ಪಂಜೆ ಮಂಗೇಶರಾಯರ ಹೆಡ್ಡಧೂಮನ ಕಥೆ ಆಧಾರಿತ ಹೆಡ್ಡಾಯಣ ಎಂಬ ಮಕ್ಕಳ ನಾಟಕ ಪ್ರದರ್ಶನ ಮಾರ್ಚ್ 11ರಂದು ನಯನ ರಂಗಮಂದಿರದಲ್ಲಿ ಪ್ರದರ್ಶನವಾಗಲಿದೆ.
ಸೃಷ್ಟಿ ಕಲಾ ಮಂದಿರದ ಬಾಲ ಕಲಾವಿದರು ಅಭಿನಯಿಸಲಿರುವ ಈ ನಾಟಕದ ಭಿತ್ತಿಚಿತ್ರಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್ ಅವರು ಬಿಡುಗಡೆ ಮಾಡಿದರು.
ನಾಟಕವನ್ನು ಬಿ.ವಿ. ಕಾರಂತ್ ಅವರು ರಚಿಸಿದ್ದು, ಖ್ಯಾತ ನಿರ್ದೇಶಕಿ ಶ್ರೀಮತಿ ರೂಪಾ ಮೋಹನ್ ಅವರು ನಿರ್ದೇಶಿಸಿದ್ದಾರೆ.

0 Comments