ಕೊಳ್ಳೇಗಾಲ ಸುದ್ದಿ : ಕೊಳ್ಳೇಗಾಲ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಹಾಗೂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ನ್ಯಾಷನಲ್ ಶಾಲಾ ಮೈದಾನದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಪ್ರಜಾಧ್ವನಿ ಯಾತ್ರೆ ನೇತೃತ್ವದ ರೂವಾರಿಗಳಾದ ಕೆ.ಪಿ.ಸಿ.
ಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು ಹಾಗೂ ಕನ್ನಡ ಚಲನ ಚಿತ್ರ ಹಾಸ್ಯನಟ ಸಾದುಕೋಕಿಲ ಕಾರ್ಯಕ್ರಮಕ್ಕೆ ಆಗಮಿಸಿ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ನಂತರ ಮಾಜಿ ಸಂಸದರು ಹಾಗೂ ಕೆ.ಪಿ. ಸಿಸಿ ಕಾರ್ಯಧ್ಯಕ್ಷರಾದ ಆರ್. ದೃವ ನಾರಾಯಣ್ ರವರು ಮಾತನಾಡಿಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಶಿಸ್ತಿನ ಕ್ಷೇತ್ರವಾಗಿದೆ
ಈ ಕ್ಷೇತ್ರದಲ್ಲಿಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ,
ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷದ ಮೂರು ಜನ ಆಕಾಂಕ್ಷಿಗಳು ಇದ್ದಾರೆ ಮೂರು ಜನರು ಮಾಜಿ ಶಾಸಕರುಗಳೇ,
ಇವರೆಲ್ಲರೂ ಸಹ ತಮ್ಮ ಅವಧಿಯಲ್ಲಿ ಉತ್ತಮ ಕೆಲಸಗನ್ನು ಮಾಡಿ ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ,
ಆದ್ದರಿಂದ ಇವರಲ್ಲಿ ಯಾರಿಗೆ ಟಿಕೇಟ್ ಕೊಡಬೇಕು ಎಂಬುದನ್ನ ವರಿಷ್ಟರು ತೀರ್ಮಾನ ಮಾಡುತ್ತಾರೆ,
ನಮ್ಮ ಉದ್ದೇಶ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸುವುದು ಎನ್. ಮಹೇಶ್ ರವರನ್ನ ಸೋಲಿಸುವುದಾಗಿದೆ
ಕಾರಣ ಎನ್. ಮಹೇಶ್ ರವರು ಬಿಎಸ್ ಪಿ ಪಕ್ಷದಿಂದ ಸ್ಪರ್ದಿಸಿ ಗೆದ್ದು ಪಕ್ಷ ದ್ರೋಹ ಮಾಡಿ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಅವರು ಕೊಳ್ಳೇಗಾಲವನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳಿದ್ದಾರೆ
ಆದರೆ ಎನ್. ಮಹೇಶ್ ರವರ ಮಾತು ಉಸಿಯಾಗಿದೆ
ಅಂಬೇಡ್ಕರ್ ರವರ ಆದರ್ಶವನ್ನು ಅಳವಡಿಸಿಕೊಂಡಿರುವ ಎನ್. ಮಹೇಶ್ ಈ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಾರೆ ಎಂದುಕೊಂಡಿದ್ದೆವು ಆದರೆ ಅವರು ಅಂಬೇಡ್ಕರ್ ರವರ ಆಶಯಗಳಿಗೆ ಮತ್ತು ಜನರ ನಂಬಿಕೆಗೆ ದ್ರೋಹ ಮಾಡಿ. ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಹಿಂದೆ ಉಳಿಸಿದ್ದಾರೆ, ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್
ಶಿಕ್ಷಣಕ್ಕೆ ಹೆಚ್ವು ಆದ್ಯತೆ ಕೊಟ್ಟುವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವಂತ ಕೆಲಸವನ್ನು ಮಾಡಬಹುದಿತ್ತು ಆದರೆ ಅದ್ಯಾವುದನ್ನು ಮಾಡಲಿಲ್ಲ,
ಆದ್ದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ
ಕಾಂಗ್ರೆಸ್ ಪಕ್ಷ ಅಧಿಕಾರದಲಿದ್ದಾಗ ನಮ್ಮ ಅವಧಿಯಲ್ಲಿ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ತಂದಿದ್ದೆವು, ಹಾಗೂ ಪಟ್ಟಣದ ಬಸ್ ನಿಲ್ದಾಣಕ್ಕೆ ಅನುದಾನವನ್ನು ಕೊಟ್ಟಿದ್ದೇವೆ ಅದು ಇವಾಗ ಉತ್ತಮವಾದ ಕೆಲಸವಾಗಿದೆ, ಹಾಗೂ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಕೊಟ್ಟಿದ್ದೇವೆ, ಕಾಂಗ್ರೆಸ್ ಪಕ್ಷ ಜನಪರ ಯೋಜನೆಗಳನ್ನು ಕೊಡುವುದರ ಮೂಲಕ ರೈತರ ಪರ ಹಾಗೂ ಬಡವರ ಪರ ಪಕ್ಷ ಎಂಬುದನ್ನು ನಿರೂಪಿಸಿಕೊಂಡಿದೆ, ಆದ್ದರಿಂದ ತಾವುಗಳು ಕಾಂಗ್ರೆಸ್ ಪಕ್ಷವನ್ನುಗೆಲ್ಲಿಸಲು ಶ್ರಮಿಸಬೇಕು ಎಂದರು,
ಎ. ಆರ್. ಕೃಷ್ಣಮೂರ್ತಿಯವರು ಮಾತನಾಡುತ್ತ ಒಂದು ಕಳೆದ ಚುನಾವಣೆಯಲ್ಲಿ ನಾನು ಒಂದು ಮತದ ಹಂತರದಲ್ಲಿ ಸೋತಿದ್ದೇನೆ ಆದ್ದರಿಂದ ಒಂದು ಮತದ ಮಹತ್ವ ಏನು ಎಂಬುದನ್ನ ನಾನು ತಿಳಿದುಕೊಂಡಿದ್ದೇನೆ,
ಜಯಣ್ಣ ರವರನ್ನ ಗೆಲ್ಲಿಸಿದ್ದೀರಾ ಬಾಲ್ ರಾಜ್ ರವರನ್ನು ಗೆಲ್ಲಿಸಿದ್ದೀರಾ, ಮಹೇಶ್ ರವರನ್ನು ಗೆಲ್ಲಿಸಿದ್ದೀರಾ ಆದರೆ ನಾನು ಏನು ಪಾಪ ಮಾಡಿದ್ದೀನಿ ನನ್ನನ್ನ ಒಂದು ಬಾರಿ ಗೆಲ್ಲಿಸಿ ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಕಾರ್ಯಕರ್ತರನ್ನು ಮನವಿ ಮಾಡಿಕೊಂಡರು,
ನಂತರ ಡಿ. ಕೆ ಶಿವಕುಮಾರ್ ಮಾತನಾಡಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಉತ್ತಮವಾದ ಸಂಘಟನೆ ಮಾಡಿದ್ದೀರಿ ಇದು ಮೂರು ಜನ ಮುಖಂಡರಿಂದ ಸಾಧ್ಯ ಇಲ್ಲ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ಸಂಘಟನೆಯನ್ನು ಮಾಡಿದ್ದೀರಿ,
ಜೊತೆ ಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಗಳಿಸುವುದು ಯಶಸ್ಸು ಆದ್ದರಿಂದ ಈ ಕ್ಷೇತ್ರದಲ್ಲಿ ಮೂರು ಜನ ಶಾಸಕರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಒಳ್ಳೆಯ ಕಲಾವಿದರು,
ಮೂರು ಜನರು ಒಂದಾಗಿ ಎನ್.ಮಹೇಶ್ ರವನ್ನು ಸೋಲಿಸುವುದು ನಮ್ಮ ಗುರಿಯಾಗಿಸಿಕೊಳ್ಳಬೇಕು
ಈಗ ನಂಜುಂಡ ಸ್ವಾಮಿಯವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ, ಎಲ್ಲರು ಒಂದಾಗಿ ಪಕ್ಷಕ್ಕಾಗಿ ದುಡಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಕ್ಕೆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಹಾಗೆ
ಮುಂದಿನ ದಿನಗಳಲ್ಲಿ ಪಕ್ಷ ಯಾರಿಗೆ ಮಣೆ ಹಾಕುತ್ತಾದೋ ಅವರಿಗಾಗಿ ಎಲ್ಲರು ದುಡಿಯಬೇಕು ಆದರೆ ಒಬ್ಬರ ಕಾಲನ್ನು ಒಬ್ಬರು ಎಳೆಯುವ ಕೆಲಸವನ್ನು ಮಾಡಬಾರದು,
ಎಲ್ಲರು ಒಂದಾಗಿ ಪಕ್ಷದ ಗೆಲುವಿಗೆ ದುಡಿಯುವ ಕೆಲಸವನ್ನು ಮಾಡಬೇಕು,ಬಿಜೆಪಿಯನ್ನು ಸೋಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ
ಬಿಜೆಪಿ ಅಧಿಕಾರಕ್ಕೆ ಬಂದ ದಿಂದದಿಂದ ಸಂವಿಧಾನ ವಿರೋಧಿ ಕೃತ್ಯಗಳನ್ನ ಮಾಡುತ್ತಾ ಬರುತ್ತಿದೆ ಈ ದೇಶಕ್ಕೆ ದೇಶದ ಜನತೆ ಶಿಕ್ಷಣ ರಾಜಕೀಯ ಹಕ್ಕುಗಳನ್ನ ಕೊಟ್ಟಂತ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅಗೌರವ ತೋರುವಂತ ಕೆಲಸವನ್ನ ಬಿಜೆಪಿ ಮಾಡುತ್ತಿದೆ,
ಲೋಕ ರೂಡಿಯಲ್ಲಿ ಹೇಳುವ ಪ್ರಕಾರ ಹಲವಾರು ಕಡೆ ನೂರಾರು ದೇವರುಗಳ ದೇವಾಲಯಗಳು ಇವೆ ಅದರೆ ಲಕ್ಷಾಂತರ ಸಂಖ್ಯೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಗ್ರಹಗಳು ಇವೆ ಜಗತ್ತಿಗೆ ದೇವರು ಅಂತ ಇದ್ದರೆ ಅದು ಡಾ. ಬಿ. ಆರ್. ಅಂಬೇಡ್ಕರ್ ರವರೆ ಹೊರತು ಬೇರ್ಯಾರು ಇಲ್ಲ,
ಮಹೇಶ್ ಬಗ್ಗೆ ನನಗೆ ಗೌರವ ಇತ್ತು ಆದರೆ ಅವರು ಅಂಬೇಡ್ಕರ್ ಆದರ್ಶಗಳನ್ನು ಹೇಳಿಕೊಂಡು ಮಾಯಾವತಿಯವರ ಮಾರ್ಗದರ್ಶನವಂಣ್ಣಿಟ್ಟುಕೊಂಆನೆ ಹಿಡುಕೊಂಡು ಗೆದ್ದು ಬಂದು ಆನೆಯನ್ನ ಕಾಡಿಗೆ ಬಿಟ್ಟು ಕಮಲ ಹಿಡ್ಕೊಂಡು ಹೋಗಿದ್ದಾರೆ, ಅವರ ದ್ರೋಹಕ್ಕೆ ತಕ್ಕಪಾಠ ಕಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಎ. ಆರ್. ಕೃಷ್ಣಮೂರ್ತಿ, ಜಯಣ್ಣ ಬಾಲರಾಜು,, ಹನೂರು ಶಾಸಕರಾದ ಆರ್. ನರೇಂದ್ರ, ರಾಜ್ಯಸಭೆ ಸದಸ್ಯರಾದ ಚಂದ್ರಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ, ನಗರಸಭಾ ಅಧ್ಯಕ್ಷರಾದ ರೇಖಾ ರಮೇಶ್, ಉಪಾಧ್ಯಕ್ಷರಾದ ಸುಶೀಲ ಶಾಂತರಾಜು,
ನಲಪ್ಪಾಡ್, ಮುಖಂಡರಾದ ಬಾವ, ಚಿತ್ರನಟ ಸಾಧುಕೋಕಿಲಚೇತನ್ ದೊರೆರಾಜ್, ತೊಟೇಶ್, ಶಿವಕುಮಾರ್, ಹಾಗೂ ಇನ್ನಿತರರು ಇದ್ದರು

0 Comments