Ticker

6/recent/ticker-posts

Ad Code

Responsive Advertisement

ಕಾವೇರಿ ವಿವಾದ ಪುಸ್ತಕ ಲೋಕಾರ್ಪಣೆ

ಬೆಂಗಳೂರು: ಚಿತ್ರಕಲಾ ಪರಿಷತ್ತು,ಡಿ.ದೇವರಾಜ್ ಅರಸು ಸಭಾಂಗಣದಲ್ಲಿ ಕಾವೇರಿ ವಿವಾದ ಒಂದು ಚಾರಿತ್ರಿಕ ಹಿನ್ನೋಟ ಪುಸ್ತಕ ಬಿಡುಗಡೆ ಸಮಾರಂಭ.

 ಮಾಜಿ ವಿದೇಶಾಂಗ ಸಚಿವರು,ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರು, ಮಾಜಿ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ ರವರು, ಪತ್ರಕರ್ತರಾದ ಶೇಷಚಂದ್ರಿಕಾ, ಮಾಜಿ ಮುಖ್ಯ ಅಭಿಯಂತರಾದ ಜಯಪ್ರಕಾಶ್ ರವರು, ಕೆ.ಪಿ.ಎಸ್.ಸಿ ಸದಸ್ಯರಾದ ರೊನಾಲ್ಡೊ ಆನಿಲ್ ಫರ್ನಾಂಡೀಸ್, ಕೃತಿಯ ಲೇಖಕರಾದ ನಿವೃತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ರವರು, ಕಾಡು ಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು,ಅಭಿರುಚಿ ಪ್ರಕಾಶನ ಪ್ರಕಾಶಕರಾದ ಅಭಿರುಚಿ ಗಣೇಶ್ ರವರು ಪುಸ್ತಕ ಲೋಕಾರ್ಪಣೆ ಮಾಡಿದರು.


  ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಮಾತನಾಡಿ, ಕಾವೇರಿ ವಿವಾದ ಬಗ್ಗೆ ಬರೆದಿರುವ ಹಿನ್ನೋಟ ಪುಸ್ತಕ, ಚಾರಿತ್ರಿಕ ಹಿನ್ನಲೆ ಇಂದು ಸಂಪನ್ನಗೊಳಿಸಿದ್ದಾರೆ.

  ಕಾವೇರಿ ನದಿ ನೀರು ಉಪಯೋಗ ಪಡೆದುಕೊಳ್ಳುವ ಎಲ್ಲರಿಗೂ ಈ ಪುಸ್ತಕದಿಂದ ಒಳಿತಾಗಲಿ.

ಕಾವೇರಿ ಜಲವಿವಾದವನ್ನು   ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಚಾಣಕ್ಷ, ಸಾವಧಾನ, ಗಂಭೀರ, ನಿಸ್ಪಕ್ಷಪಾತದಿಂದ ಸಂಧಾನ ಮಾಡಿದರು.

ಕರುಣಾನಿಧಿರವರ ಜೊತೆಯಲ್ಲಿ ಕಾವೇರಿ ನದಿ ನೀರು ಬಗ್ಗೆ ಚರ್ಚೆ ಮಾಡಿದ್ದೇ, ಕರುಣಾನಿಧಿರವರು ಬಹಳ ತಾಳ್ಮೆಯಿಂದ ಉಪಾಯ ಹೇಳಿಕೊಡುತ್ತಿದ್ದರು.

ಜಯಲಲಿತಾರವರು ಕರ್ನಾಟಕವನ್ನು ವಿರೋಧಿಸಲೇ ಬರುತ್ತಿದ್ದರು.

ಜಯಲಲಿತಾರವರು ನಮ್ಮ ರಾಜ್ಯದಲ್ಲಿ ಹುಟ್ಟಿ ಅಲ್ಲಿ ತಮಿಳುನಾಡಿನಲ್ಲಿ ನೆಲಸಿರುವ ಕಾರಣದಿಂದ ಅವರ ವಿರೋಧ ವ್ಯಕ್ತಪಡಿಸುತ್ತಿದ್ದರು.

 ಅಡಚಣೆಗಳು ಬರುತ್ತದೆ ನಮ್ಮ ರಾಜ್ಯದ ಹಕ್ಕುಭಾದ್ಯತೆ ಪರವಾಗಿ ಹೋರಾಟ ಮಾಡಿದೆ.

ಅಟಲ್ ಬಿಹಾರಿ ವಾಜಪೇಯಿರವರು ನನ್ನ ಮತ್ತು ಜಯಲಲಿತಾರ ನಡುವೆ ಮಧ್ಯಸ್ಥಿಕೆ ವಹಿಸಿದರು ಅದರು ಜಯಲಲಿತಾರವರು ಯಾವುದೇ ಕಾರಣಕ್ಕೂ ಒಪ್ಪುತ್ತಿರಲಿಲ್ಲ. ಇದರಿಂದ ಸುಪ್ರಿಂಕೋರ್ಟ್ ಕೇಸು ಮೆಟ್ಟಲು ಹತ್ತಬೇಕಾಯಿತು.

ಮೈಸೂರು,ಬೆಂಗಳೂರು ಮಾರ್ಗ ಬಂದ್, ರೈಲ್ ಬಂದ್ ಮೊಟ್ಟ ಮೊದಲ ಬಾರಿಗೆ ಕಾವೇರಿ ನದಿ ನೀರು ಕಾರಣವಾಯಿತು.

ವಿವಾದ ನಡೆದು ಸುಪ್ರಿಂಕೋರ್ಟ್ ನಲ್ಲಿ ನಾನು ಕ್ಷೇಮಾಪಣೆ ಕೇಳಬೇಕಾಯಿತು.

ನಾರಿಮನ್ ರವರ ವಾದದಿಂದ ಘೋರ ಶಿಕ್ಷೆಯಿಂದ ನಾನು ಪಾರಾದೆ.

ಪ್ರತಿಯೊಂದು ದೇಶ, ರಾಜ್ಯಗಳ ನಡುವೆ ಜಲವಿವಾದ ಎಲ್ಲ ಕಡೆ ಇರುತ್ತದೆ, ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಚಿರಂಜೀವಿ ಸಿಂಗ್ ರವರು ಮಾತನಾಡಿ, ಕಾವೇರಿ ವಿವಾದ ಬಗ್ಗೆ ಚಂದ್ರಶೇಖರ್ ರವರು ಆಳವಾಗಿ ಅಧ್ಯಯನ ಮಾಡಿ ಬರೆದಿದ್ದಾರೆ.

ಕಾವೇರಿ ವಿವಾದ  ಎಸ್.ಎಂ.ಕೃಷ್ಣರವರು ಹತ್ತಿರದಿಂದ ಬಲ್ಲವರು. ಜನಸಂಖ್ಯೆ ಹೆಚ್ಚಳವಾಗಿದೆ, ನೀರು ಲಭ್ಯತೆ ಕಡಿಮೆ ಇದೆ.

ನೀರಿನ ಸದ್ಬಳಕೆ ಮತ್ತು ಸಂಗ್ರಹದ ಬಗ್ಗೆ ಚಿಂತನೆ ಮಾಡಬೇಕು. ಪರಿಸರ ಉಳಿದರೆ ,ಮಳೆಯಾಗುತ್ತದೆ ಮತ್ತು ಮಳೆಯ ನೀರು ಸರಿಯಾದ ರೀತಿಯಲ್ಲಿ ಬಳಸಬೇಕು ಅದರೆ ಪರಿಸರ ಹಾನಿ ನೀರಿನ ಮಟ್ಟ ಕುಸಿದಿದೆ.

ಅಣೆಕಟ್ಟುಗಳ ಹೊಳು ತೆಗೆಯಬೇಕು ಮತ್ತು ಡ್ಯಾಂ ಸುರಕ್ಷತೆ ಕಾಪಾಡಬೇಕು ಮತ್ತು ನೀರನ್ನು ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಕೃತಿಯ ಲೇಖಕರಾದ  *ಸಿ.ಚಂದ್ರಶೇಖರ್ ರವರು ಮಾತನಾಡಿ, ಕಾವೇರಿ ವಿವಾದದ ಇತಿಹಾಸವನ್ನು ತಿಳಿಯಪಡಿಸಲಾಗಿದೆ.ಬ್ರಿಟಿಷರು ವ್ಯಾಪಾರ ಮಾಡಲು ಬಂದರು ಅದರೆ ತದನಂತರ ರಾಜಕೀಯ ಪ್ರವೇಶ ಮಾಡಿ ಭಾರತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡಿದರು.

