Ticker

6/recent/ticker-posts

Ad Code

Responsive Advertisement

ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಬೇಕಾದರೆ ಸಮಾಜಮುಖಿ ಕಾರ್ಯಕ್ರಮ ಹೆಚ್ಚೆಚ್ಚು ನಡೆಸಬೇಕು

 ವಾರ್ತಾ ಜಾಲ : ಸುದ್ದಿ ಮಧುಗಿರಿ:ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಯಾಗಬೇಕಾದರೆ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಬೇಕೆಂದು ಮಾಜಿ ಶಾಸಕ ಪಿ ಆರ್ ಸುಧಾಕರ್ ಲಾಲ್  ಹೇಳಿದರು.



ಹಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಗಾಳಿ ಆಂಜನೇಯ ಸೇವಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಹತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹದಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಜೊತೆಗೆ ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ಹಿತಕಾಯಲು ಹಾಗೂ ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯಬೇಕಾಗಿದೆ.

ಸಮಾಜದಲ್ಲಿನ ಉಳ್ಳವರು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಶ್ರೀಸಾಮಾನ್ಯರ ಕಲ್ಯಾಣಕ್ಕೆ ನೆರವಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿನ ಕೀಳರಿಮೆ ಕಣ್ಮರೆಯಾಗಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಪ್ರತಿ ಜೋಡಿಗೂ ಮಾಂಗಲ್ಯ, ಹೆಣ್ಣಿಗೆ ಒಂದು ಜೊತೆ ಬಟ್ಟೆ ಗಂಡಿಗೆ ಒಂದು ಜೊತೆ ಬಟ್ಟೆ ಹಾಗೂ ಹೆಣ್ಣಿನ ಕಡೆ ಮತ್ತು ಗಂಡನ ಕಡೆಯವರಿಗೆ ಜೊತೆಗೆ ಭಕ್ತಾದಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆಯಲ್ಲಿ ಶ್ರೀ ಗಾಳಿ ಆಂಜನೇಯ ಸೇವೆ ಸಮಿತಿ ಹಾಗೂ ಹಳೆತಿಮ್ಮನಹಳ್ಳಿ, ಭಜರಂಗಿ ಬಾಯ್ಸ್, ಹಾಗೂ ಭಕ್ತಾದಿಗಳು ಮತ್ತಿತರಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

ದೂರವಾಣಿ ಸಂಖ್ಯೆ: 8722818634

Post a Comment

0 Comments

Ad Code

Responsive Advertisement