Ticker

6/recent/ticker-posts

Ad Code

Responsive Advertisement

ಶ್ರೀ ಗುರುರಾಯರ ಸನ್ನಿಧಿಯಲ್ಲಿ ಅಯೋಧ್ಯಾಶ್ರೀರಾಮಮಂದಿರ

ಜಯನಗರ 5ನೇ ಬಡಾವಣೆಯ ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ರಾಜಾ, ಕೆ ವಾದೀಂದ್ರಾ ಚಾರ್ ಅವರ ನೇತೃತ್ವದಲ್ಲಿ ನಮ್ಮ ನಿಮ್ಮೆಲ್ಲರ"ಆರಾಧ್ಯದೈವ" "ಶ್ರೀರಾಮನು ಅವತರಸಿದ ಶ್ರೀ ಅಯೋಧ್ಯೆಯ   ಮಂದಿರದ ಮಾದರಿಯನ್ನು  "ಥರ್ಮಕೋಲಿನಿಂದ"  ರಚಿಸಿ- ನಿರ್ಮಾಣಮಾಡಲಾಗಿದೆ.


ಸುಮಾರು ಎರಡು ತಿಂಗಳಕಾಲ ಸಮಯ  ಕೊಟ್ಟು ಬಲುಸುಂದರವಾಗಿ ಅಚ್ಚುಕಟ್ಟಾಗಿ ಶ್ರಮವಹಿಸಿ ಈ ಮಾದರಿ ಮಂದಿರವನ್ನು ನಿರ್ಮಾಣ ಮಾಡಿರುವ   ಕಲೆಗಾರರಾದ ಶ್ರೀಯುತ  ಶ್ರೀವಿನಯ್ ರವರು ಮಾತನಾಡುತ್ತಾ, "ಈ ನಿರ್ಮಾಣದ ಉದ್ದೇಶವು ಶ್ರೀ ಭಗವಾನ್ ಶ್ರೀ ರಾಮನ ಸಿದ್ಧಾಂತ ಮತ್ತು ತತ್ವಗಳನ್ನು ಪರಿಚಯಿಸುವುದು ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ದೇವತೆಗಳ ಪ್ರೇರಣೆಯಿಂದ  ಮಾಡಲಾಗಿದೆ .ಈ ಮಂದಿರದ  ನಿರ್ಮಾಣವನ್ನು ಪರಿಚಯಿಸಲು108 ಸ್ಥಳಗಳಲ್ಲಿ ಪ್ರದರ್ಶಿಸಲು ಸಂಕಲ್ಪಿಸಿದ್ದೇನೆ. ಈ ನಿರ್ಮಾಣ ಕಾರ್ಯವು  ದೈವ ಸಂಕಲ್ಪದಂತೆ ನಡೆದಿದೆ ಆದ್ದರಿಂದ ಶ್ರೀ ಮಠದ ಆವರಣ ದೇವಸ್ಥಾನಗಳ ಆವರಣ , ಶಾಲಾ- ಕಾಲೇಜ್ ಆವರಣಗಳಲ್ಲಿ, ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿ ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ" ಎಂದು ಶ್ರೀ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರಿಗೆ ತಿಳಿಸಿದರು.ಆದ್ದರಿಂದ ಆರ್, ಕೆ ಶ್ರೀ ವಾದಿಂದ್ರಾಚಾರ್ಯರು    06-03-2023 ರಿಂದ 10-03-2023ರವರೆಗೂ ಐದು ದಿನಗಳ ಕಾಲ  ಶ್ರೀ ಮಠದಲ್ಲಿ ಭಕ್ತರಿಗಾಗಿ ವೀಕ್ಷಿಸಲು ವ್ಯವಸ್ತೆಯನ್ನು ಮಾಡಿದ್ದಾರೆ ಎಂದು ಶ್ರೀನಂದಕಿಶೋರಾಚಾರ್ಯರು ತಿಳಿಸಿದರು, ಆದ್ದರಿಂದ ಭಕ್ತರು ಶ್ರೀಮಠಕ್ಕೆಆಗಮಿಸಿ ಅಯೋಧ್ಯೆ ಶ್ರೀ ರಾಮದೇವರ ಕಟ್ಟಡದ  ನಿರ್ಮಾಣದ  ಕಲಾಕೃತಿಯನ್ನು  ದರ್ಶಿಸಿ, 108 ಬಾರಿ ಶ್ರೀರಾಮನಾಮವನ್ನು  ಜಪಿಸಿ  ಶ್ರೀರಾಮನ ಅನುಗ್ರಹಕ್ಕೆ  ಪಾತ್ರರಾಗಬೇಕಾಗಿ ವಿನಂತಿ.

ಹೆಚ್ಚಿನ ಮಾಹಿತಿಗಾಗಿ, ವಿನಯ್- 9538257357.


Post a Comment

0 Comments

Ad Code

Responsive Advertisement