Ticker

6/recent/ticker-posts

Ad Code

Responsive Advertisement

ತೂಬಗೆರೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಲೋಕೇಶ್ವರಿ ರವಿ ಸಿದ್ದಪ್ಪ ಆಯ್ಕೆ

ದೊಡ್ಡಬಳ್ಳಾಪುರ :  ತಾಲೂಕಿನ ತೂಬಗೆರೆ  ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ನಾಗಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ  ತೂಬಗೆರೆ ಗ್ರಾಮದ ಕಾಂಗ್ರೆಸ್ ಬೆಂಬಲಿತ ಲೋಕೇಶ್ವರಿ ರವಿ ಸಿದ್ದಪ್ಪ    ಅವರನ್ನು  ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಸೋಮವಾರ ನಿಗದಿಪಡಿಸಿದ್ದ ಉಪಾಧ್ಯಕ್ಷರ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯೆಯಾಗಿ ವೆಂಕಟರತ್ನಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಲೋಕೇಶ್ವರಿ ರವಿ ಸಿದ್ದಪ್ಪ ನಾಮಪತ್ರ ಸಲ್ಲಿಸಿದರು. 22 ಸದಸ್ಯರು ತಲಾ 11 ಮತಗಳನ್ನು ಇಬ್ಬರಿಗೂ ಸಮನಾಗಿ ಚಲಾಯಿಸಿದ್ದರು. ಅಭ್ಯರ್ಥಿಗಳು ಸಮಾನಾದ ಮತಗಳನ್ನು ಪಡೆದಿದ್ದರಿಂದ ಚುನಾವಣಾ ಅಧಿಕಾರಿ ಲಾಟರಿ ಮೂಲಕ ಲೋಕೇಶ್ವರಿ ರವಿ ರವರನ್ನು ನೂತನ ಉಪಾಧ್ಯಕ್ಷರಾಗಿ ಘೋಷಿಸಿದರು.

ನೂತನ ಉಪಾಧ್ಯಕ್ಷರಾದ ಲೋಕೇಶ್ವರಿ ರವಿ ಸಿದ್ದಪ್ಪ  ಮಾತನಾಡಿ  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಎಂದರು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ  ಮಾಜಿ  ಅಧ್ಯಕ್ಷ  ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ  ಕೃಷ್ಣಪ್ಪ, ಗಂಗಾಧರ್, ಶೆಟ್ಟಿ, ಚೆಲುವ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ತೂಬಗೆರೆ ಹಿತರಕ್ಷಣ ಸಮಿತಿ ಅಧ್ಯಕ್ಷ ರವಿ ಸಿದ್ದಪ್ಪ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement