Ticker

6/recent/ticker-posts

Ad Code

Responsive Advertisement

ಮಂಚೂಣಿಯಲ್ಲಿ ಕಾಣಿಸಿಕೊಳ್ಳುವ ಮಹಿಳಾ ಮಂತ್ರಿಶೋಭಾ ಕರಂದ್ಲಾಜೆ....

ಶೋಭಾ ಕರಂದ್ಲಾಜೆ....

ರಾಜ್ಯ ರಾಜಕಾರಣದಲ್ಲೇ ಅತ್ಯಂತ ಪ್ರಭಾವಿಶಾಲಿ ಮಹಿಳಾ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ಮಂಚೂಣಿಯಲ್ಲಿ ಕಾಣಿಸಿಕೊಳ್ಳುವ ಮಹಿಳಾ ಮಂತ್ರಿಶೋಭಾ ಕರಂದ್ಲಾಜೆ....

ರಾಜ್ಯ ರಾಜಕಾರಣದಲ್ಲಿಯೆ  ಒಂದು ಹವಾ ಸೃಷ್ಟಿಸುವ  ತಾಕತ್ತು ಹೊಂದಿರುವ ಮತ್ತು ಅಷ್ಟೇ ವೇಗವಾಗಿ  ಪಕ್ಷವನ್ನು ಸಂಘಟಿಸಬಲ್ಲ ಚಾಕ ಚಾಕೀಯತೆ ಹೊಂದಿರುವ  ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪವರ್ ಮಂತ್ರಿ ಎಂಬ ಬಿರುದು ಪಡೆದುಕೊಂಡಿರುವ ಘಟಾನುಘಟಿ ಪುರುಷ ರಾಜಕಾರಣಿಗಳಿಗೆ ಸೆಡ್ಡು  ಹೊಡೆಯ ಬಲ್ಲ ಸಾಮರ್ಥ್ಯವನ್ನು ಕೂಡ  ಹೊಂದಿರುವ ರಾಜ್ಯದ ಏಕೈಕ ಮಾತ್ರ ಮಹಿಳಾ ರಾಜಕಾರಣಿ ಶೋಭಾ ಕರಂದ್ಲಾಜೆ ಎಂದರೆ ತಪ್ಪಾಗಲಾರದು....

ಇವರ ರಕ್ತದಲ್ಲಿಯೇ ಒಂದು ಪವರ್ ಇದೆ ಎಂದರೆ ಸುಳ್ಳಾಗಲಾರದು ಅದು ಅವರಿಗಿರುವ ಪವರ್ ಕೂಡ ಇಂತಹ ಘಟಾನುಘಟಿ ಮಹಿಳಾ ರಾಜಕಾರಣಿ ಜನಿಸಿದ್ದು 1966 ಅಕ್ಟೋಬರ್ 23 ದಕ್ಷಿಣ ಕನ್ನಡದ ಪುತ್ತೂರಿನ ಚಾರ್ವಾಕದಲ್ಲಿ ತಂದೆ ಮೋನಪ್ಪ ಗೌಡ ತಾಯಿ ಪೂವಕ್ಕ ಬಾಲ್ಯದಲ್ಲಿಯೇ ಬಹಳಷ್ಟು ಚುರುಕಿದ್ದ ಇವರು ವಿದ್ಯಾಭ್ಯಾಸದಲ್ಲೂ ಕೂಡ ಬಹಳ ಮುಂದಿದ್ದರೂ ಇವರ ವಿದ್ಯಾಭ್ಯಾಸ ಪುತ್ತೂರಿನ ಸೆಂಟ್ ಪಿಲ್ಲೋ ಕಾಲೇಜಿನಲ್ಲಿ ಬಿಎ ಪದವಿ ಪಡೆದುಕೊಂಡಿದ್ದಾರೆ ಹಾಗೂ ಮೈಸೂರಿನ ಯೂನಿವರ್ಸಿಟಿಯಲ್ಲಿ ಸೋಶಿಯಾಲಜಿ ವಿಷಯದಲ್ಲಿ ಎಂಎ ಪಡೆದುಕೊಂಡು ಎಂ ಎಸ್ ಡಬ್ಲ್ಯೂ ಕೂಡ ಮಾಡಿಕೊಂಡಿದ್ದಾರೆ. 

ಇವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ಸ್ವಯಂಸೇವಾ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡವರು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡವರು ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ರಾಜ್ಯ ಬಿಜೆಪಿಯ ಪಡಸಾಲೆಯಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಬಂದವರು ಇವರು ಮೊಟ್ಟಮೊದಲನೆಯದಾಗಿ ರಾಜಕೀಯದಲ್ಲಿ ಗುರುತಿಸಿಕೊಂಡದ್ದು ಅದು 90ರ  ದಶಕದಲ್ಲಿ  ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮತ್ತೆಂದು  ಹಿಂತಿರುಗಿ ನೋಡಲೇ ಇಲ್ಲ.

199 ರಲ್ಲಿ ಯಡಿಯೂರಪ್ಪರವರ ಸಂಕಲ್ಪ ರಥಯಾತ್ರೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ರಾಜ್ಯ ರಾಜಕಾರಣದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳತೊಡಗಿದರು  ಇವರ ಹೋರಾಟಗಳು ಹಾಗೂ ಇವರ ಪಕ್ಷ ಸಂಘಟನೆಯ ಗುರುತಿಸಿದ ರಾಜ್ಯ ಬಿಜೆಪಿ ಒಂದೊಂದೇ ಜವಾಬ್ದಾರಿಯ ಹುದ್ದೆಯನ್ನು ನೀಡತೊಡಗಿತ್ತು.

ಹೀಗಿರುವಾಗಲೇ ಎರಡು ಸಾವಿರದ ಇಸವಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು ಮತ್ತು ರಾಜ್ಯ ರಾಜಕಾರಣದಲ್ಲಿ ಒಂದು ಸಂಚಲನವನ್ನು ಸೃಷ್ಟಿಸುವ ಮಟ್ಟಕ್ಕೂ ಕೂಡ ಬೆಳೆದೆ ಬಿಟ್ಟರು ನಂತರ 2004ರಲ್ಲಿ  ವಿಧಾನ ಪರಿಷತ್ ಸದಸ್ಯರಾದರು.

ಅಲ್ಲಿಗೆ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳುವ ಮುನ್ಸೂಚನೆಯನ್ನು ಕೂಡ ಕೊಟ್ಟೆ ಬಿಟ್ಟಿತ್ತು. ಅದು ಕರ್ನಾಟಕದಲ್ಲಿ ಎನ್ನುವುದು ಗುಟ್ಟಾಗಿ ಏನು ಉಳಿಯಲಿಲ್ಲ ಎರಡು ಸಾವಿರದ 8 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಶೋಭಾ ಕರಂದ್ಲಾಜೆ ಕೆಲವೇ ಕೆಲವು ಸಾವಿರ ಮತಗಳ ಅಂತರದಿಂದ ವಿಜೇತರಾಗಿ ವಿಧಾನಸಭೆ ಪ್ರವೇಶಿಸಿದ್ದರು.

ರಾಜ್ಯ ರಾಜಕಾರಣದ ದಿಕ್ಸೂಚಿಯನ್ನೇ ಬದಲಾಯಿಸಿದ ಅಂದಿನ ಚುನಾವಣೆಯ ಫಲಿತಾಂಶ ಬಿಜೆಪಿ ಭರ್ಜರಿ 110 ಸೀಟು ಗೆಲ್ಲಿಸಿ ಕೊಂಡು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು ಒಂದಷ್ಟು ಶಾಸಕರನ್ನು ಆಪರೇಷನ್ ಕಮಲ ಮೂಲಕ ಸೆಳೆದು ಸರ್ಕಾರ ರಚನೆಯನ್ನು ಕೂಡ ಬಿಎಸ್ ಯಡಿಯೂರಪ್ಪರವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು ಅಷ್ಟೇ ಅಲ್ಲದೆ ತಮ್ಮನ್ನು ನಂಬಿ ಬಂದವರಿಗೆ ಉತ್ತಮ ಸ್ಥಾನವನ್ನೇ  ನೀಡಿದ್ರು ಅದರಲ್ಲೂ ಪ್ರಮುಖವಾಗಿ ಶೋಭಾ ಕರಂದ್ಲಾಜೆರವರಿಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಎನ್ನುವ ಪ್ರಭಾವಿ ಖಾತೆಗಳನ್ನು ನೀಡಿ ಸಚಿವ ಸಂಪುಟಕ್ಕೆ ತೆಗೆದುಕೊಂಡರು.

ಉತ್ತಮ ಆಡಳಿತವನ್ನು ಕೂಡ ನೀಡತೊಡಗಿದರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಸಮವಸ್ತ್ರ ವಿತರಣೆ ಸೇರಿದಂತೆ ವಯೋವೃದ್ಧರಿಗೆ ಪಿಂಚಣಿ ಹಾಗೂ ಮಠಮಾನ್ಯಗಳಿಗೆ ಮಾನ್ಯತೆ ನೀಡಿ ರಾಜ್ಯದ ರಾಜ ಹುಲಿ ಎಂದೇ ಹೆಸರು ಗಳಿಸಿಕೊಂಡಿದ್ದರು ಅದರಲ್ಲೂ ಶೋಭಾ  ಕರಂದ್ಲಾಜೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಗ್ರಾಮೀಣ ಭಾಗದ ಪ್ರದೇಶದ ರಸ್ತೆಗಳಿಗೆ ಮೊದಲ ಆದ್ಯತೆ ನೀಡಿ ರಸ್ತೆ ಆಗಲಿ ಕರಣ ಡಾಂಬರೀಕರಣಕ್ಕೆ ಪ್ರಮುಖ ಒತ್ತುಕೊಟ್ಟಿದ್ದರು ಇವರ ಈ ಕಾರ್ಯಕ್ಕೆ ಅಂದಿನ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ ನೀಡಿದ್ದು ಎಂದರೆ ತಪ್ಪಾಗಲಾರದು ಇಷ್ಟೆಲ್ಲದರ ನಡುವೆಯೇ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಬಣ ಸಿಡಿದಿದ್ದು ನಿಂತುಬಿಟ್ಟಿತ್ತು.  ಬಳ್ಳಾರಿಯ  ರೆಡ್ಡಿ ಬ್ರದರ್ಸ್ ಅಂದಿನ ಸುಮಾರು 20 ಜನ ಶಾಸಕರನ್ನು ಹೈಜಾಕ್ ಮಾಡಿದ ರೆಡ್ಡಿ ರೆಸಾರ್ಟ್ ರಾಜಕೀಯ ಮಾಡಿದ್ದರು ಕೆಲವೊಂದು ಕಂಡಿಶನ್ ಕೂಡ ಹಾಕಿದ್ದರು ಅದು ನಾವು ಹೇಳಿದವರಿಗೆ ಸಚಿವ ಸ್ಥಾನ ನೀಡಬೇಕು ಮತ್ತೆ ನಾವು ಹೇಳಿದವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎನ್ನುವ ಶರತ್ತು ವಿಧಿಸಿದ್ದರು. ಅದು ಇನ್ನೇನು ಸರಕಾರವೇ ಉರುಳುತ್ತದೆ ಎನ್ನುವ ಸಂದರ್ಭ ಕೂಡ ಇಂತಹ ಸಂದರ್ಭದಲ್ಲಿ  ಪ್ರಮುಖವಾಗಿ ರೆಡ್ಡಿ ಬ್ರದರ್  ಶೋಭಾ ಕರಂದ್ಲಾಜೆಯನ್ನು ಕೈಬಿಡಬೇಕು ಸಚಿವ ಸ್ಥಾನದಿಂದ ಎಂದು ಹಠ ಹಿಡಿದಿದ್ದರು



