Ticker

6/recent/ticker-posts

Ad Code

Responsive Advertisement

ಬೆಂಗಳೂರು ಪಿ ಐ ಬಿ ಮಾಜಿ ಮುಖ್ಯಸ್ಥ ಡಾ. ಬಿ. ಕೃಷ್ಣಾನಂದ ಹೆಗ್ಡೆ ನಿಧನ

ಕೇಂದ್ರ ವಾರ್ತಾ ಸೇವೆಯ ನಿವೃತ್ತ ಹಿರಿಯ ಅಧಿಕಾರಿ , ದೆಹಲಿಯ ಆಕಾಶವಾಣಿ ವಾರ್ತಾ ಇಲಾಖೆಯ ಮಾಜಿ ಜಂಟಿ ನಿರ್ದೇಶಕರು, ಬೆಂಗಳೂರು ಪಿಐಬಿಯ ಮಾಜಿ ಮುಖ್ಯಸ್ಥ ಡಾ. ಬಿ. ಕೆ. ಹೆಗ್ಡೆ ಯವರು ತಮ್ಮ 87ನೆ ವಯಸ್ಸಿನಲ್ಲಿ ಬೆಂಗಳೂರ್ ನಲ್ಲಿ ನಿಧನ ಹೊಂದಿದರು.

ಭಾರತೀಯ ಸಮಾಚಾರ ಸೇವೆ ಯಲ್ಲಿ ಕೇಂದ್ರ ಸರಕಾರದ ಹಲವು ಪ್ರಚಾರ ಮಾದ್ಯಮಗಳಲ್ಲಿ 3 ದಶಕ ಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಇವರು ಜಾಹೀರಾತು ಮತ್ತು ದ್ರಶ್ಯ ಪ್ರಚಾರ, ಪತ್ರಿಕಾ ಪ್ರಚಾರ ಮತ್ತು ಕ್ಷೇತ್ರ ಪ್ರಚಾರ ವಿಭಾಗ ಗಳಲ್ಲಿ ಹಿರಿಯ ಅಧಿಕಾರಿಯಾಗಿ, ಚಲನ ಚಿತ್ರ ಸೆನ್ಸಾರ್ ಮಂಡಳಿಯಲ್ಲಿ ಪ್ರಾದೇಶಿಕ ಅಧಿಕಾರಿಯಾಗಿ, ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಆಕಾಶವಾಣಿಯ ವಿಶೇಷ ಬಾತ್ಮಿದಾರರಾಗಿ , 1980ರ ದಶಕವಿಡೀ ಬೆಂಗಳೂರು ನಲ್ಲಿ ಕೇಂದ್ರ ಸರಕಾರದ ವಾರ್ತಾ ಇಲಾಖೆಯ ಮುಖ್ಯ ಅಧಿಕಾರಿಯಾಗಿದ್ದರು. ಸರಕಾರಿ ಸೇವೆ ಯಿಂದ ನಿವೃತ್ತರಾದ ಬಳಿಕ ಮಣಿಪಾಲ ಟಿ. ಎ. ಪೈ ಮೆನೆಜ್ಮೆಂಟ್ ಇನ್ಸ್ಟಿಟ್ಯೂಟ್ ನಲ್ಲಿ ಪ್ರಾದ್ಯಾಪಕರಾಗಿ, ಮಣಿಪಾಲ ದಿಂದ ಹೊರಬರು ತಿದ್ದ ಇಂಗ್ಲಿಷ್ ದಿನ ಪತ್ರಿಕೆ ಮೋರನಿಂಗ್ ನ್ಯೂಸ್ ನ ಸಂಪಾದಕ ರಾಗಿದ್ದರು.

ಚಾರಿತ್ರಿಕ ಸಂಶೋದನೆಯಲ್ಲಿ ತೊಡಗಿಸಿ ಕೊಂಡಿದ್ದ ಇವರು ಹಲವಾರು ಕೃತಿ ಗಳನ್ನೂ ರಚಿಸಿ ಇವು ಗಳಲ್ಲಿ ಕನ್ನಡ ಕರಾವಳಿಯ ಬಂಟ ಜನಾಂಗದ ಇತಿಹಾಸ ಹಾಗೂ ಭಗವದ್ ಗೀತೆಯ ಕಾಲ ನಿರ್ಣಯದ ಮೇಲೆ ಬೆಳಕು ಚೆಲ್ಲುವ ಎರಡು ಕೃತಿ ಗಳೂ ಸೇರಿವೆ. ಅಧ್ಯಯನ ನಡೆಸಿದ ಇವರು ತಮ್ಮ 79ನೆ ವಯಸ್ಸಿನಲ್ಲಿ ದಿ ಇನ್ಫ್ಲುಯೆನ್ಸ್ ಆಪ್ ಎನ್ಸೈಂಟ್ ಇಂಡಿಯನ್ ಹೀಲಿಂಗ್ ಒನ್ ಮಾಡರ್ನ್ ಮೆಡಿಸಿನ್ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಲೂರು ವಿಶ್ವ ವಿದ್ಯಾಲಯ ದಿಂದ ಪಿಎಚ್ ಡಿ  ಪಡೆದ ಜಗತ್ತಿ ನಲ್ಲೇ 2ನೆ ಆತಿ ಹಿರಿಯ ಎಂಬ ಮನ್ನಣೆಗೆ ಪಾತ್ರರಾಗಿದ್ದರು .

ಇವರು ಪುತ್ರ ಡಾ. ಗೌತಮ್ ಹೆಗ್ಡೆ ಮತ್ತು ಅಮೆರಿಕಾದಲ್ಲಿ ನೆಲೆಸಿರುವ ಪುತ್ರಿ ಮಾಯ ಹೆಗ್ಡೆ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments

Ad Code

Responsive Advertisement