Ticker

6/recent/ticker-posts

Ad Code

Responsive Advertisement

ಪೌರ ಕಾರ್ಮಿಕರಿಂದ ಬಿಬಿಎಂಪಿ ಅಂಬೇಡ್ಕರ್ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ

 ಐ.ಪಿ.ಡಿ.ಸಾಲಪ್ಪ ವರದಿ ಸಂಪೂರ್ಣ ಆನುಷ್ಠಾನ, ತ್ಯಾಜ್ಯ ಸಂಗ್ರಹಕರರು,ಆಟೋ, ಟಿಪ್ಪರ್ ಚಾಲಕರಿಗೆ ನೇರ ವೇತನಕ್ಕಾಗಿ ಒತ್ತಾಯ : ಪೌರ ಕಾರ್ಮಿಕರಿಂದ ಬಿಬಿಎಂಪಿ ಅಂಬೇಡ್ಕರ್ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ


ಬೆಂಗಳೂರು, ಫೆ,8; ಐ.ಪಿ.ಡಿ.ಸಾಲಪ್ಪ ವರದಿ ಸಂಪೂರ್ಣ ಆನುಷ್ಠಾನ, ತ್ಯಾಜ್ಯ ಸಂಗ್ರಹಕರರು, ಆಟೋ, ಟಿಪ್ಪರ್ ಚಾಲಕರಿಗೆ ನೇರ ವೇತನಕ್ಕಾಗಿ ಒತ್ತಾಯಿಸಿ  ಬಿ.ಬಿ.ಎಂ.ಪಿ.ಪೌರ ಕಾರ್ಮಿಕರ ಟ್ರೇಡ್ ಯೂನಿಯನ್ ಗಳ ಜಂಟಿ ಕ್ರಿಯಾ ಸಮಿತಿಯಿಂದ  ಬಿ.ಬಿ.ಎಂ.ಪಿ.ಕೇಂದ್ರ ಕಛೇರಿಯ ಸಂವಿಧಾನ ಶಿಲ್ಪಿ ಡಾ||ಬಿ.ಅರ್. ಅಂಬೇಡ್ಕರ್ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಬಿ.ಬಿ.ಎಂ.ಪಿ.ಪೌರ ಕಾರ್ಮಿಕರ ಟ್ರೇಡ್ ಯೂನಿಯನ್ ಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಡಾ||ಬಾಬು, ಗೌರವಾಧ್ಯಕ್ಷ ಸುಬ್ಬರಾಯಡು, ಸಂಚಾಲಕರಾದ ಗಂಗಾಧರ್ ಸೋಮಘಟ್ಟ, ಭೀಮಜ್ಯೋತಿ ಶ್ರೀನಿವಾಸ್, ಶಂಕರಪ್ಪ, ರಾಜಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಡಾ.ಬಾಬು ಮಾತನಾಡಿ, ಐ.ಪಿ.ಡಿ.ಸಾಲಪ್ಪ ವರದಿಯನ್ನು ಕತ್ತಲೆಗೆ ದೂಡಿದ್ದು, ಸರ್ಕಾರಿ ವರದಿಯ 11 ಅಂಶಗಳನ್ನು ಆನುಷ್ಠಾನಮಾಡಲು ತೀರ್ಮಾನಿಸಿತ್ತು. ರಾಜ್ಯ ಸರ್ಕಾರ ಮತ್ತು ಬಿ.ಬಿ.ಎಂ.ಪಿ.ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸುತ್ತಿದ್ದು, ಇದೇ ಮಾದರಿಯನ್ನು ತ್ಯಾಜ್ಯ ಸಂಗ್ರಹಕರರು, ಆಟೋ, ಟಿಪ್ಪರ್ ಚಾಲಕರಿಗೂ ನೇರವಾಗಿ ವೇತನ ಪಾವತಿಸಬೇಕು.

 ಬಿ.ಬಿ.ಎಂ.ಪಿ.ಯಲ್ಲಿ 10,561ಕಸ ಸಂಗ್ರಹಕರರು ಮತ್ತು ಆಟೋ,ಟಿಪ್ಪರ್  ಚಾಲಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ನ್ಯಾಯ ದೊರೆಯಬೇಕು. ಗುತ್ತಿಗೆದಾರರ ಲಾಬಿಗೆ ಪಾಲಿಕೆ ಅಧಿಕಾರಿಗಳು ಮಣಿದಿದ್ದು, ತಳಮಟ್ಟದ ಕಾರ್ಯಕರ್ತರಿಗೆ ನ್ಯಾಯ ದೊರೆಯಬೇಕು. ಇನ್ನೊಂದು ವಾರದಲ್ಲಿ ಬೇಡಿಕೆ ಈಡೇರದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.  ಸುಬ್ಬರಾಯಡು ಮಾತನಾಡಿ, ಕೊರೋನ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ ಇವರಿಗೆ ಸಕಾಲಕ್ಕೆ ವೇತನ ಮತ್ತು ಸಮವಸ್ತ್ರ ದೊರೆಯುತ್ತಿಲ್ಲ. 2020ರಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಭೆಯಲ್ಲಿ  ಖಾತೆಗೆ ನೇರವಾಗಿ ಪಾವತಿಸಲು ನಿರ್ಧರಿಸಲಾಗಿತ್ತು. ಆದರೆ ಈ ವರೆಗೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.







Post a Comment

0 Comments

Ad Code

Responsive Advertisement