ಕೊಳ್ಳೇಗಾಲ ಸುದ್ದಿ : ನಗರಸಭೆ ಹಲವು ವಾರ್ಡ್ ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎನ್. ಮಹೇಶ್ ರಿಂದ ನಗರಸಭೆಯ ನಗರೋತ್ತಾನದ 4 ನೇ ಹಂತದ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಅನುಮೋದನೆ ದೊರೆತ್ತಿದ್ದು ನಗರೋತ್ತಾನದ ಸುಮಾರು 6.ಕೋಟಿ 66 ಲಕ್ಷದ 95 ಸಾವಿರ ರೂಪಾಯಿ ಅನುದಾನದಲ್ಲಿ ನಗರಸಭೆಯ ವಾರ್ಡ್ ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳಿಗೆ ಶಾಸಕ ಎನ್. ಮಹೇಶ್ ರವರು ಗುದ್ದಲಿ ಪೂಜೆಯನ್ನು ನಡೆಸಿದರು,
ಗುದ್ದಲಿ ಪೂಜೆಯನ್ನು ನೆರವೇರಿಸಿ ಶಾಸಕರು ಮಾತನಾಡಿ ನಗರಸಭೆ ನಗರೋತ್ತಾನದ 4 ನೇ ಹಂತದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದ್ದು, ಟೆಂಡರ್ ನಲ್ಲಿ ಅನುಮೋದನೆ ದೊರೆತು,
ರಾಜ್ಯ ಸರ್ಕಾರ 35 ಕೋಟಿ ಅನುದಾನವನ್ನ ನಗರಸಭೆಗಳಿಗೆ ಬಿಡುಗಡೆ ಮಾಡಿದೆ,
ಅದರಲ್ಲಿ ಕೊಳ್ಳೇಗಾಲ ಬಸ್ ನಿಲ್ದಾಣಕ್ಕೆ 10 ಕೋಟಿ ಪಟ್ಟಣದ ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 7 ಕೋಟಿ 49 ಲಕ್ಷದ 22 ಸಾವಿರ ಬಿಡುಗಡೆ ಆಗಿತ್ತು, ಅದರಲ್ಲಿ ಟೆಂಡರ್ ಆಗಿರುವುದು 6 ಕೋಟಿ 66 ಲಕ್ಷದ 95 ಸಾವಿರ ಅನುದಾನದಲ್ಲಿ 7 ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗಿದ್ದು ಸಾಂಕೇತಿಕವಾಗಿ 4 ಕಡೆ ಗುದ್ದಲಿ ಪೂಜೆಯನ್ನು ಮಾಡಲಾಗಿದೆ,
ಪಟ್ಟಣದ ಅರಣ್ಯ ಇಲಾಖೆ ಆಫೀಸ್ ಮಾರ್ಗದ ರಸ್ತೆಯಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಶಿವಕುಮಾರ ಬಡಾವಣೆಯಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಭೀಮನಗರ ಅಂಬೇಡ್ಕರ್ ಹಾರ್ಚ್ ನಿಂದ ಕಾವೇರಿ ರಸ್ತೆ ಅಭಿವೃದ್ಧಿ ಕಾಮಗಾರಿ, ಬಸ್ ನಿಲ್ದಾಣ ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಕೆ ಮತ್ತು ರಸ್ತೆ ಅಭಿವೃದ್ಧಿ, ಅಮ್ಮನ್ ಕಾಲೋನಿಯಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಪೌರಕಾರ್ಮಿಕರ ಬೀದಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಆಶ್ರಯ ಬಡಾವಣೆ ಸಿಸಿ ರಸ್ತೆ ಚರಂಡಿ ನಿರ್ಮಾಣ, ಹಾಗೂ ಹಲವು ವಾರ್ಡ್ ಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನಡೆಸಲಾಗಿದೆ, ಮೈಸೂರಿನ ಗುತ್ತಿಗೆದಾರರು ಕಾಮಗಾರಿಯನ್ನು ನಿರ್ವಹಿಸಲಿದ್ದು ಕಾಮಗಾರಿಯನ್ನು ಉತ್ತಮವಾಗಿ ನಡೆಸಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದರು,
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ನಂಜುಂಡಸ್ವಾಮಿ, ಇಂಜಿನಿಯರ್ ನಾಗೇಂದ್ರ, ಗುತ್ತಿಗೆದಾರರಾದ ರಾಜಶೇಖರ್, ಸತೀಶ್, ಹಾಗೂ ಇನ್ನಿತರರು ಇದ್ದರು.
.jpeg)
0 Comments