Ticker

6/recent/ticker-posts

Ad Code

Responsive Advertisement

*ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕರವೇ ಕಾರ್ಯಕರ್ತರಿಂದ ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆ*


ಬೆಂಗಳೂರು : ಇಂದು ನಗರದ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿತ್ತು.

 ಕರ್ನಾಟಕ ರಕ್ಷಣಾ ವೇದಿಕೆಯ 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮಾಚರಣೆಹಾಗೂ ಕರ್ನಾಟಕ ಸಾಂಸ್ಕೃತಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಡಾ. ಜಿ.ಎಸ್. ಚೌಧರಿರವರ ನೇತೃತ್ವದಲ್ಲಿ ಯಶವಂತಪುರದಿಂದ ಕನ್ನಡ ಸೇನಾನಿಗಳು ದ್ವಿಚಕ್ರ ವಾಹನಗಳಲ್ಲಿ ಕನ್ನಡ ಧ್ವಜಗಳನ್ನು ಹೊತ್ತು ಮೆರವಣಿಗೆಯ ಮೂಲಕ, ಸಿ. ವಿ. ರಾಮನ್ ರಸ್ತೆಯಲ್ಲಿ ಕನ್ನಡ ಪರ ಜಯಘೋಷಗ ಳನ್ನು ಮೊಳಗಿಸುತ್ತಾ ಮೇಕರಿ ವೃತ್ತವನ್ನು ಹಾದು ಸಮಾರಂಭದ ಸ್ಥಳಕ್ಕೆ ಆಗಮಿಸಿದರು. ಮೆರವಣಿಗೆಯ ಮುಂಚೂಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಲ್ಲೇಶ್ವರ ಕ್ಷೇತ್ರದ ಉಪಾಧ್ಯಕ್ಷರಾದ ಎನ್. ಆರ್. ಪರಮೇಶ್ವರಯ್ಯ, ಬೆಂಗಳೂರು ನಗರ ಜಿಲ್ಲೆಯ ಉಪಾಧ್ಯಕ್ಷನರಸಿಂಹ ರಾಜ್‌ ಅರಸು (ಕೆಪಿ), ಯುವಘಟಕಅಧ್ಯಕ್ಷ ನವೀನ್ ಗೌಡ, ಸಂಚಾಲಕರಾದ ಕರಿಯ ವಿನೋದ್, ಮಂಜುನಾಥ್ ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲೇಶ್ವರಂ ಭಾಗದ  ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement