(ವರದಿ: ಸಾಯಿನಾಥ ದರ್ಗಾ )
ಕೋಲಾರ. ಕಳೆದ ರಾತ್ರಿ ಇದ್ದಕ್ಕಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಪೋಲೀಸರು ಹತ್ತು ಗಂಟೆಯ ವೇಳೆಗೆ ಸಮವಸ್ರ್ತ ಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ರವಾನಿದ್ದೇ ತಡ ಇಡೀ ಪೋಲೀಸು ವಲಯ ತಡ ರಾತ್ರಿ ವೇಳೆ ಯಾಕೆ ? ಏನು ಎಂಬಿತ್ಯಾಧಿ ಪ್ರಶ್ನೆಗಳು ಮೂಡಿತು.
ಹಾಜರಾದ ಪೋಲೀಸರಿಗೆ ವರಿಷ್ಠಾಧಿಕಾರಿ ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾಜಿ ಹಾಲಿ ರೌಡೀ ಶೀಟರ್ ಗಳನ್ನು ಹಾಗೂ ಕಳುವು ಪ್ರಕರಣಗಳಲ್ಲಿ ಹಳೇ ಚಾಳಿಯಲ್ಲಿ ಭಾಗಿಯಾಗಿದ್ದಂತಹ ಅಪರಾಧಿಗಳಳನ್ನ ( ಮೋಡಾಫ್ ಅಫೆಂಡರ್ಸ್ ) ಗಳನ್ನ ತಲಾಷ್ ಮಾಡುವಂತೆ ಆದೇಶಿಸಿದ್ದು ಪೋಲೀಸರು ತಮ್ಮ ಠಾಣಾ ವ್ಯಾಪ್ತಿಗಳಲ್ಲಿ ಇರುವ ಒಂದಷ್ಟು ಮಂದಿ ರೌಡಿಗಳನ್ನು ಬಂಧಿಸಿ ಕರೆತಂದಿದ್ದು ಇದೀಗ ಠಾಣೆಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದೇ ರಾತ್ರಿ ಸಮಯದಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್ಗಳ ನಿಯೋಜನೆ ಮಾಡಿ ಅನಗತ್ಯವಾಗಿ ರಾತ್ರಿ ವೇಳೆ ಸಂಚರಿಸುವವರಿಗೂ ಖಡಕ್ ಸೂಚನೆ ನೀಡಿ ಕಳುಹಿಸಿದ್ದಾರೆ.
ಕೇಂದ್ರ ವಲಯ ಪೋಲೀಸು ಮಹಾ ನಿರ್ದೇಶಕ ರವಿಕಾಂತೇಗೌಡ
ರಾತ್ರಿಯೇ ಮಾಹಿತಿ ನೀಡಿರುವ ವರಿಷ್ಠಾಧಿಕಾರಿ ಎಂ ನಾರಾಯಣ್ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ತೊಡಗುವ ವ್ಯಕ್ತಿಗಳಿಗೆ ಹಾಗೂ ರೌಡೀ ಶೀಟರುಗಳಿಗೆ ಮುಂದಿನ ಆಗುವ ಅಪಾಯದ ಮುನ್ಸೂಚನೆಯನ್ನ ನೀಡಿದ್ದಾರೆ.
ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿ ಅದೂ ತಡ ರಾತ್ರಿಯ ವೇಳೆ ರೌಡೀ ಶೀಟರ್ ಗಳ ಮನೆಗಳ ಕದ ತಟ್ಟಿರುವುದು ಅಚ್ಚರಿಯಾದರೂ ಸಮಂಜಸವೇ ಆಗಿದೆ.
ಅಲ್ಲದೇ ಕೇಂದ್ರ ವಲಯ ಪೋಲೀಸು ಮಹಾ ನಿರೀಕ್ಷಕ ಖಡಕ್ ಅಧಿಕಾರಿ ರವಿ ಕಾಂತೇಗೌಡರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ತಮ್ಮ ವಲಯಾ ವ್ಯಾಪ್ತಿಗೆ ಬರುವ ಕೋಲಾರ ˌ ಕೆ ಜಿ ಎಫ್ ˌ ತುಮಕೂರು ಚಿಕ್ಕಬಳ್ಳಾಪುರ ˌ ರಾಮನಗರˌ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾಷ್ ನಡೆಸಿರುವುದು ಚುನಾವಣಾ ಸಮಯದಲ್ಲಿ ಈ ರೀತಿಯ ರೌಡೀ ಶೀಟರುಗಳ ಒಂದು ರೀತಿಯ ಮುಂಬರುವ ಚುನಾವಣಾ ಪೂರ್ವದ ಮುನ್ಸೂಚನೆ ಅಲ್ಲದೇ ಹೈ ವೋಲ್ಟೇಜ್ ಕ್ಷೇತ್ರ ಕೋಲಾರ ಜಿಲ್ಲೆಗೆ ವಿಶೇಷವಾಗಿಯೇ ರಾತ್ರಿಯ ರೈಡಿನ ಎಚ್ಚರಿಕೆ ನೀಡಿದಂತಿದೆ.








0 Comments