ಬೆಂಗಳೂರು: ಹಳ್ಳಿಕಾರರು ಎನ್ನುವ ಸಮುದಾಯ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಸಮಾಜಕ್ಕೆ ನಮ್ಮವರ ಕೊಡುಗೆ ನಿತ್ಯವೂ ಸಿಗಬೇಕಾಗಿದೆ. ನಮ್ಮಲಿ ಸೂಪ್ತವಾಗಿರುವ ಪ್ರತಿಭೆಗಳಿಗೆ ಬೆಳಕು ಸಿಗುವಂತಾಗಬೇಕು ಇದೆ ಮೊದಲ ಬಾರಿಗೆ ಹಳ್ಳಿಕಾರ ಸಮುದಾಯವನ್ನು ಧಾರ್ಮಿಕ ಚೌಕಟ್ಟಿನಲ್ಲಿ ಒಂದು ಗೂಡಿಸಲಾಗುತ್ತಿದೆ . ಅದಕ್ಕಾಗಿ ಶ್ರೀ ಹಳ್ಳಿಕಾರ ಮಠ ಟ್ರಸ್ಟ್ ರಚನೆ ಮಾಡಿ ತುಮಕೂರು ಜಿಲ್ಲೆಯ ತುರವೇಕೆ ತಾಲೂಕಿನ ಮಾಯಸಂದ್ರ ಹೋಬಳ್ಳಿ ಶೆಟ್ಟಿಗೊಂಡನ ಹಳ್ಳಿಯಲ್ಲಿ ಶ್ರೀ ಹಳ್ಳಿಕಾರ ಮಠ ಸ್ಥಾಪನೆ ಮಾಡಲಾಗಿದೆ ಎಂದು ಶ್ರೀ ಹಳ್ಳಿಕಾರ ಮಠ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ನಾಗಯ್ಯ ಅವರು ತಿಳಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಸಮುದಾಯದಲ್ಲಿ ಇನ್ನು ಶೈಕ್ಷಣಿಕವಾಗಿ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟಿದ್ದಾರೆ. ಪ್ರತಿಭಾವಂತ ಮಕ್ಕಳಿಗೆ ನೆರವಾಗುವಂತಹ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಬಡ ಮಕ್ಕಳಿಗೆ ಶೈಕ್ಷಣಿಕ ಸೌಲತ್ತು ಒದಗಿಸುವುದು ಇತ್ಯಾದಿ ಅಂಶಗಳನ್ನು ಸಮಾಜಕ್ಕೆ ನೀಡುವ ಹಿನ್ನೆಲೆಯಿಂದ ಈ ಟ್ರಸ್ಟ್ ಹುಟ್ಟಿಕೊಂಡಿದೆ. ಶ್ರೀ ಹಳ್ಳಿಕಾರ ಮಠವನ್ನು ಸ್ಥಾಪನೆ ಮಾಡಿದ್ದು ಧಾರ್ಮಿಕವಾಗಿ ಒಂದಾಗುವ ಮೂಲಕ ಸಾಂಘಿಕವಾಗಿ ಸಮುದಾಯವನ್ನು ಒಂದು ಮಾಡುವ ಉದ್ಧೇಶ ಹೊಂದಿದ್ದೇವೆ ಎಂದು ಹೇಳಿದ್ದರು.
ಹಳ್ಳಿಕಾರರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸವಾಗಿರುವುದರಿಂದ ಅಲ್ಲಿನ ಜನರ ಜೊತೆ ಅಲ್ಲಲ್ಲಿನ ಸ್ಥಳೀಯ ವ್ಯವಹಾರ, ಜೀವನಶೈಲಿ, ಪ್ರಾದೇಶಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಕೃಷ್ಣನ ವಂಶಸ್ತರಾದ ನಾವು ಭಗವದ್ಗೀತೆಯನ್ನು ಕಲಿಯದಿದ್ದರೆ, ಅದು ಶ್ರೀ ಕೃಷ್ಣನಿಗೆ ಅವಮಾನ ಮಾಡಿದಂತೆ. ಅದಕ್ಕಾಗಿಯೇ ನಮ್ಮ ಸಮುದಾಯಕ್ಕೊಂದು ಧಾರ್ಮಿಕ ಚೌಕಟ್ಟು ಬೇಕಾಗಿದೆ ಎನ್ನುವ ಹಿನ್ನೆಲೆಯಲ್ಲಿ ಶ್ರೀ ವಿಷ್ಣು ರಾಮಾನುಜ ದಾಸನ್ ಬಾಲಕೃಷ್ಣಾನಂದ ಸ್ವಾಮಿಜಿ ಅವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲೆಯ ತುರವೇಕೆ ತಾಲೂಕಿನ ಮಾಯಸಂದ್ರ ಹೋಬಳ್ಳಿ ಶೆಟ್ಟಿಗೊಂಡನ ಹಳ್ಳಿಯಲ್ಲಿ ಶ್ರೀ ಹಳ್ಳಿಕಾರ ಮಠ ಸ್ಥಾಪನೆ ಮಾಡಲಾಗಿದೆ ಎಂದು ಟ್ರಸ್ಟ್ನ ಗೌರವಾಧ್ಯಕ್ಷರಾದ ಡಾ. ಬಿ. ಎಮ್. ಪಟೇಲ್ ಪಾಂಡು ಅವರು ಹೇಳಿದರು.
