಹಂಚಿಕೊಂಡಿದ್ದು ತಮ್ಮ ಇಲಾಖೆಯ ಅಧಿಕಾರಿಗಳೂ ಹಾಗೂ ಸಿಬ್ಬಂಧಿಗಳ ಚಾಕಚಕ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ಸಾಯಿನಾಥ ದರ್ಗಾ

Post a Comment

0 Comments

Ad Code

Responsive Advertisement