ಬೆಂಗಳೂರು : ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 428ನೇ ಜನ್ಮದಿನೋತ್ಸವದ ಪ್ರಯುಕ್ತ ಫೆಬ್ರವರಿ 26, ಭಾನುವಾರ ಬೆಳಗ್ಗೆ ಗುರುಗಳ ಬೃಂದಾವನಕ್ಕೆ ಕ್ಷೀರಾಭಿಷೇಕ, ಫಲ-ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು
. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀನಗರದ ಸಹೋದರಿಯರಾದ ಶ್ರೀಮತಿ ರಂಜಿತಾ ಪ್ರಸಾದ್, ಶ್ರೀಮತಿ ಭಾವನಾ ಮೂರ್ತಿ ಮತ್ತು ಸಂಗಡಿಗರಿಂದ "ದಾಸರ ಪದಗಳ ಗಾಯನ" ಕಾರ್ಯಕ್ರಮ ನಡೆಯಿತು. ನಂತರ ಅಷ್ಟಾವಧಾನ, ರಥೋತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.

0 Comments