ಪ್ರತಿ ವರ್ಷ ಸರ್ಕಾರಗಳು ಮಳೆ ಪ್ರವಾಹಕ್ಕೆ ಸಾವಿರಾರು ಕೋಟಿ ಅನುದಾನ ಖರ್ಚು ಮಾಡುತ್ತಾರೆ.

ಕಾವೇರಿ ನೀರು ಸಂಗ್ರಹ ಮತ್ತು  ನಿರ್ವಹಣೆ ಕುರಿತು ಸರ್ಕಾರಗಳು ಚಿಂತನೆ ಮಾಡುವುದಿಲ್ಲ ಅದರಿಂದ ಕಾವೇರಿ ವಿವಾದ ಪುಸ್ತಕ ನದಿ ನೀರು ನಿರ್ವಹಣಿ ಸಮಗ್ರ ವರದಿ ಮಂಡಿಸಲಾಗಿದೆ ಎಂದು ಹೇಳಿದರು.

ಬಿಕೆ.ಶಿವರಾಂರವರು, ಮಾತನಾಡಿ ಕಾಡು ಮಲ್ಲೇಶ್ವರ ಗೆಳಯರ ಬಳಗ ಕಳೆದ 25ವರ್ಷಗಳಿಂದ ನಾಡು,ನುಡಿ ಜಲ ಮತ್ತು ಪರಿಸರ ರಕ್ಷಣೆಗೆ ಸತತ ಶ್ರಮಿಸುತ್ತಿದೆ.

ಪೊಲೀಸ್ ಇಲಾಖೆ ಎಂದರೆ ಜನರ ರಕ್ಷಣೆ ಜೊತೆಯಲ್ಲಿ ಪರಿಸರ ರಕ್ಷಣೆಗೆ ಸದಾ ಮುಂದು .

ಕಾವೇರಿ ನದಿ ಜೀವನದಿಗಳಲ್ಲಿ ಒಂದು.ದಕ್ಷಿಣ ಭಾರತ ಶೇಷ್ಠ ನದಿ. ನೂರಾರು ವರ್ಷಗಳಿಂದ ಕಾವೇರಿ ನದಿ ನೀರು ಕರ್ನಾಟಕ, ತಮಿಳುನಾಡು,ಕೇರಳ, ಪಾಂಡಿಚೇರಿ ರಾಜ್ಯಗಳಿಗೆ ರೈತರ ಜನರಿಗೆ ಜೀವನದಿಯಾಗಿದೆ.

ಓಲೈಕೆ ಇತಿಹಾಸದಿಂದ ಜನರು ತಪ್ಪು ಹಾದಿಗೆ ಇಳಿದಿದ್ದಾರೆ. ಅದರೆ ಚಂದ್ರಶೇಖರ್ ರವರು ಆಳವಾದ ಅಧ್ಯಯನ ಮಾಡಿ ಕಾವೇರಿ ವಿವಾದ ಒಂದು ಚಾರಿತ್ರಕ ಹಿನ್ನೋಟ ಪುಸ್ತಕ ರೂಪದಲ್ಲಿ ಇಂದು ಲೋಕಾರ್ಪಣೆಯಾಗುತ್ತಿದೆ ಎಂದು ಹೇಳಿದರು.

*ಕಾವೇರಿ ವಿವಾದ ಒಂದು ಚಾರಿತ್ರಿಕ ಹಿನ್ನೋಟ ಪುಸ್ತಕ ಆಂಗ್ಲ ಭಾಷೆಯಲ್ಲಿ ಮುದ್ರಣಗೊಂಡಿದೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣವಾಗಲಿದೆ*

Post a Comment

0 Comments

Ad Code

Responsive Advertisement