ಬೆಂಗಳೂರು, ಮಾರ್ಚ್ 3 (ಕರ್ನಾಟಕ ವಾರ್ತೆ): ಬನ್ನೇರುಘಟ್ಟ ಜೈವಿಕ ಉದ್ಯಾನವನವು, ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ನವದೆಹಲಿಯ ಸಹಯೋಗದೊಂದಿಗೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 1, 2023 ರವರೆಗೆ 3 ದಿನಗಳ "ಪ್ರಾದೇಶಿಕ ಪ್ರಾಣಿಪಾಲಕರ ಸಾಮಥ್ರ್ಯ ವರ್ಧನೆ ಕಾರ್ಯಾಗಾರ" ನಡೆಸಲಾಯಿತು.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ 20 ಮೃಗಾಲಯಗಳಿಂದ 29 ಪ್ರಾಣಿಪಾಲಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪ್ರಾಣಿಪಾಲಕರಿಗೆ ದಿನನಿತ್ಯದ ಅಭ್ಯಾಸಗಳ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು ಮತ್ತು ವಿಶೇಷ ಆರೈಕೆ ಮತ್ತು ಕಠಿಣ ಮೇಲ್ವಿಚಾರಣೆಯ ಅಗತ್ಯವಿರುವ ಪ್ರಕರಣಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೆಚ್ಚಿಸಲು ಕ್ಷೇತ್ರ ತಜ್ಞರಿಂದ ವಿವಿಧ ತಾತ್ತ್ವಿಕ ಮತ್ತು ಪ್ರಾಯೋಗಿಕ ಅಧಿವೇಶನಗಳನ್ನು ನಡೆಸಲಾಯಿತು.
ಡಾ. ಗೌರಿ ಮಲ್ಲಾಪುರ್ ಮತ್ತು ಲಕ್ಷ್ಮೀನರಸಿಂಹ ಅವರು ಮೃಗಾಲಯದ ನಿರ್ವಹಣೆಯಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಪಾತ್ರ, ಮೃಗಾಲಯಗಳಲ್ಲಿರುವ ಸರೀಸೃಪಗಳು ಮತ್ತು ಪಕ್ಷಿಗಳ ಪಾಲನೆ ಕುರಿತು ಅಧಿವೇಶನಗಳನ್ನು ನಡೆಸಿಕೊಟ್ಟರು. ಪ್ರಾಣಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಮತ್ತು ನಿಗ್ರಹಿಸಲು ಬಳಸುವ ಸಲಕರಣೆಗಳ ಪ್ರಾತ್ಯಕ್ಷಿಕೆ, ವಿವಿಧ ಜಾತಿಗಳಿಗೆ ಬಳಸುವ ವಿವಿಧ ಗುರುತಿನ ತಂತ್ರಗಳು ಮತ್ತು ಅವಶ್ಯಕ ಪಕ್ಷಿ ಜಾತಿಗಳಿಗೆ ಗೂಡಿನ ಪೆಟ್ಟಿಗೆಯ ವಿನ್ಯಾಸಗಳನ್ನು ಸಹ ಪ್ರಾಣಿಪಾಲಕರಿಗೆ ತೋರಿಸಲಾಯಿತು. ಸಹಾಯಕ ನಿರ್ದೇಶಕರು (ಪಶುವೈದ್ಯಕೀಯ ಸೇವೆ), ಡಾ. ಉಮಾಶಂಕರ್ ಕೆ ಎಸ್ ಮತ್ತು ಡಾ. ವಿಜಯ್ ಕುಮಾರ್ ಎನ್ ಅವರು ಪ್ರಾಣಿಪಾಲಕರು ತಮ್ಮ ಮತ್ತು ತಮ್ಮ ಪ್ರಾಣಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ಜೈವಿಕ ಸುರಕ್ಷತಾ ಕ್ರಮಗಳ ಕುರಿತು ಅಧಿವೇಶನ ನಡೆಸಿದರು.
ಗದಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಧನಲಕ್ಷ್ಮಿ ಅವರು ಪ್ರಾಣಿ ಪಾಲಕರ ಪಾತ್ರ ಮತ್ತು ಮೃಗಾಲಯಗಳಲ್ಲಿ ಪ್ರಾಣಿಗಳು ಮತ್ತು ನಿರ್ವಹಣೆಯ ನಡುವಿನ ಅಂತರದ ಸೇತುವೆಯಾಗಿ ಕಾರ್ಯನಿರ್ವಹಿಸುವ ಕುರಿತು ಅಧಿವೇಶನ ನಡೆಸಿಕೊಟ್ಟರು. ಡಾ. ಮಂಜುನಾಥ್, ಸಹಾಯಕ ಪ್ರಾಧ್ಯಾಪಕರು Iಂಊ & ಗಿಃ, ಏಗಿಂಈSU ಅವರು ಮೃಗಾಲಯದಲ್ಲಿ ಸಸ್ಯಾಹಾರಿಗಳನ್ನು ನಿರ್ವಹಿಸುವ ಕುರಿತು ಅಧಿವೇಶನ ನಡೆಸಿದರು ಮತ್ತು ಪ್ರಾಣಿಗಳು ಸೆರೆಯಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಯಾವ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನ ವನ್ಯಜೀವಿ ಅಧ್ಯಯನ ಕೇಂದ್ರದ ಸಂಯೋಜಿತ ವಿಜ್ಞಾನಿ ಡಾ. ಅಜಿತ್ ಕುಮಾರ್ ಅವರು ವಿವಿಧ ಕೋತಿ ವರ್ಗಗಳ ನಡವಳಿಕೆ, ಜೀವಶಾಸ್ತ್ರ ಮತ್ತು ಕಾಡಿನಲ್ಲಿ ಅವುಗಳ ಚಟುವಟಿಕೆಯ ಮಾದರಿಯ ಕುರಿತು ಅಧಿವೇಶನ ನಡೆಸಿದರು. ಅದರಂತೆ ಪ್ರಾಣಿಪಾಲಕರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಬಹುದು ಎಂದು ತಿಳಿಸಿದರು. ಹೊಳೆಮತ್ತಿ ನೇಚರ್ ಫೌಂಡೇಶನ್ನ ಸಂರಕ್ಷಣಾ ಜೀವಶಾಸ್ತ್ರಜ್ಞ ಸಂಜಯ್ ಗುಬ್ಬಿ ಅವರು ಕಾಡಿನಲ್ಲಿ ಚಿರತೆಗಳ ಅಧ್ಯಯನದ ಅನುಭವವನ್ನು ಹಂಚಿಕೊಂಡರು ಮತ್ತು ಕಾಡಿನಲ್ಲಿ ಅವುಗಳ ನೈಸರ್ಗಿಕ ನಡವಳಿಕೆಗೆ ಅನುಗುಣವಾಗಿ ಮೃಗಾಲಯಗಳಲ್ಲಿ ಅವುಗಳನ್ನು ಹೇಗೆ ನಿರ್ವಹಿಸಬಹುದು ಎಂದು ತಿಳಿಸಿದರು. ವಿವಿದ ಮೃಗಾಲಯಗಳಿಂದ ಬಂದಂತಹ ಪ್ರಾಣಿಪಾಲಕರುಗಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡುತ್ತಿರುವ ಮಾಹಿತಿಯನ್ನು ಅವರ ಮಾತೃ ಭಾμÉೀಯಲ್ಲಿ ತಿಳಿಸುವ ನಿಟ್ಟಿನಲ್ಲಿ ತಮಿಳು, ಮಲಯಾಳಂ ಮತ್ತು ತೆಲುಗು ಭಾμÁಂತರಕಾರರ ವ್ಯವಸ್ಥೆಗೊಳಿಸಲಾಗಿತ್ತು.
ಪ್ರಾಣಿಪಾಲಕರುಗಳು ವಿವಿದ ಪ್ರಾಣಿಗೃಹಗಳಲ್ಲಿ ಕೈಗೊಳ್ಳಬಹುದಾದ ಪುಷ್ಠಿಕರಣದ ಬಗ್ಗೆ ಪ್ರಾಯೋಗಿಕ ಚಟುವಟಿಕೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೀವಶಾಸ್ತ್ರಜ್ಞೆಯಾದ ಐಶ್ವರ್ಯ ನಡೆಸಿಕೊಟ್ಟರು. ಕರಡಿ ಹಾಗೂ ಕೋತಿಗಳಿಗೆ ಬೇಸಿಗೆಯ ಪುಷ್ಠೀಕರವಾಗಿ ಹಣ್ಣುಗಳೊಳಗೊಂಡ ಐಸ್‍ಬ್ಲಾಕ್‍ಗಳನ್ನು ನೀಡಲಾಯಿತು, ಜಿಂಕೆಗಳ ಹಿಕ್ಕೆಗಳನ್ನು ಹುಲಿಗಳ ಆವರಣದಲ್ಲಿ ಘ್ರಾಣ ಪುಷ್ಟೀಕರಣವಾಗಿ ನೀಡಲಾಯಿತು ಮತ್ತು ಜೀಬ್ರಾ ಮತ್ತು ಕೋತಿಗಳಿಗೆ ಬಿದಿರಿನ ಪಜಲ್ ಫೀಡರ್ಗಳನ್ನು ನೀಡಲಾಯಿತು. ಪ್ರಾಣಿಪಾಲಕರು ಮೃಗಾಲಯಗಳಲ್ಲಿ ತಮ್ಮ ಆರೈಕೆಯಲ್ಲಿರುವ ವಿವಿಧ ಜಾತಿಪ್ರಾಣಿಗಳನ್ನು ಉತ್ಕøಷ್ಟಗೊಳಿಸಲು ದಿನನಿತ್ಯದ ಆಧಾರದ ಮೇಲೆ ತಮ್ಮದೇ ಆದ ವಿವಿಧ ಪುಷ್ಟೀಕರಣ ಸಾಧನಗಳನ್ನು ಹೇಗೆ ರಚಿಸಬಹುದು ಎಂಬುದನ್ನು ವಿವರಿಸಲಾಯಿತು. ಮೃಗಾಲಯಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಸಂರಕ್ಷಣಾ ಸಂದೇಶವನ್ನು ತಿಳಿಸಲು ತಮ್ಮ ಆರೈಕೆಯಲ್ಲಿರುವ ಪ್ರಾಣಿಯ ಬಗ್ಗೆ ಮಾತನಾಡುವ ಚಟುವಟಿಕೆಯನ್ನು ಆಯೋಜಿಸಲಾಯಿತು. ಕಾರ್ಯಾಗಾರದ ಕೊನೆಯಲ್ಲಿ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಪ್ರಾಣಿಪಾಲಕರುಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕಾರ್ಯಾಗಾರವನ್ನು ಬಿ.ಪಿ ರವಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿ, ಮೃಗಾಲಯ ಪ್ರಾಧಿಕಾರ, ಮೈಸೂರು, ರವರು ಉದ್ಘಾಟಿಸಿದರು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುನೀಲ್ ಪನ್ವಾರ್, ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರತಿನಿಧಿಗಳಾದ ಡಾ. ಗೌರಿ ಮಲ್ಲಾಪುರ್, ಪಶುವೈದ್ಯಕೀಯ ಸಲಹೆಗಾರ್ತಿ ಮತ್ತು ಲಕ್ಷ್ಮೀನರಸಿಂಹ ಆರ್, ವೈಜ್ಞಾನಿಕ ಅಧಿಕಾರಿ, ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
0 Comments