Ticker

6/recent/ticker-posts

Ad Code

Responsive Advertisement

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ 54 ನೇ ಅಧ್ಯಕ್ಷರಾಗಿ ಸಿಎ ದಿವ್ಯಾ ರಾಘವೇಂದ್ರ

 ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯ 54 ನೇ ಅಧ್ಯಕ್ಷರಾಗಿ  ಸಿಎ ದಿವ್ಯಾ ರಾಘವೇಂದ್ರ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಅಧ್ಯಕ್ಷ ಸಿಎ  ಶ್ರೀನಿವಾಸ್ ಟಿ‌ ಅವರು ಸಿಎ ದಿವ್ಯ ರಾಘವೇಂದ್ರ ಅವರಿಗೆ ಅಧಿಕಾರ  ಹಸ್ತಾಂತರ ಮಾಡಿದರು.

ಉಪಾಧ್ಯಕ್ಷರಾಗಿ ಸಿಎ ಪ್ರಮೋದ್ ಆರ್ ಹೆಗಡೆ, ಕಾರ್ಯದರ್ಶಿಯಾಗಿ ಸಿಎ ಮಂಜುನಾಥ್ ಎಂ ಹಲ್ಲೂರ್ ಹಾಗೂ ಖಜಾಂಚಿಯಾಗಿ ಸಿಎ ಕವಿತಾ ಪರಮೇಶ್ ಅಧಿಕಾರ ಸ್ವೀಕರಿಸಿದರು.

22 ನೆಯ ವಯಸ್ಸಿಗೆ ಚಾರ್ಟರ್ಡ್ ಅಕೌಂಟೆಂಟ್ ಪದವಿ ಪೂರ್ಣಗೊಳಿಸಿದ ಹಾಗೂ ಸ್ವಂತ ಉದ್ಯಮ ನಡೆಸುತ್ತಿರುವ "ಸಿಎ ದಿವ್ಯಾ ರಾಘವೇಂದ್ರ"

 ಅವರು ಹೊಸ ಜವಾಬ್ದಾರಿ ಹೊರುವ ಮೂಲಕ ಮಹಿಳಾ ಸಮುದಾಯದಲ್ಲಿ ‌ಆತ್ಮವಿಶ್ವಾಸ ತುಂಬಿದ್ದಾರೆ ಎಂದು ನಿರ್ಗಮಿತ‌ ಅಧ್ಯಕ್ಷ ಸಿಎ ಶ್ರೀನಿವಾಸ್ ಟಿ ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments

Ad Code

Responsive Advertisement