ಕೊಳ್ಳೇಗಾಲ ಸುದ್ದಿ: ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಡಾ. ಬಿ. ಆರ್ . ಅಂಬೇಡ್ಕರ್ ರವರ ಪುತ್ತಳಿ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,
ಡಿ. ವೈ. ಎಸ್. ಪಿ ಮಹಾನಂದ್ ರವರು ಕೆತ್ತನೆ ಮಾಡಿಸಿ ಕೊಡುಗೆ ನೀಡಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಬೆಂಗಳೂರಿನಿಂದ ಆಗಮಿಸುತ್ತಿದ್ದಂತೆ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕೊತ್ತನೂರು ಗ್ರಾಮದ ಮುಖಂಡರು ಹಾಗೂ ಎಚ್. ಕೆ. ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ, ಪ್ರೇಮಲತಾ ಕೃಷ್ಣಸ್ವಾಮಿಯವರು ಹಾಗೂ ಹನೂರು ಕ್ಷೇತ್ರದ ಜೆಡಿಎಸ್ ಮುಖಂಡ ಆರ್. ಮಂಜುನಾಥ್ ರವರು ಪ್ರತಿಮೆಗೆ ಪುಷ್ಪಮಾಲೆಯನ್ನು ಹಾಕಿ ಸ್ವಾಗತಿಸಿದರು,
ಬಾಬಾ, ಸಾಹೇಬ್, ಅಂಬೇಡ್ಕರ್ ಪುತ್ತಳಿಯನ್ನು ಅಲಂಕೃತ ವಾಹನದಲ್ಲಿರಿಸಿ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿಂದ ಮೆರವಣಿಗೆ ಮೂಲಕ ಕರೆತರಲಾಯಿತು,
ಮೆರವಣಿಗೆ ಸಾಗಿ ಬರುವ ಮಾರ್ಗದಲ್ಲಿ ಸಿಗುವ ದನಗೆರೆ, ಸರಗೂರು, ಹೊಸ ಅಣಗಳ್ಳಿ, ಗ್ರಾಮಗಳ ಮುಖಂಡರು ಸಂಘದ ಸದಸ್ಯರುಗಳು ಅಂಬೇಡ್ಕರ್ ರವರ ಪುತ್ತಳಿಗೆ ಪುಷ್ಪಮಾಲೆಗಳನ್ನು ಹಾಕಿ ಗೌರವ ಸಮರ್ಪಿಸಿದರು,
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿ ಹೊಸ ಅಣಗಳ್ಳಿ ಬಳಿ ಸಾಗುತ್ತಿರುವ ಸಂದರ್ಭದಲ್ಲಿ ಆಗಮಿಸಿದ, ಕರ್ನಾಟಕ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜುರವರು ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು,
ವಾದ್ಯಮೇಳ, ಕಂಸಾಳೆ ಕಲಾ ತಂಡ, ತಮಟೆ, ನಗಾರಿ ಕಲಾ ತಂಡಗಳ ಜೊತೆ ಅಂಬೇಡ್ಕರ್ ಪುತ್ತಳಿಯನ್ನು ಮೆರವಣಿಗೆ ಮಾಡಲಾಯಿತು.
ಪುತ್ತಳಿ ಕೊಳ್ಳೇಗಾಲದ ಅಂಬೇಡ್ಕರ್ ಸರ್ಕಲ್ ಬಳಿ ಆಗಮಿಸುತ್ತಿದ್ದಂತೆ ಕೊಳ್ಳೇಗಾಲದ ಅಂಬೇಡ್ಕರ್ ಪುತ್ತಳಿ ನಿರ್ಮಾತೃ ವಾಲೆ ಮಹಾದೇವ ಹಾಗೂ ಪುನೀತ್ ವಾಲೆ ಮಹಾದೇವ ರವರು ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದರು, ಹಾಗೂ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ರವರು ಹಾಗೂ ಮಾಜಿ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಕೂಡ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆಯನ್ನು ಸಲ್ಲಿಸಿದರು,
ಕೊಳ್ಳೇಗಾಲ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಮೆರವಣಿಗೆ ಬಾರಿ ಸ್ವಾಗತ ಲಭಿಸಿತು, ಸರ್ಕಲ್ ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೂರಾರು ಜನರ ಪಟ್ಟಣದ ಕೋರ್ಟ್ ರಸ್ತೆ ಮೂಲಕ ಅಂಬೇಡ್ಕರ್ ಪುತ್ತಳಿ ಮೆರವಣಿಗೆ ಕೊತ್ತನೂರು ಗ್ರಾಮಕ್ಕೆ ತೆರಳಿತು,
ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿಂದ ಕೊಳ್ಳೇಗಾಲ ದೊಡ್ಡಿಂದುವಾಡಿ ಮೂಲಕ ಗ್ರಾಮಕ್ಕೆ ಆಗಮಿಸಿದ ಅಂಬೇಡ್ಕರ್ ಪುತ್ತಳಿಯನ್ನು ಕಳಸ ಹೊತ್ತ ಬಾಲಕೀಯರು ಸ್ವಾಗತಿಸಿ ಬೌದ್ಧ ಧಮ್ಮದ ವಿಧಿವಿಧಾನಗಳೊಂದಿಗೆ ಪುತ್ತಳಿಯನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು,

0 Comments