Ticker

6/recent/ticker-posts

Ad Code

Responsive Advertisement

ಫಿಟ್ ಇಂಡಿಯಾ ಅಭಿಯಾನವನ್ನು ಯಶಸ್ವಿಗೊಳಿಸಿ

ಫಿಟ್ ನೆಸ್ ನ್ನು ಯುವಕರ ಮೂಲಮಂತ್ರವಾಗಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಫಿಟ್ ಇಂಡಿಯಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಲೋಕಾಯುಕ್ತ ಪೋಲಿಸ್ ಅಧಿಕಾರಿ ಶ್ರೀ ಶ್ರೀನಾಥ್ ಜೋಶಿ  ಕರೆ ನೀಡಿದರು.



ಸ್ಪಾರ್ಟನ್ಸ್ ಫಿಟ್ ನೆಸ್ ಸ್ಟುಡಿಯೋ ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ಯೋಗ ಮತ್ತು ವ್ಯಾಯಾಮಗಳನ್ನು ಮಾಡುವುದರಿಂದ ರಕ್ತಸಂಚಾರ ವೃದ್ಧಿಸುತ್ತದೆ. ನಿಯಮಿತವಾಗಿ ವರ್ಕ್ ಔಟ್ ಮಾಡುವುದರಿಂದ ಹಲವು ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್ ಅವರು ಮಾತನಾಡಿ, ಆರೋಗ್ಯಕರ ದೇಹವು ಮಾನವನ ಅತಿದೊಡ್ಡ ಆಸ್ತಿಯಾಗಿದ್ದು, ದೇಹವನ್ನು ದಂಡಿಸಿ ಮಾನಸಿಕವಾಗಿ ಫಿಟ್ ಆಗಿರುವ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಅವರು ತಿಳಿಸಿದರು.

ಹಿರಿಯ ವ್ಯಾಯಾಮಪಟು ಪ್ರಕಾಶ್ ಭಾರದ್ವಾಜ್, ಡಾ. ಚೇತನಾ, ಹನುಮೇಶ್ ಯಾವಗಲ್, ಶ್ರೀಧರ್ ಮತ್ತು ರಾಮನ್ ಅಯ್ಯಂಗಾರ್ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement