Ticker

6/recent/ticker-posts

Ad Code

Responsive Advertisement

ಬೈರ ಹನುಮಯ್ಯ ವಸತಿ ನಿಲಯದ ಉದ್ಘಾಟ

 


  • ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್-45(61)ರಲ್ಲಿ  ಭಾನುವಾರದಂದು ಯಶವಂತಪುರದ ಬೈರ ಹನುಮಯ್ಯ ವಸತಿ ನಿಲಯದ 2 ನೇ ಘಟಕ ವನ್ನು ವಿದ್ಯುಕ್ತವಾಗಿ ಕ್ಷೇತ್ರದ ಶಾಸಕರು ಮತ್ತು ರಾಜ್ಯ ಸಚಿವರಾದ  ಡಾ.ಸಿ.ಎನ್.ಅಶ್ವಥ್ ನಾರಾಯಣ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರು, ಬಿ.ಜೆ.ಪಿ. ಮುಖಂಡರಾದ ಡಿ. ಸುರೇಶ್ ಗೌಡರು, ನಿಕಟ ಪೂರ್ವ ಬಿ.ಬಿ.ಎಂ.ಪಿ ಸದಸ್ಯರಾದ ಎನ್. ಜಯಪಾಲ್ ರವರು, ಧನಲಕ್ಷ್ಮೀ ಕನ್ಸ್ಟ್ರಕ್ಷನ್ ಮಾಲೀಕರು ಹಾಗೂ ಬಿಜೆಪಿ ಮುಖಂಡರಾದ ಎಸ್. ರಮೇಶ್‌, ಪದ್ಮಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷ   ಸಿ.ಎನ್.ಸತೀಶ್, ಬಿ.ಸತ್ಯನಾರಾಯಣ (ನಾಣಿ),  ಬಿ.ಬಿ.ಎಂ.ಪಿ ಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. 

ಸದರಿ ವಸತಿ ನಿಲಯದ ಸಮುಚ್ಛಯದಲ್ಲಿ, ಒಂದು ಹಾಲು, ರೂಮು, ಅಡುಗೆ ಮನೆ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಒಳಗೊಂಡಿರುವ ಒಟ್ಟಾರೆ 108 ಮನೆಗಳು ನಿರ್ಮಾಣಗೊಂಡಿದ್ದು, ಸಂಪೂರ್ಣವಾಗಿ ಪಾಲಿಕೆಯು  ಅಂದಾಜು 10.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ಸುಮಾರು 70 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಡಾ. ಸಿ.ಎನ್. ಅಶ್ವತ್ಥನಾರಾಯಣರವರ ಕಾಳಜಿಯ ಮೇರೆಗೆ, ಸ್ಥಳೀಯ ಪಾಲಿಕೆ ಸದಸ್ಯರಾಗಿ ಜನಪರ ಕೆಲಸಗಳನ್ನು ಮಾಡುವ ಸಂಕಲ್ಪದಿಂದ ಇಲ್ಲಿನ ನಿವಾಸಿಗಳೆಲ್ಲರಿಗೂ ಶಾಶ್ವತ ಸೂರನ್ನು ಕಲ್ಪಿಸುವ ಎನ್.ಜೈಪಾಲ್ ರವರ ಧೃಡ ನಿರ್ಧಾರದಿಂದಾಗಿ  ಸ್ಥಳ ದಾನಿಗಳಾದ ಪಟೇಲ್  ಭೈರಹನುಮಯ್ಯನವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಈ ವಸತಿ ಸಮುಚ್ಛಯ ನಿರ್ಮಾಣ  ಕಾಮಗಾರಿಯನ್ನು ಗುತ್ತಿಗೆದಾರರಾದ ಎಸ್.ರಮೇಶ್, ಸಂತೋಷ್ ಮೆ. ಶ್ರೀ ಧನಲಕ್ಷ್ಮೀ ಕನ್ಸ್ಟ್ರಕ್ಷನ್ಸ್ ರವರ ಗುಣಮಟ್ಟದ ಕಾಮಗಾರಿಯು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ  ವಾರ್ಡ್-45(61)ರ ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಸಮಸ್ತ ಬೂತ್ ಅಧ್ಯಕ್ಷರು, ಕಾರ್ಯಕರ್ತ ವೃಂದದವರು ಹಾಗೂ ಕ್ಷೇತ್ರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Post a Comment

0 Comments

Ad Code

Responsive Advertisement