ಕಲ್ಬುರ್ಗಿ : ಜಿಲ್ಲೆಯ ಅಫ್ಜಲ್ಪುರ ತಾಲ್ಲೂಕಿನ ಗಾಣಗಾಪುರ ರೈಲು ನಿಲ್ದಾಣದಲ್ಲಿ ಫ್ಲಾಟ್ಫಾರ್ಮ್ ನಂ. 1 ರ ಕಡೆಯಿಂದ ನಡುವಿನ ರೈಲ್ವೆ ಹಳಿಗಳನ್ನು ದಾಟಿ ಪ್ರಯಾಣಿಕರು ಆ ಬದಿಯ 2 ನೇ ನಂಬರ್ ಫ್ಲಾಟ್ಫಾರ್ಮ್ ಗೆ ತಲುಪಲು ನಿರ್ಮಿಸಲಾಗಿರುವ ಪಾದಚಾರಿ ಮೇಲ್ಸೇತುವೆ ಬೋರ್ಡ್ ನಲ್ಲಿ ಹೀಗೆ ಬರೆಯಲಾಗಿದೆ.
ಗಮನಿಸತಕ್ಕ ಅಂಶವೇನೆಂದರೆ ಈ ಸೇತುವೆಯ ಮೆಟ್ಟಿಲುಗಳು ಪ್ರಾರಂಭವಾಗುವುದೇ 1 ನೇ ನಂಬರಿನ ಫ್ಲಾಟ್ಫಾರ್ಮ್ ನಿಂದಲೇ ಆಗಿದ್ದರೂ ಸಹ, ಅಲ್ಲಿ ಬರೆಯಲಾಗಿರುವುದು ಫ್ಲಾಟ್ಫಾರ್ಮ್ ನಂ. ೧ ರ ಕಡೆಗೆ ಹೋಗುವ ದಾರಿ ಎಂಬುದು ಪ್ರಯಾಣಿಕರಲ್ಲಿ ಗೊಂದಲಕ್ಕೆ ಎಡೆಮಾಡುವುದರ ಜೊತೆಗೆ ದಪ್ಪಾಕ್ಷರಗಳಲ್ಲಿ ನಮ್ಮ ಕನ್ನಡ ಭಾಷೆಯಲ್ಲೇ ಬರೆಯಲಾಗಿರುವ ಪಾದಚಾರಿ ಮೇಲೆ ಸೇತುವೆ ಎಂಬುದನ್ನು ಗಮನಿಸಿ ಓದಿದವರಿಗೆ, ಅವರು ಒಂದುವೇಳೆ ದುಗುಡ ಹಾಗೂ ಆತಂಕದಲ್ಲಿದ್ದರೂ, ಅಂತಹವರೂ ಸಹ ತಮ್ಮ ದುಗುಡಗಳನ್ನು ಮರೆತು ನಸುನಗುವಂತೆ ಈ ಬರಹ ಮಾಡುವುದಂತೂ ಖಚಿತ...

0 Comments