ಈ ವಿಚಾರ ಯಡಿಯೂರಪ್ಪರವರಿಗೆ ನುಂಗಲಾರದ ತುತ್ತಾಗಿತ್ತು  ಕಾರಣಾಂತರಗಳಿಂದ ಶೋಭಾ ಕರಂದ್ಲಾಜೆರವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಕೂಡ ಸಲ್ಲಿಸಿದ್ದರು ಸತತ ಒಂದು ವರುಷಗಳ ಕಾಲ ಮೌನಕ್ಕೆ ಜಾರಿದ್ದರು ನಂತರ ಭರ್ಜರಿಯಾಗಿ ಎಂಟ್ರಿ ಕೊಟ್ಟದ್ದು ಮಾತ್ರ ಪವರ್ ಫುಲ್ ಮಂತ್ರಿಯಾಗಿ ಇಂಧನ ಖಾತೆ ಸಚಿವರಾದ ಮೊಟ್ಟಮೊದಲ ಮಹಿಳಾ ರಾಜಕಾರಣಿ ಇವರು ಪವರ್ ಫುಲ್ ಖಾತೆಯನ್ನೇ ನೀಡಲಾಗಿತ್ತು ಉತ್ತಮ ಕೆಲಸಗಳನ್ನೇ ನಿರ್ವಹಿಸಿದ್ದರು ಮತ್ತಷ್ಟು ಯೋಜನೆಗಳನ್ನು ಕೂಡ ಹಾಕಿಕೊಂಡಿದ್ದರು ಅಲ್ಲಿಗೆ ಬಿಜೆಪಿಗೆ  ಮತ್ತೊಂದು ಬರಸಿಡಿಲಿನಂತೆ ಬಡಿಯ ತೊಡಗಿತ್ತು  ಅದು ಬಿ ಎಸ್  ಯಡಿಯೂರಪ್ಪನವರ ಮೇಲೆ ಒಂದೊಂದೇ ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರತೊಡಗಿದ್ದುವು ಅದರಲ್ಲಿ ಪ್ರಮುಖವಾಗಿ ದಿನೋಪಿಕೆಶನ್ ಸೇರಿದಂತೆ ಹಲವಾರು ಪ್ರಕಾರಗಳು ಕೂಡ ಇದ್ದವು ಬಿಎಸ್ ಯಡಿಯೂರಪ್ಪ ರವರು ಕೋರ್ಟ್ ಕಟ್ಟಕಟ್ಟೆಯ ಮುಂದೆ ನಿಲ್ಲುವ ಸಂದರ್ಭ ಕೂಡ ಎದುರಾಗಿತ್ತು ಅನಿವಾರ್ಯವಾಗಿ ರಾಜೀನಾಮೆಯನ್ನು ಕೂಡ ಸಲ್ಲಿಸಿದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ಜೈಲು ಸೇರುವಂಥಾಗುತ್ತದೆ ಇತ್ತ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಪರ್ವ ಶುರುವಾಗುತ್ತಿರುತ್ತದೆ ಬಿಎಸ್ ಯಡಿಯೂರಪ್ಪನವರಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತದೆ ಕೊನೆಗೆ ಬಿಜೆಪಿಗೆ ಗುಡ್ ಬೈ ಹೇಳಿದ ಬಿಎಸ್ ಯಡಿಯೂರಪ್ಪರವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮದೇ ಕೆಜೆಪಿ ಪಕ್ಷ ಒಂದು ಸ್ಥಾಪಿಸಿದರು 2013ರಲ್ಲಿ ನಡೆದ ಮರು ಚುನಾವಣೆಯಲ್ಲಿ ಕೆಜೆಪಿ ಪಕ್ಷ ಅಂತ ಹೇಳಿಕೊಳ್ಳಲು ಸಾಧನೆಯನ್ನ ಮಾಡದೇ ಹೋದರು ಕೂಡ ಬಿಜೆಪಿಗೆ ಸರಿಯಾದ ಪೆಟ್ಟೇ ನೀಡಿತ್ತು ಕೆಜೆಪಿ ಬಿಜೆಪಿ ಒಳಜಗಳದಿಂದ ಕಾಂಗ್ರೆಸ್ ಬಹುಮತದೊಂದಿಗೆ ಆಯ್ಕೆಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯು ಕೂಡ ಆದರೂ ನಂತರ 2014ರಲ್ಲಿ  ಕೇಂದ್ರ ಬಿಜೆಪಿಯ ಪಡಸಾಲೆಯಲ್ಲಿ ಹಲವಾರು ಬದಲಾವಣೆಗಳು ಗೋಚರಿಸತೊಡಗಿದ್ವು ಅದು ಏನಿದ್ದರೂ ನರೇಂದ್ರ ಮೋದಿಯ ಹವಾ ಹೆಚ್ಚಾಗಿಯೇ ಕಾಣುತ್ತಿತ್ತು ಅದರಲ್ಲೂ ಬಿಎಸ್ ಯಡಿಯೂರಪ್ಪಗೆ ಅತ್ಯಂತ ಆಪ್ತರಾಗಿರುವ ನರೇಂದ್ರ ಮೋದಿಗೆ ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಇಲ್ಲ ಎನ್ನುವುದು ಮನವರಿಕೆಯಾಗಿ ಹೋಗಿತ್ತು ಕೂಡಲೇ ಮಾತುಕತೆಯಾಗಿ ಬಿಎಸ್ ಯಡಿಯೂರಪ್ಪರವರನ್ನು ಮರಳಿ ಬಿಜೆಪಿಗೆ ಬರುವಲ್ಲಿ ಮನವೊಲಿಸಿದ್ರು ಎರಡು ಸಾವಿರದ ಹದಿನಾಲ್ಕರಲ್ಲಿ ಮರಳಿ ಬಿಜೆಪಿ ಪ್ರವೇಶಿಸಿದ ಬಿಎಸ್ ಯಡಿಯೂರಪ್ಪ ನಂತರ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ವಿರೋಧ ಪಕ್ಷದ ನಾಯಕ ರಾಗಿ ಆಯ್ಕೆ ಕೂಡಾ ಆದರೂ ಎರಡು ಸಾವಿರದ ಹದಿನೆಂಟರಲ್ಲಿ ನಡೆದ ಮರು ಚುನಾವಣೆಯ ಸಂದರ್ಭದಲ್ಲಿ ನೂರ ಮೂರು ಸೀಟು ಗೆಲ್ಲುವ ಮೂಲಕ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿತ್ತು.

ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ರಚಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು ನಂತರ ಕುಮಾರಸ್ವಾಮಿಯ ಸರ್ಕಾರವನ್ನು ಉರುಳಿಸಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಯು ಕೂಡ ಆದರೂ ನಂತರ ಅನಿವಾರ್ಯ ಕಾರಣಗಳಿಂದ ರಾಜೀನಾಮೆಯನ್ನು ಕೂಡ ಸಲ್ಲಿಸಿದ್ರು ಇನ್ನು ಉಡುಪಿ ಚಿಕ್ಕಮಗಳೂರು ಸಂಸದರಾಗಿದ್ದ ಶೋಭಾ ಕರಂದ್ಲಾಜೆಯನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲು ನರೇಂದ್ರ ಮೋದಿ ಒಪ್ಪಿಗೆ ಕೂಡ ಕೊಟ್ಟರು.

 ಎರಡು ಸಾವಿರದ ಹದಿನಾಲ್ಕರಲ್ಲಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಲಕ್ಷ ಹತೊಂಬತ್ತು ಸಾವಿರ ಮತಗಳ ಅಂತರದಿಂದ ವಿಜೇತರಾಗಿದ್ದ ಸಂಸದೆಯನ್ನು ಕೇಂದ್ರ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆಯಾಗಿ ಮಂತ್ರಿಯೂ ಕೂಡ ಆದರೂ ಪ್ರಸ್ತುತ ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲುವು ದಾಖಲಿಸುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ ಇಂದಿಗೂ ರಾಜ್ಯ ಹಾಗೂ ರಾಷ್ಟ್ರ ರಾಜ ಕಾರಣದಲ್ಲೂ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ...

ಒಟ್ಟಿನಲ್ಲಿ ಶೋಭಾ ಕರಂದ್ಲಾಜೆರವರ ರಾಜಕೀಯ ಜೀವನದ  ಸಾಕಷ್ಟು ಏಳು ಬೀಳುಗಳ ನಡುವೆ ನಮಗೆ ಅನ್ನಿಸಿದ್ದು ಪವರ್ ಪವರ್ರೆ .....!!!!

-Srinivas M.G.,

varthajala.in , varthajala.live

ದಯಮಾಡಿ ವಾರ್ತಾಜಾಲ ಚಾನೆಲ್‌ನ Community  ಪೇಜ್‌ಗೆ ಹೋಗಿ ವೋಟ್ ಮಾಡಿ...


ADVERTISEMENT



Post a Comment

0 Comments

Ad Code

Responsive Advertisement