ದಾಸರಹಳ್ಳಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಫೋಟೋ ಇರುವ ದಾಸ್ಥಾನು ಗಳನ್ನು ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವಾಣಿಜ್ಯ ತೆರಿಗೆ ಅಧಿಕಾರಿಗಳು ಹಾಗೂ ಚುನಾವಣೆ ಅಧಿಕಾರಿಗಳು ಸೀಜ್ ಮಾಡಿ ದೂರು ದಾಖಲಿಸಿದ್ದಾರೆ. ಆದರೆ ಈ ಉಡುಗೊರೆಗಳನ್ನು ಹಿಂದೂ ಕಾರ್ಯಕರ್ತರು ಕೇಳಿದ್ದರು ಅವರಿಗೆ ಕೊಡಲು ತರಿಸಲಾಗಿತ್ತು. ಎಂದು ಜೆಡಿಎಸ್ ಶಾಸಕ ಸುಳ್ಳು ಹೇಳಿ ರಾಷ್ಟ್ರಿಯ ಸ್ವಯಂ ಸೇವಕ ಸಂಘ ಹಾಗೂ ಹಿಂದೂ ಕಾರ್ಯಕರ್ತರುಗಳ ಮನಸ್ಸಿಗೆ ನೋವು ಹಾಗೂ ಅವಮಾನ ಮಾಡಿದ್ದಾರೆ ಎಂದು ದಾಸರಹಳ್ಳಿ ಬಿಜೆಪಿ ಅಭ್ಯರ್ಥಿ ಎಸ್. ಮುನಿರಾಜು ಜೆಡಿಎಸ್ ವಿರುದ್ಧ ಆಕ್ರೋಶ ವೆಕ್ತ ಪಡಿಸಿದ್ದಾರೆ.
ಇಂದು ದಾಸರಹಳ್ಳಿ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿದ ಮುನಿರಾಜು 2013 ರಲ್ಲಿ ನಡೆದ ಚುನಾವಣೆ ಸಮಯದಲ್ಲಿ ಜೆಡಿಎಸ್ ಶಾಸಕ ಉಡುಗೊರೆ ಕೊಡುವೆ ಎಂದು ಟೋಕನ್ ಹಂಚಿದ್ದರು. ಆ ರೀತಿಯ ಟೋಕನ್ ಈಗಲೂ ಜನ ತಂದು ನನ್ನಲ್ಲಿ ತೋರಿಸಿ ಈ ಸುಳ್ಳು ಹೇಳುವ ಶಾಸಕರನ್ನು ಸೋಲಿಸಲು ನಿರ್ಧಾರ ಮಾಡಿದ್ದಾರೆ. ದಾಸರಹಳ್ಳಿಯಲ್ಲಿ ಬಿಜೆಪಿ ಪರ ವಾಗಿ ಜನ ಮತ ನೀಡಲು ತೀರ್ಮಾನ ಮಾಡಿದ್ದಾರೆ. ಹೋದಕಡೆ, ಬಂದಕಡೆ ಜೆಡಿಎಸ್ ಮುಖ್ಯ ಮಂತ್ರಿ ಕುಮಾರಸ್ವಾಮಿ ಅನುದಾನ ಕೊಟ್ಟಿದ್ದರು. ಬಿಜೆಪಿಯವರು ಕಿತ್ತು ಕೊಂಡರು ಅಂತ ಬರೀ ಬೊಗಳೆ ಮಾತುಗಳಿಂದ ಸುಳ್ಳು ಹೇಳಿಕೊಂಡು ಜೆಡಿಎಸ್ ಶಾಸಕ ತಿರುಗಾಡುತ್ತಿದ್ದಾರೆ ಆದ್ದರಿಂದ ಜನ ಇವರನ್ನು ಟೋಕನ್ ಕೊಟ್ಟು ಮನೆಗೆ ಕಳಿಸುತ್ತಾರೆಂದು ಮುನಿರಾಜು ಹೇಳಿದ್ದಾರೆ.
ಈಗ ಸಿಕ್ಕಿರುವ ಮೌಲ್ಯ ಸುಮಾರು ಎಂಟು ವರೆ ಲಕ್ಷ ರೂಪಾಯಿಗೂ ಹೆಚ್ಚಿರುವ ಸಾಧ್ಯತೆ ಇದೆ ಇದನ್ನು ಚುನಾವಣೆ ಲೆಕ್ಕಕ್ಕೆ ಸೇರಿಸಿಕೊಂಡು ಇವರ ವಿರುದ್ಧ ಚುನಾವಣೆ ಅಧಿಕಾರಿಗಳು ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ
ನಾವು ಹಿಂದೂ ಕಾರ್ಯಕರ್ತರು ಅಂತ ಹೇಳಲು ನಮಗೆ ಹೆಮ್ಮೆ ಇದೆ ನಾವು ಆರ್ ಎಸ್ ಎಸ್ ನಲ್ಲಿ ಇದ್ದೇವೆ ನಮ್ಮಲ್ಲಿ ಯಾವುದೇ ಉಡುಗೊರೆ ಪಡೆಯುವ ಪದ್ಧತಿ ಇಲ್ಲ. ಅದನ್ನು ಹೇಳಿಕೊಟ್ಟಿಲ್ಲ ವಿನಾಕಾರಣ ನಾವು ಜೆಡಿಎಸ್ ಶಾಸಕರಿಗೆ ಉಡುಗೊರೆ ಕೇಳಿದ್ದೆವು ಅಂತ ಏಕೆ ಸುಳ್ಳು ಹೇಳುತ್ತೀರಿ ನಾವು ಕೇಳಿದ್ದಕ್ಕೆ ನಿಮ್ಮಲ್ಲಿ ಧಾಖಲೆ ಇದ್ದರೆ ತೋರಿಸಿ. ಇಲ್ಲದಿದ್ದರೆ ನಾವು ನಿಮ್ಮ ಮೇಲೆ ದೂರು ದಾಖಳಿಸುತ್ತೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ, ಹಿಂದೂ ಕಾರ್ಯಕರ್ತ ಹಾಗೂ ದಾಸರಹಳ್ಳಿ ಬಿಜೆಪಿ ಮಂಡಲ್ ಕೋರ್ ಕಮಿಟಿ ಸದಸ್ಯ ಶರತ್ ಹೊಂಬಾಳೆ ತಿಳಿಸಿದ್ದಾರೆ
ಈ ಕೂಡಲೇ ಜೆಡಿಎಸ್ ರಾಜ್ಯ ವಕ್ ತಾರ ಚರಣ್ ಗೌಡ, ಹಾಗೂ ಸುಳ್ಳಿನ ಸರದಾರ ಶಾಸಕ ಮಂಜುನಾಥ್ ಹಿಂದೂಗಳಿಗೆ ಕ್ಷಮಿಸಿ ಎಂದು ಕೇಳಬೇಕು ಇಲ್ಲದಿದ್ದಲ್ಲಿ ಹಿಂದೂಗಳು ಜಾಗೃತರಾಗಿ ನಿಮ್ಮ ವಿರುದ್ಧ ಧ್ವನಿ ಎತ್ತ ಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ಕೊಟ್ಟರು/
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ. ಎಸ್. ಗಂಗರಾಜು ಹಾಗೂ ಕೃಷ್ಣಮೂರ್ತಿ ಉಪಸ್ಥಿತರಿದ್ದರು/
ವರದಿ. ಎಂ ಶ್ರೀನಿವಾಸ್ ಕುಮಾರ್

0 Comments