ಅನ್ನ ಅಕ್ಷರ ಹಾಗೂ ಅರಿವು ಈ ಮೂಲ ಉದ್ದೇಶದೊಂದಿಗೆ ಆರಂಭವಾಗುತ್ತಿರುವ ಶ್ರೀ ಹಳ್ಳಿಕಾರ ಮಠವು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ದಾಸೋಹಗಳೊಂದಿಗೆ ಆರ್ಥಿಕ ಸಹಕಾರ, ಸಾಂಸ್ಕೃತಿಕ ಅಭಿವೃದ್ಧಿ, ಗ್ರಾಮೀಣ ಮತ್ತು ಬಡ ಮಕ್ಕಳ ವಸತಿ, ಕೌಶಲ್ಯಾಭವೃದ್ಧಿ ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸೇರಿದಂತೆ ಸಮುದಾಯದ ಇತಿಹಾದ ಕಟ್ಟೆಮನೆ ನ್ಯಾಯಾಂಗ ಪದ್ಧತಿ ಪುನರುತ್ಥೀಕರಣ ಸೇರಿದಂತೆ ಹತ್ತು ಹಲವು ಕನಸುಗಳನ್ನು ಇಟ್ಟುಕೊಂಡು ಪ್ರಸ್ತುತ ಮಠವು ಕೆಲಸ ಮಾಡಲಿದೆ ಎಂದು ಮತ್ತೋರ್ವ ಗೌರವಾಧ್ಯಕ್ಷ ಶ್ರೀ ದಯಾನಂದ ಅವರು ತಿಳಿಸಿದರು.
ದಿನಾಂಕ ಫೆಬ್ರವರಿ 10, 11 ಹಾಗೂ 12 ರಂದು ಮೂರು ದಿನಗಳ ಕಾಲ ತುಮಕೂರು ಜಿಲ್ಲೆಯ ತುರವೇಕೆರೆ ತಾಲೂಕಿನ ಮಾಯಸಂದ್ರ ಹೊಬಳ್ಳಿಯ ಶೆಟ್ಟಿಗೊಂಡನಹಳ್ಳಿಯಲ್ಲಿ ಶ್ರೀ ಹಳ್ಳಿಕಾರ ಮಠದ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಮಠದ ಮೂಲ ದೇವರಾದ ಶ್ರೀ ಕೃಷ್ಣನ ದಿವ್ಯ ಪ್ರತಿಮೆಯ ಪ್ರತಿಷ್ಠಾಪನೆ, ಪಿಠಾಧಿಪತಿಗಳ ಪಿಠಾರೋಹಣದ ಜೊತೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಠದ ಲೋಕಾರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಪುಟ್ಟಗಂಗಯ್ಯ ತಿಳಿಸಿದರು.
ಇನ್ನೊರ್ವ ಗೌರವಾಧ್ಯಕ್ಷರಾದ ಶ್ರೀ ರಂಗಸ್ವಾಮಿ, ಕೋಶಾಧಿಕಾರಿ ನರಸೇಗೌಡ, ಧರ್ಮದರ್ಶಿಗಳಾದ ಶ್ರೀ ನಾಗಯ್ಯ, ಕುಮಾರಸ್ವಾಮಿ, ಗಂಗಣ್ಣ ,ವಸಂತ ಕುಮಾರ ಹಾಗೂ ಶ್ರೀ ಉಮಾಶಂಕರ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

0 Comments